ಮೈಸೂರು: ಕೌಟುಂಬಿಕ ಕಲಹದಿಂದ ಬೇಸತ್ತು ಹೆತ್ತ ಇಬ್ಬರು ಮಕ್ಕಳನ್ನು ಹತ್ಯೆ ಮಾಡಿ, ಬಳಿಕ ತಾಯಿಯೂ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಹೆಚ್ ಮಠದ ಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ಭಾನುವಾರ ನಡೆದ ಘಟನೆಯಲ್ಲಿ ಗ್ರಾಮದ ನಿವಾಸಿ ಮಹದೇವ ಅವರ ಪತ್ನಿ ಹೇಮಲತಾ (೩೮) ಎಂಬುವರೇ ತಮ್ಮ ೧೫ ವರ್ಷದ ಮಗಳು, ಮತ್ತು ೧೩ ವರ್ಷದ ಮಗನಿಗೆ ಹಗ್ಗದಿಂದ ನೇಣು ಬಿಗಿದು ಕೊಂದು, ಬಳಿಕ ತಾನು ಸಾವಿಗೆ ಶರಣಾಗಿದ್ದಾರೆ.
ಹೇಮಲತಾ ಅವರಿಗೆ ತಮ್ಮ ಪತಿ ಮಹದೇವ ಅವರೊಂದಿಗೆ ಕೌಟುಂಬಿಕ ವಿಚಾರದಲ್ಲಿ ಆಗಾಗ್ಗೆ ಗಲಾಟೆ ನಡೆಯುತ್ತಿದ್ದು, ಭಾನುವಾರ ಕೂಡ ಮಹದೇವು ಗಲಾಟೆ ಮಾಡಿದ್ದಾರೆ. ಇದರಿಂದ ಬೇಸತ್ತ ಹೇಮಲತಾ ತಮ್ಮ ತಂಬಾಕು ಬ್ಯಾರಲ್ ಮನೆಗೆ ತೆರಳಿ ಮನೆಯ ಕಂಬಕ್ಕೆ ನೇಣಿನ ಕುಣಿಕೆ ಹಾಕಿ ಮೊದಲಿಗೆ ಮಕ್ಕಳನ್ನು ಕೊಂದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಸಾವಿಗೆ ಹೇಮಲತಾ ಅವರ ಪತಿ ಮಹದೇವ ಅವರೇ ಕಾರಣ ಎಂದು ಮೃತಳ ಸಹೋದರ ದೂರು ನೀಡಿದ್ದು, ಈ ಸಂಬAಧ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

