ನವದೆಹಲಿ: ಸದಾ ವಿದೇಶದಲ್ಲೇ ಇರುತ್ತಾರೆ ಎಂಬ ಆರೋಪ ಹೊತ್ತಿರುವ ಪ್ರಧಾನೊ ನರೇಂದ್ರ ಮೋದಿ ಚುನಾವಣೆ ಇದ್ದ ಕಾರಣಕ್ಕೆ ಕೆಲ ತಿಂಗಳಿಂದ ಯಾವುದೇ ವಿದೇಶ ಪ್ರವಾಸ ಮಾಡಿರಲಿಲ್ಲ. ಇದೀಗ ಮತ್ತೇ ಅವರ ವಿದೇಶ ಯಾತ್ರೆ ಆರಂಭವಾಗಿದೆ.
ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡಿದ ನಂತರ ಪ್ರಧಾನಿ ನರೇಂದ್ರ ಮೋದಿ, ಮೊದಲ ಬಾರಿಗೆ ರಷ್ಯಾ ಪ್ರವಾಸ ಕೈಗೊಳ್ಳಲಿದ್ದಾರೆ. ಎರಡು ದಿನಗಳ ಈ ಪ್ರವಾಸದಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜತೆಗೆ ಮಾತುಕತೆ ನಡೆಸಲಿದ್ದಾರೆ. ಉಭಯ ದೇಶಗಳ ಸಂಬಂಧಗಳ ಕುರಿತು ಚರ್ಚೆ ನಡೆಯಲಿದೆ.
ಉಕ್ರೇನ್ ಜತೆಗಿನ ಯುದ್ಧದ ಪರಿಸ್ಥಿತಿ ಈವರೆಗೆ ಸಂಫೂರ್ಣವಾಗಿ ಶಮನವಾಗಿಲ್ಲ. ಉಕ್ರೇನದ ಯುದ್ಧ ಆರಂಭವಾದಾಗ ರಷ್ಯಾದ ಜತೆಗಿನ ಉತ್ತಮ ಬಾಂಧವ್ಯದ ನೆರವಿನಿಂದ ಭಾರತೀಯರ ರಕ್ಷಣೆ ಮಾಡಲಾಯ್ತು ಎಂಬೆಲ್ಲ ಮಾತುಗಳು ಕೇಳಿಬಂದಿದ್ದವು. ಇದು ವಿಶ್ವಾದ್ಯಂತ ಪ್ರಸಂಸೆ ಗಳಿಸಿದರೆ, ದೇಶವಾಸಿಗಳಿಗೆ ಹೆಮ್ಮೆಯನ್ನು ಮೂಡಿಸಿತ್ತು. ಹಾಗೆಯೇ ಕೆಲವರ ಟೀಕೆಗೂ ಕಾರಣವಾಗಿತ್ತು.
ಇಂದು ರಷ್ಯಾಗೆ ತೆರಳಲಿರುವ ಪ್ರಧಾನಿ ನರೇಂದ್ರ ಮೋದಿ ರಾತ್ರಿ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಆತಿಥ್ಯ ಸ್ವೀಕರಿಸಲಿದ್ದಾರೆ. ಭಾರತ- ರಷ್ಯಾ ನಡುವಿನ ವಾರ್ಷಿಕ ಶೃಂಗಸಭೆಯ ಭಾಗವಾಗಿ ಈ ಮಾತುಕತೆ ನಡೆಯಲಿದೆ. ಬುಧವಾರ ಆಸ್ಟ್ರೀಯಾಗೆ ಪ್ರಧಾನಿ ಪ್ರವಾಸ ಬೆಳಸಲಿದ್ದು, ಅಲ್ಲಿ ಎರಡು ದಿನಗಳ ಕಾಲ ಅನೇಕ ರಾಜತಾಂತ್ರಿಕ ಮಾತುಕತೆ ನಡೆಸಲಿದ್ದಾರೆ.
ಮಣಿಪುರಕ್ಕೆ ರಾಹುಲ್ ಗಾಂಧಿ ಭೇಟಿ: ಇನ್ನು ವರ್ಷವಿಡೀ ವಿದೇಶ ಸುತ್ತುವ ಪ್ರಧಾನಿಗೆ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ ಕಾಣುತ್ತಿಲ್ಲ ಎಂಬ ಟೀಕೆಯಿಂದಲೇ ಬಿಜೆಪಿಗೆ ಹಿನ್ನಡೆ ಮಾಡಿದ ವಿಪಕ್ಷ ನಾಯಕ ರಾಹುಲ್ ಗಾಂಧಿ, ಮತ್ತೇ ಮಣಿಪುರ ಪ್ರವಾಸ ಕೈಗೊಂಡಿದ್ದಾರೆ. ಈ ವೇಳೆ ಅವರು ಗಲಭೆ ಸಂತ್ರಸ್ತರ ಜತೆಗೆ ಮಾತುಕತೆ ನಡೆಸಲಿದ್ದಾರೆ.