ಅಪರಾಧ ಸಿನಿಮಾ ಸುದ್ದಿ

ದರ್ಶನ್ ಭೇಟಿಗೆ ತಾಯಿ, ಸಹೋದರ ಬರುವ ಸಾಧ್ಯತೆ

Share It

ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್ ಅವರ ಭೇಟಿಯಾಗಲು ಅವರ ತಾಯಿ ಮೀನಾ ತೂಗುದೀಪ ಮತ್ತು ದಿನಕರ್ ಆಗಮಿಸಲಿದ್ದಾರೆ ಎನ್ನಲಾಗುತ್ತಿದೆ.

ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿದ ದಿನದಿಂದ ತಾಯಿಯಾಗಲೀ, ಸಹೋದರನಾಗಲೀ, ಈ ಕುರಿತು ಪ್ರತಿಕ್ರಿಯೆ ನೀಡರಲಿಲ್ಲ. ಕನ್ನಡದ ಸ್ಟಾರ್ ನಟನಾಗಿ ಮೆರೆಯುತ್ತಿದ್ದ ಮಗ ಕೊಲೆ ಪ್ರಕರಣದಲ್ಲಿ ಬಂಧಿಯಾಗುತ್ತಿದ್ದAತೆ ಸಹಜವಾಗಿಯೇ ಅವರ ತಾಯಿ ಮೌನಕ್ಕೆ ಶರಣಾಗಿದ್ದರು.

ಇದೀಗ ಸ್ವತಃ ದರ್ಶನ್ ತಮ್ಮ ತಾಯಿ ಮತ್ತು ಸಹೋದರನನ್ನು ಭೇಟಿಯಾಗಬೇಕೆಂಬ ಆಶಯವನ್ನು ತಮ್ಮ ಪತ್ನಿ ಮತ್ತು ಪುತ್ರ ಆಗಮಿಸಿದ್ದ ವೇಳೆ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ದರ್ಶನ್ ಭೇಟಿಗೆ ಮೀನಾ ತೂಗುದೀಪ್ ಮತ್ತು ದಿನಕರ್ ಆಗಮಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಮೂಲಗಳ ಪ್ರಕಾರ ದರ್ಶನ್ ತಮ್ಮ ತಪ್ಪಿಗೆ ಪಶ್ಚಾತ್ತಾಪ ಪಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಪವಿತ್ರಾ ಗೌಡ ಜತೆಗಿನ ಸಂಬAಧ ಮತ್ತು ಅದರಿಂದಾದ ಕೊಲೆ ಆರೋಪದಂತಹ ಗಾಢವಾದ ಪೆಟ್ಟು ತಮ್ಮ ವೃತ್ತಿ ಜೀವನದ ಮೇಲೆ ಬಿದ್ದಿದ್ದು, ದರ್ಶನ್ ಅವರನ್ನು ಕುಗ್ಗಿಸಿದೆ ಎಂದು ಹೇಳಲಾಗುತ್ತಿದೆ.

ದರ್ಶನ್ ಕೊಲೆ ಆರೋಪದಲ್ಲಿ ಬಂಧನವಾದ ನಂತರ ಆರಂಭವಾದ ಚರ್ಚೆಗಳಲ್ಲಿ ಪ್ರಮುಖವಾಗಿ, ಗೆಳತಿಗೆ ರೇಂಜ್ ರೋವರ್ ಕಾರು ಕೊಡಿಸಿರುವ ದರ್ಶನ್, ತಾಯಿ ಮತ್ತು ಸಹೋದರ ಬಾಡಿಗೆ ಮನೆಯಲ್ಲಿದ್ದಾರೆ ಎಂಬುದು ಬಹುಚರ್ಚಿತ ವಿಷಯವಾಗಿತ್ತು. ಇದು ದರ್ಶನ್ ಗಮನಕ್ಕೆ ಪತ್ನಿ ಕಡೆಯಿಂದ ಬಂದು, ದರ್ಶನ್ ತಾಯಿ ಭೇಟಿಯಾಗುವ ಆಶಯ ವ್ಯಕ್ತಪಡಿಸಿದರು ಎನ್ನಲಾಗಿದೆ.


Share It

You cannot copy content of this page