ಉಪಯುಕ್ತ ಸುದ್ದಿ

ಭೂಮಿಯಿಂದ ದೂರವಾಗುತ್ತಿರುವ ಚಂದಮಾವ: 25 ಗಂಟೆಗೆ ಹೆಚ್ಚಲಿದೆ ಭೂಮಿಯ ಕಾಲಾವಧಿ

Share It

ಚಂದ್ರನು ಭೂಮಿಯ ಉಪಗ್ರಹವಾಗಿದ್ದು, ಶತಮಾನಗಳಿಂದ ಆಕಾಶ ಕಾಯವಾಗಿರುವ ಚಂದಿರ ಅನೇಕ ಕಾವ್ಯಗಳಲ್ಲಿ ವಿವಿಧ ಲೇಖಕರು ಅವನ ಸೊಬಗನ್ನು ರಂಜನೀಯವಾಗಿ ಕಟ್ಟಿಕೊಟ್ಟಿದ್ದಾರೆ. ಮಕ್ಕಳಿಗಂತೂ ಮಾವನಾಗಿ ಚಂದಿರ ಕಂಡಿದ್ದಾನೆ. ಆದರೆ, ಇತ್ತೀಚೆಗೆ ಭೂಮಿಯ ನೈಸರ್ಗಿಕ ಉಪಗ್ರಹ ಚಂದಿರ ಭೂಮಿಯಿಂದ ಮೆಲ್ಲನೆ ದೂರ ಸರಿಯುತ್ತಿದ್ದಾನೆ ಎಂಬ ಮಾಹಿತಿ ಸಂಶೋಧನೆಯಿಂದ ಹೊರ ಬಿದ್ದಿದೆ.

ವಿಸ್ಕಾನಿಸ್ ಮ್ಯಾಡಿನಸ್ ವಿಶ್ವ ವಿದ್ಯಾನಿಲಯದ ತಂಡವು ಚಂದಿರನ ಸೂಕ್ಷ್ಮವಾದ ವಿಶ್ಲೇಷಣೆ ಹಾಗೂ ವೈಜ್ಞಾನಿಕ ವೀಕ್ಷಣೆಯ ಮೂಲಕ ಅಧ್ಯಯನ ನಡೆಸಿದೆ. ಸುಮಾರು 90 ಮಿಲಿಯ ವರ್ಷಗಳ ಚಂದಿರನ ಮೇಲಿನ ಕಲ್ಲಿನ ರಚನೆಗಳನ್ನು ಅಧ್ಯಯನ ಮಾಡಿದ್ದು ಕ್ರಮೇಣ ಭೂಮಿಯಿಂದ ಚಂದಿರ ದೂರ ವಾಗುತ್ತಿದ್ದಾನೆ ಎಂಬುದನ್ನು ಬಹಿರಂಗಪಡಿಸಿದೆ.

ಚಂದಿರ ಪ್ರತಿವರ್ಷ ಸುಮಾರು 3.8 ಸೆಂ. ಮೀ. ನಷ್ಟು ಭೂಮಿಯಿಂದ ದೂರವಾಗುತ್ತಿದ್ದಾನೆ. ಇದರಿಂದಾಗಿ ಭೂಮಿಯಲ್ಲಿ ವೇಳಾಪಟ್ಟಿಯಲ್ಲಿ ಬದಲಾವಣೆ ಯಾಗುತ್ತಿದೆ. ಮುಂದಿನ 200 ಮಿಲಿಯ ವರ್ಷಗಳಲ್ಲಿ ಭೂಮಿಯ ಕಾಲಾವಧಿ 25 ಗಂಟೆಗೆ ತಲುಪುತ್ತದೆ ಎಂದು ಅಧ್ಯಯನ ಹೇಳುತ್ತಿದೆ. ಕಳೆದ 1.4 ಶತಕೋಟಿ ವರ್ಷಗಳ ಹಿಂದೆ ಭೂಮಿಯ ವೇಳಾ ಪಟ್ಟಿ 18 ಗಂಟೆಯಷ್ಟೇ ಇತ್ತು ಎಂಬುದನ್ನು ಅಧ್ಯಯನ ಸ್ಪಷ್ಟಪಡಿಸಿದೆ.

ಭೂಮಿ ಮತ್ತು ಚಂದಿರನ ನಡುವಿನ ಗುರುತ್ವಾಕರ್ಷಣ ಬಲಕ್ಕೆ ಎರಡು ಗ್ರಹಗಳ ನಡುವಿನ ಉಬ್ಬರ ಕಾರಣ ಎಂದು ಹೇಳಿದ್ದಾರೆ. ಚಂದ್ರನು ದೂರ ಸರಿದಂತೆ ಭೂಮಿಯ ಪರಿಭ್ರಮಣೆ ವೇಗ ಕಡಿಮೆಯಾಗಲಿದೆ ಎಂದು ವಿಸ್ಕಾನಿಸ್ ಮ್ಯಾಡಿನಸ್ ವಿಶ್ವ ವಿದ್ಯಾನಿಲಯದ ಭೂ ವಿಜ್ಞಾನ ಪ್ರಾಧ್ಯಾಪಕ ಸ್ಟಿಫನ್ ಮೇಯರ್ಸ್ ಹೇಳಿದ್ದಾರೆ.

ಚಂದ್ರನ ಹಿಂಜರಿತ ಇದೆ ಮೊದಲೇನಲ್ಲ. ಇದು ಶತಮಾನಗಳಿಂದ ನಡೆಯುತ್ತಲೇ ಇದೆ. ಆದರೆ ವಿಸ್ಕಾನಿಸ್ ಮ್ಯಾಡಿನಸ್ ವಿಶ್ವವಿದ್ಯಾನಿಲಯ ಈ ವಿಚಾರವಾಗಿ ವೈಜ್ಞಾನಿಕ, ಐತಿಹಾಸಿಕ ಮತ್ತು ಭೌಗೋಳಿಕ ಸನ್ನಿವೇಶಗಳನ್ನು ಆಳವಾಗಿ ಪರಿಶೀಲಿಸಿದೆ.

ಮೊದಲು ಚಂದ್ರನ ಕೆಸರು ಪದರಗಳನ್ನು ಹಾಗೂ ಭೂವೈಜ್ಞಾನಿಕ ರಚನೆಗಳನ್ನು ಗಮನಿಸುವ ಮೂಲಕ ಭೂಮಿ ಮತ್ತು ಚಂದ್ರನ ನಡುವಿನ ಸಂಬಂಧವನ್ನು ಪತ್ತೆ ಮಾಡಿದ್ದರು. ಪ್ರಸ್ತುತ ಚಂದ್ರನಲ್ಲಿ ಕುಸಿತ ಕಂಡಿದ್ದು ಇದು ಭೂಮಿನ ಕಾಲಮಾನದಲ್ಲಿ, ಭೂಮಿಯ ತಿರುಗುವಿಕೆ ವೇಗ, ಭೂ ಖಂಡಗಳ ದಿಕ್ಕುಗಳ ಮೇಲೆ ತೀವ್ರ ಪ್ರಭಾವ ಬೀರಲಿದೆ ಎಂದು ಹೇಳಿದ್ದಾರೆ.


Share It

You cannot copy content of this page