ನಾರಾಯಣ ಹೆಲ್ತ್ ಸಿಟಿಯಲ್ಲಿ ಆರು ತಿಂಗಳಲ್ಲಿ 300 ರೊಬೊಟಿಕ್ ಮೊಣಕಾಲಿನ ಶಸ್ತ್ರಚಿಕಿತ್ಸೆ

IMG-20240626-WA0021
Share It

ಬೆಂಗಳೂರು : ಮಹಾವೀರ ಚಕ್ರ ಪುರಸ್ಕೃತ ಪಿಟಿ ಎಸ್.ಕೆ. ಗುಪ್ತಾ ಅವರು 88 ವರ್ಷದ ರೋಗಿಯಾಗಿದ್ದು ತೀವ್ರವಾದ ಮೊಣಕಾಲಿನ ಆರ್ಥ್ರೈಟಿಸ್ ನಿಂದ ನಡೆಯಲು ಆಗದಷ್ಟು ತೀವ್ರ ಸಂಕಷ್ಟ ಅನುಭವಿಸುತ್ತಿದ್ದವರು ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿಯಲ್ಲಿ ನವೀಕೃತ ಸ್ವಾತಂತ್ರ್ಯದ ಭಾವನೆಯನ್ನು ಪಡೆದರು.

ತಂತ್ರಜ್ಞಾನ-ಸನ್ನದ್ಧ ಮಾನವ ಪ್ರೇರಿತ ರೊಬೊಟಿಕ್ ಮೊಣಕಾಲ ಶಸ್ತ್ರಚಿಕಿತ್ಸೆಯು ಅವರಿಗೆ ಚಲನೆ ಹಾಗೂ ವಿಶ್ವಾಸವನ್ನು ಮತ್ತೆ ತಂದುಕೊಟ್ಟಿದೆ. ಈ ಸಾಧನೆಯು ನಾರಾಯಣ ಹೆಲ್ತ್ ಸಿಟಿಯಲ್ಲಿ ಆರ್ಥೊಪಿಡಿಕ್ಸ್, ಸ್ಪೈನ್ ಅಂಡ್ ಟ್ರೌಮಾದ ಸೀನಿಯರ್ ಕನ್ಸಲ್ಟೆಂಟ್ ಪ್ರೊಫೆಸರ್ ಅರುಣ್ ರಂಗನಾಥನ್ ನೇತೃತ್ವದಲ್ಲಿ ಕುಶಲಿ ಆರ್ಥೊಪಿಡಿಕ್ ತಂಡವು ಕಳೆದ ಆರು ವರ್ಷಗಳಲ್ಲಿ ಪೂರ್ಣಗೊಳಿಸಿದ 300 ರೊಬೊಟಿಕ್ ಮೊಣಕಾಲು ಬದಲಾವಣೆಗಳಲ್ಲಿ ಒಂದಾಗಿದೆ.

ಮುಂದಿನ ದಶಕದಲ್ಲಿ ಮೊಣಕಾಲಿನ ಆರ್ಥ್ರೈಟಿಸ್ ಭಾರತದಲ್ಲಿ ದೈಹಿಕ ಅಂಗವೈಕಲ್ಯಕ್ಕೆ ನಾಲ್ಕನೆಯ ಅತ್ಯಂತ ಸಾಮಾನ್ಯ ಕಾರಣವಾಗಿ ಹೊರಹೊಮ್ಮಲಿದೆ. ಪರಿಣಿತರ ಪ್ರಕಾರ ಅಪಾರವಾದ ಅಂತರಗಳನ್ನು ತುಂಬಬೇಕಾಗಿದೆ. ರೊಬೊಟಿಕ್ ನೀ ರಿಪ್ಲೇಸ್ ಮೆಂಟ್ ಸರ್ಜನರಿಗಳು ಮೊಣಕಾಲಿನ ಸಮಸ್ಯೆಗಳಿಗೆ ಹೆಚ್ಚುನಿಖರ ಮತ್ತು ಸುಧಾರಿತ ಪರಿಹಾರ ನಿರೀಕ್ಷಿಸುವ ರೋಗಿಗಳಿಗೆ ಆದ್ಯತೆಯ ಆಯ್ಕೆಯಾಗಿದೆ. ಪಿಟಿ ಎಸ್.ಕೆ.ಗುಪ್ತಾ ಅವರಿಗೆ ಈ ಶಸ್ತ್ರಚಿಕಿತ್ಸೆಯನ್ನು ಆಯ್ಕೆ ಮಾಡಿಕೊಳ್ಳಲು ಬಲವಾದ ಕಾರಣವಿತ್ತು.

