ಸುದ್ದಿ

ಮುಡಾ ಹಗರಣ: ಮೊದಲು ದಾಖಲೆ ಕೊಟ್ಟು ಅಮೇಲೆ ಪಾದಯಾತ್ರೆ ಮಾಡಲಿ- ಸಚಿವ ಪ್ರಿಯಾಂಕ್ ಖರ್ಗೆ

Share It

ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಿಂದ ಮೈಸೂರಿಗೆ ಬಿಜೆಪಿ ಪಾದಯಾತ್ರೆಗೆ ಮುಂದಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಗ್ರಾಮೀಣಾಭಿವೃದ್ದಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ, ಬಿಜೆಪಿಯವರು ಮೊದಲು ದಾಖಲೆ ಕೊಟ್ಟು ಅಮೇಲೆ ಪಾದಯಾತ್ರೆ ಮಾಡಲಿ ಎಂದು ಟಾಂಗ್ ಕೊಟ್ಟರು.

ವಿಧಾನಸೌಧದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಪಾದಯಾತ್ರೆ ಮಾಡಲಿ ಬಹಳ ಸಂತೋಷ. ವಾತಾವರಣ ಚೆನ್ನಾಗಿದೆ ಪಾದಯಾತ್ರೆ ಮಾಡಲಿ ಮೊದಲು ದಾಖಲೆ ಕೊಡಲಿ. ಬಿಜೆಪಿಯವರು ಕೇಂದ್ರೆ ಬಜೆಟ್ ಬಗ್ಗೆ ಮಾತನಾಡಲ್ಲ. ಬಜೆಟ್ ನಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ. ಅದರ ಬಗ್ಗೆ ಮಾತನಾಡಲ್ಲ ಬಿಜೆಪಿ ಅವಧಿಯ ಹಗರಣಗಳ ಬಗ್ಗೆ ಮಾತನಾಡಲ್ಲ. ಕೇವಲ ಮುಡಾ ಹಗರಣದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಬಿಜೆಪಿ ಜೆಡಿಎಸ್ ನವರು ದಾಖಲೆ ಕೊಟ್ಟು ಮಾತನಾಡಲಿ ಏನೇನು ದಾಖಲೆಗಳಿವೆ ಕೊಡಲಿ ಬೇಡ ಎಂದು ಹೇಳಿದ್ದು ಯಾರು ಬೋವಿ ನಿಗಮದ ಅಕ್ರಮ ಕೇಸ್ ಬಗ್ಗೆ ಚರ್ಚಿಸಲು ತಯಾರಿಲ್ಲ. ಬಿಜೆಪಿಯವರ ತಾಳಕ್ಕೆ ಕುಣಿಯಲು ನಾವು ತಯಾರಿಲ್ಲ ಎಂದರು.


Share It

You cannot copy content of this page