ಶಿವಮೊಗ್ಗ : ಜನಿಸಿದ ಮಗುವನ್ನು ಅಲ್ಲಿಯೇ ಬಿಟ್ಟು ತಾಯಿ ಪರಾರಿಯಾಗಿರುವುದು ಹಾಗೂ ಮಗು ಸಾವು ಕಂಡಿರುವ ದುರಂತದ ಘಟನೆ ಶಿವಮೊಗ್ಗ ಜಿಲ್ಲೆಯ ಹೊನ್ನಾಳಿ ರಸ್ತೆಯ ಹೊಳಲೂರು ಮುಖ್ಯ ರಸ್ತೆಯಲ್ಲಿ ನಡೆದಿದೆ.
ಹೊಳಲೂರಿನಿಂದ ಹೊಳೆಹೊಟ್ಟಿಗೆ ಹೋಗುವ ಮಾರ್ಗದಲ್ಲಿ ಇರುವಂತಹ ವೆಲ್ಡಿಂಗ್ ಶಾಪ್ ಎದುರು ಬಯಲಿನ ಜಾಗದಲ್ಲಿ ನಿನ್ನೆ ರಾತ್ರಿ ಮಗುವೊಂದಕ್ಕೆ ತಾಯಿ ಇಲ್ಲಿ ಜನ್ಮ ನೀಡಿದ್ದಾಳೆ. ಮಗುವನ್ನು ಅಲ್ಲಿಯೇ ಬಿಟ್ಟು ತಾಯಿ ಹಾಗೂ ಆಕೆಯ ಜೊತೆ ಬಂದವರು ನಾಪತ್ತೆಯಾಗಿದ್ದು, ಮಗು ಸಾವು ಕಂಡಿದೆ. ಇದು ಗಂಡು ಮಗುವಾಗಿದ್ದು ೯ ತಿಂಗಳು ಮುಗಿಯುವ ಮುನ್ನವೇ ಜನಿಸಿದೆ ಎನ್ನಲಾಗಿದೆ.
ಗುರುವಾರ ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಭೇಟಿ ನೀಡಿದ್ದು ಮಗುವಿನ ಅಂತ್ಯಸAಸ್ಕಾರವನ್ನು ಮುಗಿಸಿದ್ದಾರೆ ಎನ್ನಲಾಗಿದೆ.
