ರಾಜಕೀಯ ಸುದ್ದಿ

“ಆರ್.ಅಶೋಕ್‌ಗೆ ಎಚ್‌ಐವಿ ಇಂಜೆಕ್ಷನ್ ಕೊಡಲಾಗಿದೆ’: ಲಕ್ಷ್ಮಣ್ ಆರೋಪ

Share It

ಮೈಸೂರು: ಈಗಾಗಲೇ ಆರ್.ಅಶೋಕ್‌ಗೆ ಎಚ್‌ಐವಿ ಇಂಜೆಕ್ಷನ್ ಕೊಟ್ಟಿರಬಹುದು. ಮುನಿರತ್ನ ಅವರನ್ನು ಬಂಧಿಸಿ ವಿಚಾರಣೆ ನಡೆಸಿದ್ದರೆ ಸತ್ಯ ಹೊರಬರುತ್ತಿತ್ತು ಎಂದು ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ ಬಾಂಬ್ ಸಿಡಿಸಿದ್ದಾರೆ.

ಆರ್.ಅಶೋಕ್ ಹನಿಟ್ರಾö್ಯಪ್ ಬಗ್ಗೆ ತಲೆ ಕೆಡಿಸಿಕೊಂಡಿದ್ದಾರೆ. ಇಷ್ಟೇ ತಮಗೆ ಎಚ್‌ಐವಿ ಇಂಜೆಕ್ಷನ್ ಕೊಡಲು ನಡೆದಿದ್ದ ಸಂಚಿನ ಬಗ್ಗೆ ತಲೆ ಕೆಡಿಸಿಕೊಂಡಿದ್ದರೆ ಒಳ್ಳೆಯದಿತ್ತು. ನನಗೆ ಇರುವ ಅನುಮಾನ ಏನಂದರೆ, ಈಗಾಗಲೇ ಆರ್.ಅಶೋಕ್ ಅವರಿಗೆ ಮುನಿರತ್ನ ಎಚ್.ಐ.ವಿ ಇಂಜೆಕ್ಷನ್ ಕೊಟ್ಟಿರಬಹುದು ಎಂದರು.

ಕಾAಗ್ರೆಸ್ ಸಚಿವರ ಮೇಲಿನ ಹನಿಟ್ರಾö್ಯಪ್ ವಿಚಾರದಲ್ಲಿ ಆರ್.ಅಶೋಕ್ ಮನಸ್ಸಿಲ್ಲದ ಮನಸ್ಸಿಂದ ಹೋರಾಟ ನಡೆಸುತ್ತಿದ್ದಾರೆ. ಬಿಜೆಪಿಯ ಹೈಕಮಾಂಡ್ ಮತ್ತು ಕೆಲ ನಾಯಕರ ಒತ್ತಡಕ್ಕೆ ಮಣಿದು ಹೋರಾಟಕ್ಕೆ ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಈ ನಡುವೆ ಲಕ್ಷ್ಮಣ್ ಇಂತಹದ್ದೊAದು ಬಾಂಬ್ ಸಿಡಿಸಿದ್ದಾರೆ.

ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ, ಆರ್.ಅಶೋಕ್ ಸೇರಿದಂತೆ ಕೆಲವು ಬಿಜೆಪಿ ನಾಯಕರಿಗೆ ಎಚ್‌ಐವಿ ಇಂಜೆಕ್ಷನ್ ಕೊಡಿಸುವ ಸಲುವಾಗಿ ಟ್ರಾö್ಯಪ್ ಗೆ ಮುಂದಾಗಿದ್ದರು ಎಂಬ ಆರೋಪ ಕೇಳಿಬಂದಿತ್ತು. ಮಹಿಳೆಯೊಬ್ಬರು ತಮ್ಮ ಮೇಲೆ ನಡೆದ ಅತ್ಯಾಚಾರ ಆರೋಪದ ಸಂದರ್ಭದಲ್ಲಿ ಈ ವಿಚಾರ ಬಾಯಿಬಿಟ್ಟಿದ್ದರು.

ಇದೀಗ ಇದೇ ವಿಷಯವನ್ನು ಇಟ್ಟುಕೊಂಡು ಲಕ್ಷ್ಮಣ್ ಆರ್.ಅಶೋಕ್ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಆರ್.ಅಶೋಕ್‌ಗೆ ಈಗಾಗಲೇ ಮುನಿರತ್ನ ಎಚ್‌ಐಇ ಇಂಜೆಕ್ಷನ್ ಕೊಟ್ಟಿರಬಹುದು ಎನ್ನುವ ಮೂಲಕ ಹೊಸದೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.


Share It

You cannot copy content of this page