ಸುದ್ದಿ

ಫೆ.14ಕ್ಕೆ ನಂದಿ ಗಿರಿಧಾಮ ಬಂದ್: ಪ್ರೇಮಿಗಳ ದಿನದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಆದೇಶ

Share It

ಬೆಂಗಳೂರು: ಪ್ರೇಮಿಗಳ ದಿನಾಚರಣೆಯ ದಿನವಾದ ಫೆ.14ರಂದು ನಂದಿ ಗಿರಿಧಾಮವನ್ನು ಬಂದ್ ಮಾಡುವಂತೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಫೆ. 14ರಂದು ಬೆಳಗ್ಗೆ 6ರಿಂದ ಸಂಜೆಯವರೆಗೆ ನಂದಿ ಗಿರಿಧಾಮವನ್ನು ಬಂದ್ ಮಾಡಲಾಗುತ್ತದೆ. ಯಾವುದೇ ವಾಹನಗಳಿಗಾಗಲೀ, ಪ್ರವಾಸಿಗರಿಗಾಗಲೀ ನಂದಿಬೆಟ್ಟಕ್ಕೆ ಪ್ರವೇಶವಿರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಕುರಿತು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಜಿ ಪ್ರಭು ಅವರು ಆದೇಶ ಹೊರಡಿಸಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಲು ಜಿಲ್ಲಾಡಳಿತದ ಈ ಕ್ರಮ ತೆಗೆದುಕೊಂಡಿದೆ ಎಂದು ತಿಳಿಸಿದ್ದಾರೆ.


Share It

You cannot copy content of this page