ಮಂಗಳೂರು: ರಸ್ತೆಯಲ್ಲಿಯೇ ಮುಸ್ಲಿಂ ಯುವಕರು ನಮಾಜ್ ಮಾಡಿದ್ದ ಘಟನೆಗೆ ಸಂಬಂಧಿಸಿ ಸ್ವಯಂಪ್ರೇರಿತ ಪ್ರಕರಣ ದಾಖಲು ಮಾಡಿದ್ದ ಇನ್ಸ್ಪೆಕ್ಟರ್ ಅನ್ನು ಇಲಾಖೆ ಕಡ್ಡಾಯ ರಜೆಯ ಮೇಲೆ ಕಳುಹಿಸಿದೆ.
ಕಂಕನಾಡಿ ಮಸೀದಿ ಬಳಿ ರಸ್ತೆಯಲ್ಲಿಯೇ ಮುಸ್ಲಿಂ ಯುವಕರು ನಮಾಜ್ ಮಾಡಿದ್ದರು. ಇದು ವಿವಾದಕ್ಕೆ ಕಾರಣವಾಗಿದ್ದು, ಇದಕ್ಕೆ ಸಂಬಂಧಿಸಿ ಸ್ವಯಂಪ್ರೇರಿತ ದೂರು ದಾಖಲು ಮಾಡಿಕೊಂಡಿದ್ದ ಇನ್ಸ್ಪೆಕ್ಟರ್ ಸೋಮಶೇಖರ್, ಎಫ್‌ಐಆರ್ ದಾಖಲು ಮಾಡಿದ್ದರು. ಇನ್ಸ್ ಪೆಕ್ಟರ್ ಕ್ರಮವನ್ನು ಅಲ್ಪಸಂಖ್ಯಾತ ಮುಖಂಡರು ವಿರೋಧಿಸಿದ್ದರು.
ಅಲ್ಪಸಂಖ್ಯಾತ ಮುಖಂಡರು ಸರಕಾರಕ್ಕೆ ಈ ಕ್ರಮದ ವಿರುದ್ಧ ದೂರಿದ್ದರು. ಅಲ್ಪಸಂಖ್ಯಾತ ಸಮುದಾಯಗಳ ಒತ್ತಡಕ್ಕೆ ಮಣಿದ ಸರಕಾರ ಇನ್ಸ್ ಪೆಕ್ಟರ್‌ಗೆ ಕಡ್ಡಾಯ ರಜೆ ಕೊಡಿಸಿದೆ ಎಂದು ಹೇಳಲಾಗುತ್ತಿದೆ. ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಇನ್ಸೆ÷್ಪಕ್ಟರ್‌ಗೆ ಕಡ್ಡಾಯ ರಜೆ ನೀಡಿ ಆದೇಶ ಮಾಡಿದ್ದಾರೆ.
ಶರಣ್ ಪಂಪ್‌ವೇಲ್ ಮೇಲೆ ಎಫ್‌ಐಆರ್ : ಘಟನೆಗೆ ಸಂಬಂಧಿಸಿ, ಆಕ್ರೋಶ ವ್ಯಕ್ತಪಡಿಸಿದ್ದ ಹಿಂದೂ ಸಂಘಟನೆಗಳ ಮುಖಂಡ ಶರಣ್ ಪಂಪ್‌ವೇಲ್ ಮೇಲೆ ಮಂಗಳೂರಿನಲ್ಲಿ ಎಫ್‌ಐಆರ್ ದಾಖಲು ಮಾಡಲಾಗಿದೆ. ಮುಸ್ಲೀಂ ಸಮುದಾಯದ ಪ್ರಾರ್ಥನೆ ನಂತರ ಪ್ರಕರಣ ದಾಖಲಿಸದಿದ್ದರೆ, ರಸ್ತೆಯಲ್ಲಿ, ಅದೂ ಮಸೀದಿಯ ಮುಂದೆ ಬಂದು ನಾವು ಹನುಮಾನ್ ಚಾಳೀಸ್ ಪಠಣ ಮಾಡುತ್ತೇವೆ ಎಂದು ಪಂಪ್ ವೇಲ್ ಬೆದರಿಕೆ ಹಾಕಿದ್ದರು. ಈ ಸಂಬಂಧವೂ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲು ಮಾಡಿಕೊಂಡಿದ್ದರು. ಇದೀಗ 153, 506 ಸೆಕ್ಷನ್‌ಗಳಡಿ, ಎಫ್‌ಐಆರ್ ಮಾಡಿ, ಅವರಿಗೆ ನೊಟೀಸ್ ನೀಡಲಾಗಿದೆ.