ಬೆಂಗಳೂರು: ಅಮೇರಿಕದ ತೆರಿಗೆ ಒಪ್ಪಂದ ಮತ್ತು ಲೋಕಸಭೆಯಲ್ಲಿನ ವಿಪಕ್ಷಗಳ ಟೀಕೆಯ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಇಂದಿನಿಂದ ಎರಡು ದಿನಗಳ ಮಲೇಷ್ಯಾ ಪ್ರವಾಸ ಕೈಗೊಂಡಿದ್ದಾರೆ.
ಮಲೇಷ್ಯಾ ಪ್ರವಾಸದ ವೇಳೆ ಮೋದಿ ಅವರು, ಅಲ್ಲಿನ ಅಧ್ಯಕ್ಷರ ಜತೆಗೆ ಕೆಲವು ರಾಜತಾಂತ್ರಿಕ ಒಪ್ಪಂದ ಮಾಡಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ವ್ಯಾಪಾರ ಸಂಬಂಧಿ ಕೆಲವು ಒಪ್ಪಂದಗಳಿಗೆ ಉಭಯ ದೇಶದ ಪ್ರಧಾನಿಗಳು ಸಹಿ ಹಾಕಲಿದ್ದಾರೆ.
ಮೋದಿ ಅವರ ವಿರುದ್ಧ ವಿಪಕ್ಷಗಳು ಟೀಕೆಗಳ ಸುರಿಮಳೆಗೈದ ಬೆನ್ನಲ್ಲೇ ಅವರು ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಮಾತನಾಡಲು ಲೋಕಸಭೆಗೆ ಆಗಮಿಸಿರಲಿಲ್ಲ. ಇದೀಗ ಮಲೇಷ್ಯಾ ಪ್ರವಾಸ ಕೈಗೊಂಡಿರುವುದನ್ನು ವಿಪಕ್ಷಗಳು ಟೀಕಿಸಿವೆ.

