ಬೆಂಗಳೂರು : ಮಹಿಳೆಯೊಬ್ಬರ ಮೃತದೇಹ ಮನೆಯ ಸ್ವಿಮ್ಮಿಂಗ್ ಫೂಲ್ ನಲ್ಲಿ ಸಿಕ್ಕಿದ್ದು, ಇದು ಆತ್ಮಹತ್ಯೆಯೋ ಕೊಲೆಯೋ ಎಂಬ ಅನುಮಾನ ಮೂಡಿಸಿರುವ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆ ಕನಕಪುರ ತಾಲೂಕಿನ ಬೆಟ್ಟೆಗೌಡನದೊಡ್ಡಿ ಗ್ರಾಮದಲ್ಲಿ ನಡೆದಿದೆ.
ಪ್ರತಿಭಾ (32) ಮೃತ ದುರ್ದೈವಿಯಾಗಿದ್ದು, ಪತಿ ನಂಜೇಗೌಡ ವಿರುದ್ಧ ಮೃತ ಮಹಿಳೆಯ ಪೋಷಕರು ಕೊಲೆ ಮಾಡಿರುವ ಆರೋಪ ಮಾಡುತ್ತಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಹೆಂಡತಿಗೆ ವಿಪರೀತ ಹೊಟ್ಟೆ ನೋವು ಇತ್ತು, ಆಕೆ ಬಾಗಿಲು ತೆಗೆಯುತ್ತಿಲ್ಲ ಎಂದು ಹೋಗಿ ನೋಡುವಷ್ಟರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ” ಎಂಬುದು ಪತಿ ನಂಜೇಗೌಡನ ವಾದ ಮಾಡಿದ್ದಾರೆ.
:ಆದರೆ, ಆಕೆಯ ಕುಟುಂಬಸ್ಥರು, ಇದು ನೂರಕ್ಕೆ ನೂರರಷ್ಟು ಕೊಲೆ ಎಂದು ವಾದ ಮಾಡಿದ್ದು, ಮೊದಲ ಹೆಂಡತಿ ವಿಚಾರವಾಗಿ ಈ ಇಬ್ಬರ ನಡುವೆ ಗಲಾಟೆ ಇತ್ತು. ಹೀಗಾಗಿ, ನಂಜೇಗೌಡನೇ ಈ ಕೃತ್ಯ ಎಸಗಿದ್ದಾನೆ” ಎಂದು ಪ್ರತಿಭಾ ಪೋಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ಕುರಿತು ಕೋಡಿಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವಷ್ಟೇ ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ಸತ್ಯಾಂಶ ಹೊರಬರಬೇಕಿದೆ.

