ರಾಜಕೀಯ ಸುದ್ದಿ

ದೇಶದಲ್ಲಿ ಇನ್ನೂ 20 ವರ್ಷ ಎನ್‌ಡಿಎ ಅಧಿಕಾರದಲ್ಲಿರುತ್ತದೆ: ಡಾ.ಕೆ.ಸುಧಾಕರ್

Share It

ಬೆಂಗಳೂರು: ದೇಶದಲ್ಲಿ ಇನ್ನೂ 20 ವರ್ಷ ಎನ್‌ಡಿಎ ಅಧಿಕಾರದಲ್ಲಿರುತ್ತದೆ. ಕಾಂಗ್ರೆಸ್‌ನಿAದ ಅಲ್ಲಾಡಿಸಲು ಸಾಧ್ಯವಿಲ್ಲ ಎಂದು ಸಂಸದ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ದೇಶದಲ್ಲಿ ಇನ್ನೂ 20 ವರ್ಷ ಎನ್‌ಡಿಎ ಅಧಿಕಾರದಲ್ಲಿರುತ್ತದೆ. ಕಾಂಗ್ರೆಸ್ ಕೈಯ್ಯಲ್ಲಿ ಎನ್‌ಡಿಎ ಸರಕಾರವನ್ನು ಅಲುಗಾಡಿಸಲು ಕೂಡ ಸಾಧ್ಯವಾಗುವುದಿಲ್ಲ. ಆದರೂ, ಕಾಂಗ್ರೆಸ್ ನಾಯಕರು ಎನ್‌ಡಿಎ ಸರಕಾರ ಬೀಳಿಸುವ ಕನಸು ಕಾಣುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.

ಎನ್‌ಡಿಎ ಸರಕಾರ ಇನ್ನೂ 20 ವರ್ಷ ಅಧಿಕಾರದಲ್ಲಿರುತ್ತದೆ. ಆದರೆ, ಕಾಂಗ್ರೆಸ್ ಇನ್ನೆಷ್ಟು ದಿನ ಅಸ್ವಿತ್ವದಲ್ಲಿರುತ್ತದೆ ಎಂದು ಹೇಳುವುದಕ್ಕೂ ಸಾಧ್ಯವಿಲ್ಲ. ಈಗಾಗಲೇ ಕಾಂಗ್ರೆಸ್ ಬಹುತೇಕ ರಾಜ್ಯಗಳಿಂದ ಕಣ್ಮರೆಯಾಗಿದೆ. ಕರ್ನಾಟಕದಲ್ಲಿಯೂ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಕಣ್ಮರೆಯಾಗುವ ಕ್ಷಣಗಳು ದೂರವಿಲ್ಲ ಎಂದಿದ್ದಾರೆ.


Share It

You cannot copy content of this page