ಆಂತರಿಕ ದತ್ತಾಂಶದ ಪ್ರಕಾರ ಆಸ್ಪತ್ರೆಯ ಗಮನವು ವೃದ್ಧರಿಗೆ ಸುಧಾರಿತ ಪರಿಹಾರಗಳನ್ನು ಒದಗಿಸುವುದಾಗಿದ್ದು ಅವರ ಚಲನೆ ಮತ್ತು ಜೀವನದ ಗುಣಮಟ್ಟ ಸುಧಾರಿಸಲು ಶ್ರಮಿಸುತ್ತಿದೆ. ಕರ್ನಾಟಕದ 31 ಜಿಲ್ಲೆಗಳ ರೋಗಿಗಳು, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಒಡಿಶಾ ಅಲ್ಲದೆ 10 ಹೊರದೇಶಗಳ ವ್ಯಕ್ತಿಗಳಿ ನಾರಾಯಣ ಹೆಲ್ತ್ ಸಿಟಿಯನ್ನು ಅವರ ಮೊಣಕಾಲು ಬದಲಾವಣೆಗಳಿಗೆ ವಿಶ್ವಾಸಾರ್ಹ ಪಾಲುದಾರನಾಗಿ ಪರಿಗಣಿಸಿದ್ದಾರೆ.

ಈ ವಿಸ್ತಾರ ಪ್ರಾತಿನಿಧ್ಯವು ನಾರಾಯಣ ಹೆಲ್ತ್ ಸಿಟಿಯನ್ನು ವಿಶ್ವಮಟ್ಟದ ಆರೋಗ್ಯಸೇವೆಯ ಪ್ರಮುಖ ತಾಣವಾಗಿ ಅದರ ಸ್ಥಾನವನ್ನು ಎತ್ತರಿಸಿದೆ. ಕಂಪ್ಯೂಟರ್-ನ್ಯಾವಿಗೇಟೆಡ್ ಪ್ರೊಸೀಜರ್ ಗಳಲ್ಲಿ ಬೆನ್ನುಮೂಳೆ, ಪೆಲ್ವಿಕ್ ಮತ್ತು ಟ್ಯೂಮರ್ ಶಸ್ತ್ರಚಿಕಿತ್ಸೆಗಳು ಹಾಗೂ ಅಂಗ ಮರುಜೋಡಣೆಯು ನಾರಾಯಣ ಹೆಲ್ತ್ ಸಿಟಿಯನ್ನು ಇತರವುಗಳಿಗಿಂತ ಪ್ರತ್ಯೇಕವಾಗಿರಿಸಿದೆ.

ಈ ಶಸ್ತ್ರಚಿಕಿತ್ಸೆಯ ಪರಿವರ್ತನೀಯ ಸ್ವರೂಪ ಕುರಿತು ನಾರಾಯಣ ಹೆಲ್ತ್ ಸಿಟಿಯ ರೊಬೊಟಿಕ್ ಜಾಯಿಂಟ್ ರಿಪ್ಲೇಸ್ಮೆಂಟ್, ನೀ ರಿಪ್ಲೇಸ್ಮೆಂಟ್ ಸರ್ಜರಿಯ ಆರ್ಥೊಪಿಡಿಕ್ ಸರ್ಜನ್ ಡಾ.ಅಭಿನಂದನ್ ಎಸ್. ಪುನೀತ್, “ನಾರಾಯಣ ಹೆಲ್ತ್ ಸಿಟಿಯಲ್ಲಿ ನಮ್ಮ ಉದ್ದೇಶ ಸದಾ ನಮ್ಮ ರೋಗಿಗಳ ಸ್ವಾಸ್ಥ್ಯದ ಸುತ್ತಲೂ ಕೇಂದ್ರೀಕೃತವಾಗಿದೆ. ರೊಬೊಟಿಕ್ ಮೊಣಕಾಲು ಶಸ್ತ್ರಚಿಕಿತ್ಸೆಯ ತಂತ್ರಜ್ಞಾನ ಪರಿಚಯಿಸುವುದು ನಮಗೆ ಸಹಜ ಹೆಜ್ಜೆಯಾಗಿದ್ದು ಅದು ಸರಿಸಾಟಿ ಇರದ ನಿಖರತೆ ಮತ್ತು ವೈಯಕ್ತಿಕಗೊಳಿಸಿದ ಆರೈಕೆ ನೀಡುತ್ತದೆ.

ನಾವು ನಮ್ಮ ರೋಗಿಗಳ ಜೀವನ ಉನ್ನತಗೊಳಿಸಲು ಶ್ರಮಿಸುತ್ತಿದ್ದೇವೆ ಮತ್ತು ಈ ಸುಧಾರಿತ ತಂತ್ರಜ್ಞಾನವು ನಮಗೆ ಅದನ್ನು ಸಾಧ್ಯವಾಗಿಸುತ್ತದೆ. ನಮ್ಮ ರೋಗಿಗಳು ಅವರ ಮೊಬಿಲಿಟಿ ಪಡೆಯುವುದು ಮತ್ತು ಸ್ವಾತಂತ್ರ್ಯ ಮರಳಿ ಪಡೆಯುವುದು ನಮ್ಮ ತಂಡಕ್ಕೆ ಅತ್ಯಂತ ದೊಡ್ಡ ಪುರಸ್ಕಾರವಾಗಿದೆ” ಎಂದರು.

