ವಿದ್ಯೆ ಜತೆಗೆ ನೈತಿಕತೆ, ಪ್ರಾಮಾಣಿಕತೆ ಬೆಳೆಸಿಕೊಳ್ಳಿ ಶಾಸಕ ಶರತ್ ಬಚ್ಚೇಗೌಡ
ಹೊಸಕೋಟೆ : ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ವಿದ್ಯೆಯ ಜತೆಗೆ ನೈತಿಕತೆ ಮತ್ತು ಪ್ರಾಮಾಣಿಕತೆ ಬೆಳೆಸಿಕೊಳ್ಳಬೇಕು. ಈ ಮೌಲ್ಯಗಳು ಜೀವನವನ್ನು ಮತ್ತಷ್ಟು ಉಜ್ವಲಗೊಳಿಸಲು ಸಹಕಾರಿಯಾಗಲಿವೆ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.
ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೀನಿಯರ್ಸ್ ಫಾರ್ ಚೇಂಜ್ ಸಂಸ್ಥೆ ಹಾಗೂ ಕೊಹಿಸಿಟಿ ಸಂಸ್ಥೆ ಸಹಯೋ ಗದಲ್ಲಿ ನಿರ್ಮಿಸಿರುವ ನೂತನ ಕಂಪ್ಯೂಟರ್ ಲ್ಯಾಬ್ ಉದ್ಘಾಟಿಸಿ ಅವರು ಮಾತನಾಡಿದರು.
ಸೀನಿಯರ್ಸ್ ಫಾರ್ ಚೇಂಜ್ ಸಂಸ್ಥೆಸರ ಕಾರಿ ಪ್ರಥಮ ದರ್ಜೆ ಕಾಲೇಜಿಗೆ 35 ಕಂಪ್ಯೂ ಟರ್ ಒಳಗೊಂಡ ನೂತನ ಲ್ಯಾಬ್ ನಿರ್ಮಾಣ ಮಾಡಿಕೊಟ್ಟಿದೆ. ಸರಕಾರಿ ಬಾಲಕಿದುರ ಪದವಿ ಪೂರ್ವ ಕಾಲೇಜಿನಲ್ಲಿ 30 ಕಂಪ್ಯೂಟರ್ಹಾಗೂ 20 ಲ್ಯಾಪ್ಟಾಪ್ ಸೇರಿ ಒಟ್ಟು ಸುಮಾರು 40 ಲಕ್ಷ ಮೌಲ್ಯದ ಕಂಪ್ಯೂಟರ್ ಹಾಗೂ ಲ್ಯಾಪ್ ಟಾಪ್‌ಗಳನ್ನು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅನುಕೂಲವಾಗಲೆಂದು ನೀಡಿದೆ.

ಈ ವ್ಯವಸ್ಥೆ ಯಿಂದ ಕಾಲೇಜಿನಲ್ಲಿ ಶಿಕ್ಷಣ ಪಡೆಯಲು ಬರುವ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆಉತ್ತಮ ತಂತ್ರಜ್ಞಾನ ಹೊಂದಲು ಸಹಕಾರಿ ಯಾಗಿದೆ. ಅಲ್ಲದೆ, ಸ್ವರ್ಧಾತ್ಮಕ ಯುಗದಲ್ಲಿ ನಗರದ ವಿದ್ಯಾರ್ಥಿಗಳ ಜತೆ ಸ್ಪರ್ಧೆ ನೀಡಲು ಸಾಧ್ಯವಾಗಲಿದೆ ಎಂದರು.
ಸ್ಪರ್ಧೆ ನೀಡಲು ನಾವು ಸಮರ್ಥರು ಎಂಬ ಭಾವನೆಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳ ಬೇಕು. ಸಿಕ್ಕಿರುವ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಂಡು ತಮ್ಮ ಜೀವನವನ್ನು ರೂಪಿಸಿಕೊಳ್ಳ ಬೇಕು. 6 ಕೋಟಿ ವೆಚ್ಚದಲ್ಲಿ ಕಾಲೇಜಿನ ನಾನಾ ಕಾಮಗಾರಿಗಳು ನಡೆಯುತ್ತಿವೆ. ಮೇ 5ರಂದು ಕಾಲೇಜಿನಲ್ಲಿ ಉದ್ಯೋಗ ಮೇಳ ಹಮ್ಮಿಕೊಂ ಡಿದ್ದು, ಪದವಿ ಪಡೆದವರಿಗೆ ಸಹಾಯಕವಾ ಗಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸೀನಿಯರ್ ಫಾರ್ ಚೇಂಚ್ ಸಂಸ್ಥೆಯ ಚೇರನ್ ಅತುಲ್‌ಸಿನ್ಹಾ ಕಾರ್ಯದರ್ಶಿ ಪ್ರದೀಪ್ ಶ್ರೀವಾಸ್ತವ್, ನಾರಾ ಯಣಸ್ವಾಮಿ, ಸಂಜಯ್ ಶರ್ಮ, ಮನೋ ಹರ್, ಯೋಜನಾ ಪ್ರಾಧಿಕಾರದ ನಿರ್ದೇಶಕ ಡಾ.ಎಚ್.ಎಂ. ಸುಬ್ಬರಾಜ್, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಸುರೇಶ್, ಅಂಜು, ಮುಖಂಡರಾದ ಆನಂದ್, ಕೃಷ್ಣಮೂರ್ತಿ, ಪ್ರಾಂಶುಪಾಲ ಡಾ. ರಾಮಲಿಂಗಪ್ಪ ಟಿ. ಬೇಗೂರು, ಮತ್ತಿತರರು ಹಾಜರಿದ್ದರು.
ಕೋಟ್ 1
ಕಾಲೇಜಿನಲ್ಲಿ ಪ್ರತಿ ಬಾರಿ ಕಾಠ್ಯಕ್ರಮವನ್ನು ಚಿಕ್ಕ ಕೊಠಡಿಯಲ್ಲಿ ಆಯೋಜಿಸುತ್ತಿದ್ದು, ಇದನ್ನು ಗಮನಿಸಿದ್ದೇನೆ. ಸರಕಾರದಿಂದ ಅನುದಾನ ಪಡೆದು ಆಡಿಟೋರಿಯಂ ನಿರ್ಮಾಣ ಮಾಡಲಾಗುವುದು.
- ಶರತ್ ಬಚ್ಚೇಗೌಡ, ಶಾಸಕ


