ಬೆಂಗಳೂರು: ನಟ ಸುದೀಪ್ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ರಣಹದ್ದುಗಳ ಬಗ್ಗೆ ತಪ್ಪು ಮಾಹಿತಿ ಹಂಚಿಕೊAಡ ಬೆನ್ನಲ್ಲೆ ಕಾರ್ಯಕ್ರಮದ ಮುಖ್ಯಸ್ಥರಿಗೆ ನೊಟೀಸ್ ನೀಡಲಾಗಿದೆ.
ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಮಾತನಾಡುವಾಗ ಸುದೀಪ್ ರಣಹದ್ದುಗಳ ತರಹ ಹೊಂಚುಹಾಕಿ ಭೇಟೆಯಾಡಬೇಕು ಎಂದಿದ್ದರು. ಈ ಹೇಳಿಕೆ ತಪ್ಪು ಅರ್ಥದಿಂದ ಕೂಡಿದೆ ಎಂದು ಕರ್ನಾಟಕ ರಣಹದ್ದುಗಳ ರಕ್ಷಣಾ ಸಮಿತಿ ದೂರು ನೀಡಿತ್ತು.
ಈ ಸಂಬAಧ ಕರ‍್ಸ್ ಕನ್ನಡದ ಬಿಗ್‌ಬಾಸ್ ಕಾರ್ಯಕ್ರಮದ ಮುಖ್ಯಸ್ಥರಿಗೆ ಬೆಂಗಳೂರು ದಕ್ಷಿಣ ಉಪ ಅರಣ್ಯ ಸಂರಕ್ಷಣಾಧಿಕಾರಿ ನೊಟೀಸ್ ನೀಡಿದ್ದು, ನೀವು ನೀಡಿರುವ ಮಾಹಿತಿಗೆ
ಮುಂದಿನ ಸಂಚಿಕೆಯಲ್ಲಿ ಸ್ಪಷ್ಟೀಕರಣ ನೀಡಬೇಕು ಎಂದು ಸೂಚನೆ ನೀಡಿದ್ದಾರೆ. ಅಂತೆಯೇ ಕಾರ್ಯಕ್ರಮದಲ್ಲಿ ರಣಹದ್ದುಗಳ ಬಗ್ಗೆ ಮಾಹಿತಿ ಒದಗಿಸುವಂತೆಯೂ ಸೂಚಿಸಿದ್ದಾರೆ.

