ಮುಂಬೈ: ಎಂಟು ವರ್ಷದಿಂದ ನನಗೆ ಬಾಲಿವುಡ್ನಲ್ಲಿ ಸರಿಯಾಗಿ ಅವಕಾಶ ಇಗ್ತಿಲ್ಲ ಎಂದು ಹೇಳಿರುವ ಹೇಳಿಕೆ ಇದೀಗ ವಿವಾದದ ಕಿಡಿ ಹೊತ್ತಿಸಿದೆ.
ಬಿಬಿಸಿ ನೆಟ್ವರ್ಕ್ಗೆ ನೀಡಿರುವ ಸಂದರ್ಶನದಲ್ಲಿ ಎ.ಆರ್.ರೆಹಮಾನ್ ನನಗೆ ಎಂಟು ವರ್ಷದಿಂದ ಬಾಲಿವುಡ್ನಲ್ಲಿ ಸರಿಯಾಗಿ ಅವಕಾಶ ಸಿಗ್ತಿಲ್ಲ. ಇದಕ್ಕೆ ಕಾರಣ ಕೋಮುವಾದಿ ಮನಸ್ಥಿತಿ ಇರಬಹುದು, ನಾನು ಮುಸ್ಲಿಂ ಎಂಬ ಕಾರಣಕ್ಕೆ ಅವಕಾಶಗಳು ಸಿಗುತ್ತಿಲ್ಲದಿರಬಹುದು ಎಂದು ಹೇಳಿದ್ದಾರೆ.
ಸಂಗೀತ ನಿದೇಶನಕ್ಕಾಗಿಯೇ ಆಸ್ಕರ್, ಪದ್ಮಶ್ರೀ ಸೇರಿದಂತೆ ಶ್ರೇಷ್ಠ ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಎ.ಆರ್.ರೆಹಮಾನ್ ಅವರ ಈ ಹೇಳಿಕೆ ಸಂಚಲನ ಸೃಷ್ಟಿಸಿದೆ. ಈ ಹೇಳಿಕೆಗೆ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ.
ರೆಹಮಾನ್ ಅವಕಾಶ ಸಿಗದಿದ್ದಕ್ಕಾಗಿ ತನ್ನ ಧರ್ಮವನ್ನು ಮುಂದೆ ತರುತ್ತಿದ್ದಾರೆ. ಇದು ದೇಶದಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಟ್ರೆಂಡ್ ಆಗಿದೆ ಎಂದು ಕೆಲವರು ಮೂದಲಿಸಿದರೆ, ಅನೇಕರು ರೆಹಮಾನ್ ಹೇಳುತ್ತಿರುವುದು ಸರಿಯಾಗಿದೆ. ಅನರ್ಹರ ಕೈಗೆ ಅಧಿಕಾರ ಸಿಕ್ಕಿದ್ದು, ಇದು ಕೋಮುವಾದಿಗಳ ಅಟ್ಟಹಾಸ ಹೆಚ್ಚುವಂತೆ ಮಾಡಿದೆ ಎಂದು ಗುಡುಗಿದ್ದಾರೆ.

