ರಾಜಕೀಯ ಸುದ್ದಿ

ಮೂಡಾ ಪ್ರಕರಣ: ಸಿಎಂ ಸಿದ್ದರಾಮಯ್ಯ ಮತ್ತು ಪತ್ನಿಗೆ ಬಿಗ್ ರಿಲೀಫ್: ರಾಜಕೀಯವಾಗಿ ಇಡಿ ಬಳಕೆಗೆ ಸುಪ್ರೀಂ ಗರಂ

Waqf Act: Petitions filed in Supreme Court challenging its validity; hearing likely on 16th
Share It

ಬೆಂಗಳೂರು: ಮೂಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪತ್ನಿಗೆ ಇಡಿ ನೀಡಿದ್ದ ನೊಟೀಸ್‌ಗೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶವನ್ನು ಎತ್ತಿಹಿಡಿದಿರುವ ಸುಪ್ರೀಂ ಕೋರ್ಟ್ ರಾಜಕೀಯವಾಗಿ ಇಡಿ ಬಳಕೆಯಾಗುತ್ತಿರುವ ಕುರಿತು ಬೇಸರ ವ್ಯಕ್ತಪಡಿಸಿದೆ.

ಈ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಮೂಡಾ ಹಗರಣ ವಿಚಾರದಲ್ಲಿ ಬಹುದೊಡ್ಡ ರಿಲೀಫ್ ಸಿಕ್ಕಿದಂತಾಗಿದ್ದು, ಅದನ್ನೇ ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿದ್ದ ಬಿಜೆಪಿಗೆ ಇದರಿಂದ ಹಿನ್ನಡೆಯಾದಂತಾಗಿದೆ. ಸಿಎಂ ಪತ್ನಿ ಪಾರ್ವತಿ ಅವರಿಗೆ ಇಡಿ ನೀಡಿದ್ದ ಸಮನ್ಸ್‌ ಅನ್ನು ಹೈಕೋರ್ಟ್ ಮಾರ್ಚ್ 7 ರಂದು ರದ್ದುಗೊಳಿಸಿತ್ತು.

ಇದನ್ನು ಪ್ರಶ್ನೆ ಮಾಡಿದ್ದ ಇಡಿ ಸುಪ್ರೀಂ ಕೋರ್ಟ್‌ನಲ್ಲಿ ಹೈಕೋರ್ಟ್ ಆದೇಶದ ವಿರುದ್ಧ ಅರ್ಜಿ ಸಲ್ಲಿಸಿದ್ದರು. ಸುಪ್ರಿಂ ಮುಖ್ಯನ್ಯಾಯಮೂರ್ತಿ ಬಿ.ಆರ್.ಗವಾಯಿ ಮತ್ತು ನ್ಯಾ. ಕೆ.ವಿನೋದ್ ಚಂದ್ರ ನೇತೃತ್ವದ ಪೀಠದ ಮುಂದೆ ಈ ವಿಚಾರ ವಿಚಾರಣೆಗೆ ಬಂದಿತ್ತು. ಕೇಂದ್ರ ಸರಕಾರದ ಸಂಸ್ಥೆ ಈ ಅರ್ಜಿ ಸಲ್ಲಿರುವುದಕ್ಕೆ ಪೀಠ ಆಕ್ಷೇಪ ಪಡಿಸಿ, ಈ ಅರ್ಜಿ ವಿಚಾರಣೆಗೆ ತೆಗೆದುಕೊಳ್ಳಲು ಇಚ್ಛಿಸುವುದಿಲ್ಲ ಎಂದು ಅಭಿಪ್ರಾಯಪಟ್ಟಿತು.


Share It

You cannot copy content of this page