ರಾಜಕೀಯ ಸುದ್ದಿ

ಮೋದಿ ಸರಕಾರ ಯಾವುದೂ ಕಡಿಮೆ ಮಾಡಿಲ್ಲ, ಜಾಸ್ತಿಯೇ ಮಾಡಿದೆ

Share It


ಕಲಬುರಗಿ: ಮೋದಿ ಸರ್ಕಾರ ಏನು ಕಡಿಮೆ ಮಾಡಿಲ್ಲ ಜಾಸ್ತಿನೇ ಮಾಡಿದೆ.‌ ಮೋದಿ ಸರ್ಕಾರ ಜಾಸ್ತಿ ಮಾಡಿರೋದ್ರ ಬಗ್ಗೆ ಚರ್ಚೆ ಆಗಬೇಕು ಎನ್ನುವ ಮೂಲಕ ಮುಖ್ಯಮಂತ್ರಿ ಸಲಹೆಗಾರ, ಶಾಸಕ ಬಿ ಆರ್ ಪಾಟೀಲ್ ಅವರು ಪೆಟ್ರೋಲ್, ಡಿಸೆಲ್ ದರ ಏರಿಕೆ ಸಮರ್ಥಿಸಿಕೊಂಡಿದ್ದಾರೆ.

ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಡಿ ದೇಶದಲ್ಲಿ ಪೆಟ್ರೋಲ್ ಡಿಸೆಲ್ ಬೆಲೆ ಏರಿಕೆ ಆದಾಗ ಚರ್ಚೆ ಆಗಿಲ್ಲ. ಮೋದಿ ಸರ್ಕಾರದ ಬೆಲೆ ಏರಿಕೆ ಬಗ್ಗೆಯೂ ಕೂಡ ಮಾತಾಡ್ಬೇಕು ಅಲ್ವಾ…? ರಾಜ್ಯ ಸರ್ಕಾರ ಪೆಟ್ರೋಲ್, ಡಿಸೇಲ್ ದರ ಏರಿಕೆ ವಿಚಾರ ಸಿಎಂ‌ ಸಿದ್ದರಾಮಯ್ಯ ಅವರೊಂದಿಗೆ ಮಾತಾಡ್ತೆನೆ ಎಂದರು.

ಇದೆ ವೇಳೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ರೈತರಿಂದ ಸರ್ಕಾರದಿಂದ ವಿಮೆ‌ ಕಟ್ಟಿಸಿಕೊಂಡು ಅದಾನಿ ಕಂಪೆನಿ ಲೂಟಿ ಮಾಡ್ತಿದ್ದಾರೆ. ಬೆಳೆ ವಿಮೆ ಕಂಪೆನಿಗಳು ಮನಸ್ಸಿಗೆ ಬಂದ ಹಾಗೆ ಕೊಡ್ತಿದ್ದವು. ಬೆಳೆ ವಿಮೆ ಸಂಬಂಧಿಸಿದಂತೆ ಕಂದಾಯ ಅಧಿಕಾರಿಗಳ ಜೊತೆ ಮೀಟಿಂಗ್ ಮಾಡಿದ್ದೆ. ಹಾಗಾಗಿ ಈ ಬಾರಿ ಆಳಂದ ತಾಲ್ಲೂಕಿನ ರೈತರಿಗೆ ಅತಿ ಹೆಚ್ಚು ವಿಮೆ ಬಂದಿದೆ. ಕಲಬುರಗಿ ಜಿಲ್ಲೆಯಲ್ಲಿ 185 ಕೋಟಿ ಬೆಳೆ ವಿಮೆ ಪರಿಹಾರ ಬಂದಿದೆ. ಆಳಂದ ತಾಲ್ಲೂಕಿಗೆ 82 ಕೋಟಿ 88 ಲಕ್ಷ ಬಂದಿದೆ.‌ ಇದು ನಮ್ಮ ಪ್ರಯತ್ನದ ಫಲದಿಂದ ರೈತರಿಗೆ ಸಿಕ್ಕ ಪರಿಹಾರ. ಇದು ಕ್ಲೈಮ್ ಆದ ಮೇಲೆ ಕಂಪೆನಿಯವರು ಕಾಲ್ಕಿತ್ತುಕೊಂಡು ಹೋಗಿದ್ದಾರೆ. ಇವಾಗ ಇಫ್ಕೋ ಕಂಪೆನಿ ಬಂದಿದೆ ಅದರ ಮೇಲೆ‌ ನಮಗೆ ಸಂಪೂರ್ಣ ನಂಬಿಕೆ ಇದೆ.

