ಬೆಂಗಳೂರು: 2024 ರ ಲೋಕಸಭಾ ಚುನಾವಣೆ ಮತದಾನ ಇಂದಿಗೆ ಅಂತ್ಯವಾಗಿದ್ದು, ಮತದಾನೋತ್ತರ ಸಮೀಕ್ಷೆಗಳು ಬಿಡುಗಡೆಯಾಗಿವೆ. ಬಹುತೇಕ ಸಮೀಕ್ಷೆಗಳು ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬರುವುದು ಬಹುತೇಕ ಖಚಿತ ಎನ್ನುತ್ತಿವೆ.
ಬಹುತೇಕ ಎಲ್ಲ ಸಮೀಕ್ಷೆಗಳು ಒಂದೇ ರೀತಿಯ ಜನಾಭಿಪ್ರಾಯವನ್ನು ಸಂಗ್ರಹಿಸಿದ್ದು, ಬಹುತೇಕ ಸಮೀಕ್ಷೆಗಳು ಎನ್‌ಡಿಎಗೆ 370 ಸ್ಥಾನಗಳ ಆಸುಪಾಸಿನಲ್ಲಿಯೇ ಅಂಕಿಗಳನ್ನು ಕೊಟ್ಟಿವೆ. ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟಕ್ಕೆ ಬಹುತೇಕ 157 ಸರಾಸರಿ ಸ್ಥಾನಗಳು ಬರಲಿವೆ ಎಂದು ಹೇಳಿವೆ.
ಸಮೀಕ್ಷೆಗಳ ಪ್ರಕಾರ ಬಿಜೆಪಿ ಉತ್ತರ ಭಾರತದಲ್ಲಿ ಕ್ಲೀನ್ ಸ್ವೀಪ್ ಮಾಡಲಿದೆ. ಬಹುತೇಕ ಸಮೀಕ್ಷೆಗಳು ದೆಹಲಿಯಲ್ಲಿ ಏಳಕ್ಕೆ ಏಳು ಸ್ಥಾನ ಬಿಜೆಪಿ ಗೆಲ್ಲಲಿದೆ ಎಂದು ಹೇಳಿವೆ. ಅದೇ ರೀತಿ ಉತ್ತರ ಪ್ರದೇಶ, ರಾಜಸ್ಥಾನ, ಗುಜರಾತ್, ಬಿಹಾರ, ಒಡಿಸ್ಸಾ ರಾಜ್ಯಗಳಲ್ಲಿ ಬಿಜೆಪಿ ಮೇಲುಗೈ ಸಾಧಿಸಲಿದೆ ಎಂಬುದು ಚುನಾವಣೋತ್ತರ ಸಮೀಕ್ಷೆಗಳ ಸಾರಾಂಶವಾಗಿದೆ.
ದಕ್ಷಿಣ ಭಾರತದಲ್ಲಿಯೂ ಬಿಜೆಪಿ ತನ್ನ ಸ್ಥಾನಗಳನ್ನು ವಿಸ್ತಾರ ಮಾಡಿಕೊಳ್ಳಲಿದೆ ಎನ್ನುತ್ತಿವೆ ಸಮೀಕ್ಷೆಗಳು ತೆಲಂಗಾಣದಲ್ಲಿ ಏಳರಿಂದ ಎಂಟು ಸ್ಥಾನವನ್ನು ಬಿಜೆಪಿ ಪಡೆದುಕೊಳ್ಳುವ ನಿರೀಕ್ಷೆಯಿದೆ ಎನ್ನಲಾಗುತ್ತಿದೆ. ಇನ್ನು ಕರ್ನಾಟಕದಲ್ಲಿ ಕಳೆದ ಬಾರಿಗಿಂತ ಏಳೆಂದು ಸ್ಥಾನಗಳನ್ನು ಬಿಜೆಪಿ ಕಳೆದುಕೊಳ್ಳಲಿದೆ ಎಂದು ಹೇಳಲಾಗುತ್ತಿದೆ.
ಕರ್ನಾಟಕದಲ್ಲಿ 18 ಸ್ಥಾನ: ಕರ್ನಾಟಕದಲ್ಲಿ ಬಹುತೇಕ ಸಮೀಕ್ಷೆಗಳ ಒಟ್ಟಾರೆ, ಸರಾಸರಿ ಬಿಜೆಪಿ 18 ಸ್ಥಾನಗಳು ಬರಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಬಿಜೆಪಿ ನಾಯಕರು 25 ಸ್ಥಾನ ಗೆಲ್ಲುವುದಾಗಿ ಹೇಳಿದ್ದರೆ, ಕಾಂಗ್ರೆಸ್ ನಾಯಕರು 20 ಸ್ಥಾನ ಗೆಲ್ಲುವ ವಿಶ್ವಾಸ ಹೊಂದಿದ್ದರು. ಜೆಡಿಎಸ್ ಎರಡು ಸ್ಥಾನಗಳಲ್ಲಿ ಗೆಲ್ಲುವ ಸಾಧ್ಯತೆಯಿದ್ದು, ಒಟ್ಟಾರೆ ಮೈತ್ರಿಗೆ 20 ಸ್ಥಾನ ಸಿಗಲಿದೆ ಎಂಬುದು ಸಮೀಕ್ಷೆಗಳ ಲೆಕ್ಕಾಚಾರ.
ಕಳೆದ ಚುನಾವಣೆಯಲ್ಲಿ ಬಿಜೆಪಿ 25 ಸ್ಥಾನಗಳನ್ನು ಗೆದ್ದಿತ್ತು. ಈ ಬಾರಿ ಏಳು ಸ್ಥಾನ ಕಳೆದುಕೊಳ್ಳಲಿದೆ ಎನ್ನಲಾಗಿದೆ. ಕಾಂಗ್ರೆಸ್ ಒಂದು ಸ್ಥಾನ ಮಾತ್ರ ಗೆದ್ದಿತ್ತು. ಈ ಸಲ ಏಳು ಸ್ಥಾನ ಹೆಚ್ಚಿಸಿಕೊಳ್ಳಲಿವೆ ಎನ್ನಲಾಗಿದೆ. ಜೆಡಿಎಸ್ ಕಳೆದ ಬಾರಿ ಒಂದು ಸ್ಥಾನ ಗೆದ್ದಿದ್ದು, ಈ ಸಲ ಮತ್ತೊಂದು ಸ್ಥಾನ ಹೆಚ್ಚಿಸಿಕೊಳ್ಳಲಿದೆ ಎನ್ನುತ್ತವೆ ಸಮೀಕ್ಷೆಗಳು.
ಸಮೀಕ್ಷೆ ಇಂಡಿಯಾ ಎನ್‌ಡಿಎ
ಇAಡಿಯಾ ನ್ಯೂಸ್ 125 371
ಮ್ಯಾಟ್ರಿಟ್ 133 378
ಜನ್ ಕೀಬಾತ್ 151 377
ನ್ಯೂಸ್ ಎಕ್ಸ್ 175 371
ಲೋಕ್‌ಪಾಲ್ 172 380
ಪೋಲ್ ಆಫ್ ಪೋಲ್ 160 366
ಡಿ ಡೈನಾಮಿಕ್ 125 388
ಕರ್ನಾಟಕದ ಸರಾಸರಿ ಫಲಿತಾಂಶ:
ಬಿಜೆಪಿ 20-22
ಕಾಂಗ್ರೆಸ್ 3-5
ಜೆಡಿಎಸ್ 2

