ಮೈಸೂರು: ದಸರಾ ಹಬ್ಬದ ಸಂಭ್ರಮದಲ್ಲಿದ್ದ ಮೈಸೂರಿನಲ್ಲಿ ನಗರದ ವಸ್ತು ಪ್ರದರ್ಶನದ ಮುಂಭಾಗದಲ್ಲೇ ವ್ಯಕ್ತಿಯನ್ನ ದುಷ್ಕರ್ಮಿಗಳು ಕೊಚ್ಚಿ ಕೊಲೆಗೈದಿದ್ದಾರೆ.
ಮೈಸೂರು ಅರಮನೆ ಮುಂಭಾಗದಲ್ಲಿರುವ ನಗರ ವಸ್ತು ಪ್ರದರ್ಶನದ ಬಳಿ ಮಧ್ಯಾಹ್ನ ೧೨ ಗಂಟೆಯಲ್ಲಿ ದುರ್ಷರ್ಮಿಗಳು ವ್ಯಕ್ತಿಯನ್ನ ಕೊಚ್ಚಿ ಕೊಲೆಗೈದಿದ್ದಾರೆ.
ವಸ್ತು ಪ್ರದರ್ಶನದ ಬಳಿಯೇ ಯುವಕನ ಮೇಲೆ ಗ್ಯಾಂಗ್ ಅಟ್ಯಾಕ್ ಮಾಡಿದೆ. ಸ್ವಿಫ್ಟ್ ಕಾರ್ನಲ್ಲಿ ಬಂದ ೫-೬ ಜನರಿದ್ದ ಗ್ಯಾಂಗ್, ಯುವಕನೋರ್ವನ ಮೇಲೆ ಏಕಾಏಕಿ ದಾಳಿ ನಡೆಸಿದೆ. ಕಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದಾರೆ.
ಕಾರಿನಲ್ಲಿ ಬಂದಿದ್ದ ಐದರಿಂದ ಆರು ಜನ ಯುವಕರಿಂದ ಏಕಾಏಕಿ ದಾಳಿ ನಡೆದಿದ್ದು, ಕೊಲೆಯಾದ ಯುವಕನ ಬಗ್ಗೆ ಮಾಹಿತಿ ಪೊಲೀಸರು ಸಂಗ್ರಹಿಸುತ್ತಿದ್ದಾರೆ. ಇನ್ನು ಆತನ ಗುರುತು ಪತ್ತೆಯಾಗಿಲ್ಲ. ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕಾರ್, ಡಿಸಿಪಿಗಳಾದ ಸುಂದರ್ ರಾಜ್ ಮತ್ತು ಬಿಂದುಮಣಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.