ಉದ್ದು ಹೆಸರು ಸೋಯಾಬಿನ್ ಗೆ ಬೆಳೆ ವಿಮೆ‌ ಪರಿಹಾರ ಬಂದಿಲ್ಲ. ಉದ್ದು ಹೆಸರಿಗೆ ಯಾಕೆ ಪರಿಹಾರ ಕೊಟ್ಟಿಲ್ಲ ಅಂತಾ ಗೋತ್ತಾಗ್ತಿಲ್ಲ. ಆಳಂದ ತಾಲ್ಲೂಕಿನ ಹದನೂರ ಮತ್ತು ಖಜೂರಿ ಗ್ರಾಮದ ರೈತರಿಗೆ ಬೆಳೆ ಪರಿಹಾರ ಸಿಕ್ಕಿಲ್ಲ. ಅಕ್ಕ ಪಕ್ಕದ ಪಂಚಾಯ್ತಿ ಊರಿನ ರೈತರಿಗೆ ಪರಿಹಾರ ಬಂದಿದೆ. ಅಧಿಕಾರಿಗಳನ್ನ ಕೇಳಿದ್ರೆ ಉಡಾಫೆ ಉತ್ತರ ಕೊಡ್ತಿದ್ದಾರೆ. ಅಧಿಕಾರಿಗಳನ್ನ ಬಿಡೋದಿಲ್ಲ ನಾನು ಮಣಿಸ್ತೆನೆ. ಸರ್ಕಾರವೆ ಬರಗಾಲ ಅಂತಾ ಘೋಷಣೆ ಮಾಡಿದ್ರು ವಿಮೆ ಪರಿಹಾರ ಸಿಕ್ಕಿಲ್ಲ ಎಂದರು ಅಸಮಾಧಾನ ಹೊರಹಾಕಿದರು.

ಅಕ್ಷರ ಅವಿಷ್ಕಾರ ನಮ್ಮ‌ ಗಮನಕ್ಕೆ‌ ತಂದಿಲ್ಲ: ಅಕ್ಷರ ಅವಿಷ್ಕಾರ ಯಾರು ತಂದಿದ್ದಾರೋ ಏನು ಗೋತ್ತಿಲ್ಲ. ನಮ್ಮ ಶಾಸಕರನ್ನ ಯಾರನ್ನು ಕೇಳಿಲ್ಲ ಏನಿಲ್ಲ ಇವಾಗ ಅಕ್ಷರ ಅವಿಷ್ಕಾರ ಜಾರಿಗೆ ತಂದಿದ್ದಾರೆ. ಅಕ್ಷರ ಅವಿಷ್ಕಾರದಿಂದ ಅಂಗನವಾಡಿ ಕಾರ್ಯಕರ್ತೆಯರು ಬೀದಿಗೆ ಬರ್ತಾರೆ. ಅಂಗನವಾಡಿ ಕಾರ್ಯಕರ್ತೆಯರು ಚುನಾವಣೆ ಸಂಧರ್ಭದಲ್ಲಿ ಬಹಳ ಸಹಾಯ ಮಾಡಿದ್ದಾರೆ. ಈ ವಿಚಾರ ನಾನು ಮುಖ್ಯಮಂತ್ರಿ ಜೊತೆ ಚರ್ಚೆ ಮಾಡ್ತೆನೆ. ಅಂಗನವಾಡಿ ಕಾರ್ಯಕರ್ತರಿಗೆ ಅನ್ಯಾಯ ಆಗದಂತೆ ನೋಡಿಕೊಳ್ಳ್ತೆನೆ ಎಂದರು.


Share It

You cannot copy content of this page