ರಾಜಕೀಯ ಸುದ್ದಿ

ಬಾಂಗ್ಲಾದಲ್ಲಿ ಹಿಂದೂಗಳ ಕಗ್ಗೊಲೆ: ಅಲ್ಪ ಸಂಖ್ಯಾತರೆ ಟಾರ್ಗೆಟ್!

Share It

ಢಾಕಾ: ನೆರೆ ದೇಶ ಬಾಂಗ್ಲಾ ಅಕ್ಷರಶಃ ರಣರಂಗವಾಗಿ ಮಾರ್ಪಡುತ್ತಿದೆ. ನಿರಂತರ ಪ್ರತಿಭಟನೆ ಹಾಗೂ ದಾಳಿಗಳಿಂದ ಅಲ್ಲಿನ ಜನರು ತತ್ತರಿಸಿದ್ದಾರೆ. ಅದರಲ್ಲೂ ಹಿಂದೂ ಅಲ್ಪ ಸಂಖ್ಯಾತರು ಗುರಿಯಾಗಿಸಿಕೊಂಡು ಹತ್ಯೆ ಹಾಗೂ ಅತ್ಯಾಚಾರಗಳು ನಡೆಯುತ್ತಿವೆ. ಈವರೆಗೆ ಕನಿಷ್ಠ 232 ಜನರು ಸಾವಿಗೀಡಾಗಿದ್ದಾರೆ ಎಂದು ಸುದ್ದಿ ಮೂಲಗಳಿಂದ ತಿಳಿದುಬಂದಿದೆ.

ತೀವ್ರ ಪ್ರತಿಭಟನೆಯಿಂದಾಗಿ ಹಸೀನಾ ಸರ್ಕಾರ ಪತನವಾಯಿತು. ಬಳಿಕ ಆ. 5 ರಂದು ಶೇಕ್ ಹಸೀನಾ ರಾಜೀನಾಮೆ ನೀಡಿ ಭಾರತಕ್ಕೆ ಬಂದರು. ಮೂರು ವಾರಗಳಾದರು ಅಲ್ಲಿ ಇನ್ನು ಶಾಂತಿ ನೆಲೆಸಿಲ್ಲ . ಹೊಸ ಹಂಗಾಮಿ ಪ್ರಧಾನಿ ಸಹ ಅಧಿಕಾರವನ್ನು ಸ್ವೀಕರಿಸಿದ್ದಾರೆ.

ಬಾಂಗ್ಲಾ ಮಾದ್ಯಮಗಳು ಹೇಳುವಂತೆ “ಒಟ್ಟು 469 ಜನರು ಪ್ರತಿಭಟನೆ ಹಾಗೂ ಗಳಭೆಗಳಿಂದ ಸತ್ತಿದ್ದಾರೆ. ಹಿಂದೂಗಳ ಮೇಲೆ ತೀವ್ರ ದೌರ್ಜನ್ಯ ನಡೆಸಲಾಗುತ್ತಿದೆ. ಅಲ್ಲಿಯ ಜನರು ಅಕ್ರಮವಾಗಿ ಬಾಂಗ್ಲಾ ದೇಶವನ್ನು ತೊರೆಯಲು ಪ್ರಯತ್ನಗಳನ್ನೂ ಮಾಡುತ್ತಿದ್ದಾರೆ. ಅವರನ್ನು ಬಿಎಸ್‌ಎಫ್‌ ತಡೆದಿದೆ” ಎಂದು ಹೇಳಿದಿದೆ.

ಅಲ್ಲದೇ ಶೇಕ್ ಹಸೀನಾ ಅವರು ಅನೇಕ ಕ್ರಿಮಿನಲ್ ಮೊಕದ್ದಮೆ ಗಳನ್ನು ಎದುರಿಸಬೇಕಿದ್ದು. ಭಾರತ ಅವರಿಗೆ ಆಶ್ರಯ ನೀಡಿರುವುದು ಅಕ್ಕ ಪಕ್ಕದ ದೇಶಗಳ ಬಾಂಧವ್ಯಕ್ಕೆ ಮುಳುವಾಗಲಿದೆ ಎಂದು ಅಲ್ಲಿನ ಮಾಧ್ಯಮ ಹೇಳಿದೆ. ಹಿಂದೂ ಗಳ ದೇವಾಲಯಗಳು, ಅವರ ವ್ಯಾಪಾರ ಸ್ಥಳಗಳ ಮೇಲೆ ಮುಸ್ಲಿಂ ದಾಳಿ ನಡೆಸುತ್ತಿದ್ದಾರೆ. ಓರ್ವ ಶಿಕ್ಷಕಿ ಹಾಗೂ 45 ಮಂದಿ ಸಾವನ್ನಪ್ಪಿದ್ದಾರೆ.

ಮುಹಮ್ಮದ್ ಯೂನಸ್ ಸದ್ಯ ಬಾಂಗ್ಲಾ ದ ಪ್ರಧಾನಿಯಾಗಿದ್ದು 90 ದಿನಗಳೊಳಗೆ ಚುನಾವಣೆಯನ್ನು ನಡೆಸಬೇಕಿದೆ. ಈ ಬಗ್ಗೆ ಇನ್ನೂ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.


Share It

You cannot copy content of this page