ಕ್ರೀಡೆ

ಸೂಪರ್ ಓವರ್ ನಲ್ಲಿ ಸೂಪರ್ ಗೆಲುವು ಸಾಧಿಸಿದ ನಮೀಬಿಯಾ

Share It

ಡಲ್ಲಾಸ್ : ಟಿ-20 ವಿಶ್ವಕಪ್ ತನ್ನ ರೋಚಕತೆಯನ್ನು ಮೂರನೇ ಪಂದ್ಯದಲ್ಲಿಯೇ ಆರಂಭಿಸಿದ್ದು, ನಮೀಬಿಯಾ ಮತ್ತು ಒಮನ್ ನಡುವಿನ ಪಂದ್ಯ ಸೂಪರ್ ಓವರ್‌ನಲ್ಲಿ ಪಂದ್ಯ ಮುಕ್ತಾಯವಾಗಿದೆ.

ಮೊದಲು ಬ್ಯಾಟ್ ಮಾಡಿದ ಒಮನ್ ತಂಡ ನಿಗದಿತ 20 ಓವರ್‌ಗಳಲ್ಲಿ 109 ರನ್ ಗಳನ್ನಷ್ಟೇ ದಾಖಲಿಸಿತ್ತು. ಈ ಗುರಿಯನ್ನು ಬೆನ್ನತ್ತಿದ್ದ ನಮೀಬಿಯಾ ತಂಡ ೨೦ ಓವರ್‌ಗಳಲ್ಲಿ ಆರು ವಿಕೆಟ್ ಕಳೆದುಕೊಂಡು 109 ರನ್‌ಗಳನ್ನಷ್ಟೇ ಕಲೆ ಹಾಕಿತು.

ಸುಳಭ ಗುರಿ ಎಂಬಂತೆ ಕಾಣೂತ್ತಿದ್ದರೂ, ಒಮನ್ ತಂಡದ ಬೌಲರ್‌ಗಳ ಸಾಂಘಿಕ ಪ್ರದರ್ಶನದಿಂದಾಗಿ ನಮೀಬಿಯಾಗೆ ಸುಲಭದ ಗೆಲುವು ಸಾಧ್ಯವಾಗಲಿಲ್ಲ. ಹೀಗಾಗಿ, ಪಂದ್ಯ ಸೂಪರ್ ಗೆ ಓವರ್‌ಗೆ ಹೋಯಿತು. ಸೂಪರ್ ಓವರ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿದ ನಮೀಬಿಯಾ ಪಂದ್ಯವನ್ನು ಗೆದ್ದುಕೊಂಡಿತು.

ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ನಮೀಬಿಯಾ ತಂಡ 21 ರನ್‌ಗಳ ಗುರಿಯನ್ನು ನೀಡಿತು. ಡೇವಿಡ್ ವೈಸ್ 4 ಎಸೆತಗಳಲ್ಲಿ 13 ರನ್ ಹಾಗೂ ಗ್ಯಾದರ್ಡ್ ಎರಾಸ್ಮಸ್ ಎರಡು ಎಸೆತಗಳಲ್ಲಿ 8 ರನ್ ಗಳಿಸಿದರು. ಯಾವುದೇ ವಿಕೆಟ್ ನಷ್ಟವಿಲ್ಲದೆ ನಮೀಬಿಯಾ 21 ರನ್ ಗಳಿಸಿತು.

ಗುರಿಯನ್ನು ಬೆನ್ನತ್ತಿದ್ದ ಒಮನ್ ತಂಡ ಕೇವಲ 10 ರನ್‌ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಸೂಪರ್ ಓವರ್‌ನಲ್ಲಿ ಡೇವಿಡ್ ವೈಸ್ ಒಂದು ವಿಕೆಟ್ ಪಡೆದು 10 ರನ್‌ಗಳನ್ನಷ್ಟೇ ನೀಡಿದರು. ಹೀಗಾಗಿ, ನಮೀಬಿಯಾಗೆ ಸುಲಭ ಗೆಲುವು ಲಭಿಸಿತು.

ಮೊದಲ ಇನ್ನಿಂಗ್ಸ್ನಲ್ಲಿ ಮೂರು ವಿಕೆಟ್ ಪಡೆದು ಮಿಂಚಿದ್ದ ಡೇವಿಡ್ ವೈಸ್, ಸೂಪರ್ ಓವರ್‌ನಲ್ಲಿಯೂ ಒಂದು ವಿಕೆಟ್ ಪಡೆದುಕೊಂಡರು. ಜತಗೆ ಬ್ಯಾಟಿಂಗ್‌ನಲ್ಲಿಯೂ ಮಿಂಚಿ, ಸೂಪರ್ ಓವರ್‌ನಲ್ಲಿ 14 ರನ್ ಭಾರಿಸಿ ಗೆಲುವಿಗೆ ಕಾರಣವಾದರು. ಹೀಗಾಗಿ, ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಲಾಯಿತು.


Share It

You cannot copy content of this page