ನವಲಗುಂದ : ಪಟ್ಟಣದ ತಾಲೂಕ ಆಡಳಿತ ವತಿಯಿಂದ ನಾಡಪ್ರಭು ಕೆಂಪೇಗೌಡರ 515ನೇ ಜಯಂತಿ ಉತ್ಸವ ಮಿನಿ ವಿಧಾನಸೌಧ ಸಭಾಂಗಣದಲ್ಲಿ ನಾಡ ಪ್ರಭು ಶ್ರೀ ಕೆಂಪೇಗೌಡ ಜಯಂತೋತ್ಸವ ಶಾಲಾ ಮಕ್ಕಳಿಂದ ಅದ್ದೂರಿಯಾಗಿ ಆಚರಿಸಲಾಯಿತು,
ಕಾರ್ಯಕ್ರಮ ಉಪನ್ಯಾಸಕ, ಜಿ,ಬಿ ಹೊಳೆನವರ್. ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡ ಅವರ ಕೊಡುಗೆ ನಾಡಿಗೆ ಅಪಾರವಾಗಿದ್ದು, ಜನಪರ ಆಡಳಿತ ನಡೆಸುವುದು ಹೇಗೆ ಎಂದು ಅಂದಿನ ಕಾಲದಲ್ಲಿಯೇ ಅವರು ತಿಳಿಸಿಕೊಟ್ಟಿದ್ದಾರೆ. 16ನೇ ಶತಮಾನದಲ್ಲಿಯೇ ದೂರದೃಷ್ಟಿ ನಾಯಕರಾಗಿ ನಗರ ಎಂದರೆ ಹೇಗಿರಬೇಕು, ಕೆರೆಕಟ್ಟೆಗಳ ನಿರ್ಮಾಣದಿಂದ ಮನುಷ್ಯನಿಗಾ ಗುವ ಉಪಯೋಗವೇನು ಎಂದು ತಿಳಿಸಿಕೊಟ್‌ಟಿದ್ದಾರೆ. ಕೆಂಪೇಗೌಡರ ದೂರದೃಷ್ಟಿ ನಮ್ಮೆಲ್ಲರೂ ಮಾರ್ಗದರ್ಶನವಾಗಿದೆ. ಇಂತಹ ಮಹಾನ್ ನಾಯಕರ ಆದರ್ಶಗಳನ್ನು ಅರಿತು ಅವರ ಮಾರ್ಗದರ್ಶನದಲ್ಲಿ ಎಲ್ ಲರೂ ಮುಂದುವರೆಯಬೇಕು ಎಂದು ಹೇಳಿದರು.
ತಹಸೀಲ್ದಾರ್ ಸುಧೀರ್ ಸಾಹುಕಾರ್ ಮಾತನಾಡಿ ಬೆoದಕಾಳೂರ್ ಅನ್ನುವ ಮಹಾನಗರ ಬೆಂಗಳೂರು ಪರಿವರ್ತನೆ ಮಾಡಿದ ಕೀರ್ತಿ ಕೆಂಪೇ ಗೌಡ್ರರಿಗೆ ಹೇಳುತ್ತಾ ಎಲ್ಲರಿಗೂ ನಾಡ ಪ್ರಭು ಕೆಂಪೇಗೌಡರ 515ನೇ ಜಯಂತಿಯ ಹಾರ್ದಿಕ್ ಶುಭಾಶಯಗಳು ಎಂದು ಶುಭ ಕೋರಿದರು,
ಕಾರ್ಯಕ್ರಮದಲ್ಲಿ ಮಾಜಿ ಸೈನಿಕರು ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಕನ್ನಡಪರ ಸಂಘಟನೆಗಳ ಮುಖಂಡರು, ವಿವಿಧ ಸಂಘ-ಸಂಸ್ಥೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಸೇರಿದಂತೆ ಎಲ್ಲಾ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು ಇದೇ ಸಂದರ್ಭದಲ್ಲಿ ಪ್ರತಿಭಾವಂತ ಮಕ್ಕಳಿಗೆ ಗೌರವಿಸಿ ಸನ್ಮಾನಿಸಲಾಯಿತು