ಸಾಂಪ್ರಾಯಿಕ ಚಿಕಿತ್ಸೆಗಳಿಗೆ ಹೋಲಿಸಿದರೆ ರೊಬೊಟಿಕ್ ಶಸ್ತ್ರಚಿಕಿತ್ಸೆಯು ಹೆಚ್ಚು ನಿಖರವಾಗಿರುತ್ತದೆ ಏಕೆಂದರೆ ಅದು ಮಾನವ ಕಣ್ಣುಗಳಿಗಿಂತ ಹೆಚ್ಚು ನಿಖರವಾಗಿ ಕಾಣುತ್ತದೆ. ಇದು ಮಾನವ ದೋಷ ಮತ್ತು ಅನಿಶ್ಚಿತತೆಗಳನ್ನು ತಪ್ಪಿಸಿ ಸರಿಸಾಟಿ ಇರದ ನಿಖರತೆ ಮತ್ತು ಸ್ಥಿರತೆ ನೀಡುತ್ತದೆ.

ಪ್ರೊಫೆಸರ್ ಅರುಣ್ ರಂಗನಾಥನ್, “ನಮ್ಮ ಗುರಿ ರೋಗಿಗಳ ಆರ್ಥಿಕ ಹಿನ್ನೆಲೆ ಏನೇ ಇರಲಿ, ಎಲ್ಲ ರೋಗಿಗಳಿಗೂ ಅತ್ಯಾಧುನಿಕ ಮೊಣಕಾಲಿನ ಬದಲಾವಣೆ ತಂತ್ರಜ್ಞಾನ ದೊರೆಯುವಂತೆ ಮಾಡುವುದು” ಎಂದರು. “ಈ ಪ್ರಕ್ರಿಯೆಯಲ್ಲಿ ರಿಯಲ್-ಟೈಮ್ ಮ್ಯಾಪಿಂಗ್ ಅನ್ನು ನಡೆಸುವ ಮೂಲಕ ರೋಗಿಯ ಮೊಣಕಾಲಿನ 3ಡಿ ಮಾಡೆಲ್ ಸೃಷ್ಟಿಸಲಾಗುತ್ತದೆ. ರೊಬೊಟಿಕ್ ಸಾಧನವು ಶಸ್ತ್ರಚಿಕಿತ್ಸೆ ನಿರ್ವಹಿಸುತ್ತದೆ, ಶಸ್ತ್ರಚಿಕಿತ್ಸಾ ತಜ್ಞರು ಅದರ ಪೂರ್ಣ ನಿಯಂತ್ರಣ ಕಾಪಾಡಿಕೊಳ್ಳುವ ಮೂಲಕ ಉತ್ತಮ ಫಲಿತಾಂಶ ಲಭ್ಯವಾಗುವಂತೆ ಮಾಡುತ್ತಾರೆ” ಎಂದರು.

ನಾರಾಯಣ ಹೆಲ್ತ್ ಸಿಟಿಯ ರೊಬೊಟಿಕ್ ನೀ ರೀಪ್ಲೇಸ್ಮೆಂಟ್, ನೀ ರೀಪ್ಲೇಸ್ಮೆಂಟ್ ಸರ್ಜರಿಯ ಆರ್ಥೊಪಿಡಿಕ್ ಸರ್ಜನ್ ಡಾ.ಪ್ರಶಾಂತ್ ಬಿ.ಎನ್. “ಜಾಯಿಂಟ್ ರೊಬೊಟ್ ಸಿಸ್ಟಂನ ಶಸ್ತ್ರಚಿಕಿತ್ಸೆಯ ನಿಖರತೆ ಹೆಚ್ಚು ಅನುಕೂಲಗಳನ್ನು ಹೊಂದಿದ್ದು ಅದರಲ್ಲಿ ಹೆಚ್ಚು ನಿಖರ ಇಂಪ್ಲಾಂಟ್ ಪ್ಲೇಸ್ಮೆಂಟ್ ಹೊಂದಿದ್ದು ಅದು ಸಹಜವಾದ ಶಸ್ತ್ರಚಿಕಿತ್ಸೆಯ ನಂತರ ಭಾವನೆ, ಸುತ್ತಮುತ್ತಲಿನ ಜೀವಕೋಶಗಳಿಗೆ ಗಾಯದ ತೊಂದರೆ ಕಡಿಮೆ, ಸೋಂಕಿನ ತೊಂದರೆ ಕಡಿಮೆ ಮತ್ತು ಬೇಗನೆ ಪುನಶ್ಚೇತನದಿಂದ ಬಹಳ ಕಡಿಮೆ ಆಸ್ಪತ್ರೆವಾಸವಿರುತ್ತದೆ. ಈ ನಿಖರ ಇಂಪ್ಲಾಂಟ್ ಪ್ಲೇಸ್ಮೆಂಟ್ ಇಂಪ್ಲಾಂಟ್ ಬಾಳಿಕೆ ಹೆಚ್ಚಿಸಿ, ಭವಿಷ್ಯದ ಪುನರ್ ಪರಿಶೀಲನೆಯ ಅಗತ್ಯ ಕಡಿಮೆ ಮಾಡುತ್ತದೆ” ಎಂದು ಹೇಳಿದರು.


Share It

You cannot copy content of this page