ಆರೋಗ್ಯ ಉಪಯುಕ್ತ ಸುದ್ದಿ

NEET ಪರೀಕ್ಷಾ ದಿನಾಂಕ ನಿಗದಿ: ಆನ್ ಲೈನ್ ನೋಂದಣಿ ಪ್ರಕ್ರಿಯೆ ಆರಂಭ

Share It

ಕೋಟ: ವೈದ್ಯಕೀಯ ಪದವಿಗೆ ಸೇರಬಯಸುವ ಅಕಾಂಕ್ಷಿಗಳಿಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಪರೀಕ್ಷಾ ದಿನಾಂಕವನ್ನು ಪ್ರಕಟಿಸಿದ್ದು, ಮೇ. 3 ರಂದು ಪರೀಕ್ಷೆ ನಡೆಯಲಿದೆ.

ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ-ಪದವಿ (NEET UG) 2026 ರ ಅಧಿಸೂಚನೆ ಬಿಡುಗಡೆ ಮಾಡಿದೆ. ಇದರೊಂದಿಗೆ, ದೇಶದ ಅತಿದೊಡ್ಡ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ನೋಂದಣಿ ಪ್ರಾರಂಭವಾಗಿದೆ. ಪರೀಕ್ಷೆಯನ್ನು ಮೇ 3, 2026 ರ ಭಾನುವಾರ ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ ಪರೀಕ್ಷೆ ನಡೆಯಲಿದೆ ಮತ್ತು ಕಳೆದ ವರ್ಷದಂತೆ ಈ ಬಾರಿ ಕೂಡ ಪರೀಕ್ಷಾ ಅವಧಿ 180 ನಿಮಿಷಗಳು (3 ಗಂಟೆ) ನಿಗದಿ ಮಾಡಲಾಗಿದೆ.

ಆನ್‌ಲೈನ್ ಅರ್ಜಿ ಶುಲ್ಕವನ್ನು ಮಾರ್ಚ್ 8 ರಂದು ರಾತ್ರಿ 11:50 ರವರೆಗೆ ಪಾವತಿಸಬಹುದು. ಭರ್ತಿ ಮಾಡಿದ ಅರ್ಜಿಯಲ್ಲಿ ದೋಷಗಳಿದ್ದಲ್ಲಿ ಅದರ ತಿದ್ದುಪಡಿ ವಿಂಡೋ ಮಾರ್ಚ್ 10 ರಿಂದ 12, 2026 ರವರೆಗೆ ತೆರೆದಿರುತ್ತದೆ. ಅಭ್ಯರ್ಥಿಗಳು ನೀಟ್ ಯುಜಿ 2026 ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕ 1,700 ರೂ., ಆರ್ಥಿಕವಾಗಿ ದುರ್ಬಲ ವರ್ಗ (EWS) ಮತ್ತು ಇತರ ಹಿಂದುಳಿದ ವರ್ಗಗಳ (OBC) ವರ್ಗಗಳಿಗೆ ಇದು 1,600 ರೂ. ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST) ಅಭ್ಯರ್ಥಿಗಳಿಗೆ ಶುಲ್ಕ 1,000 ರೂ. ಆನ್‌ಲೈನ್ ಅರ್ಜಿ ಪ್ರಕ್ರಿಯೆ ಸಮಯದಲ್ಲಿ ಹೆಚ್ಚಿವರಿ ಜಿಎಸ್ ಟಿ ವಿಧಿಸಲಾಗುತ್ತದೆ.

ಭಾರತದ ಹೊರಗಿನ ಪರೀಕ್ಷಾ ಕೇಂದ್ರಗಳನ್ನು ಆಯ್ಕೆ ಮಾಡುವವರಿಗೆ ಶುಲ್ಕ 9,500 ರೂ. ಎಲ್ಲಾ ಅಭ್ಯರ್ಥಿಗಳು ಇಂಟರ್​ನೆಟ್ ಬ್ಯಾಂಕಿಂಗ್, ಡೆಬಿಟ್ ಕಾರ್ಡ್‌ಗಳು, ಕ್ರೆಡಿಟ್ ಕಾರ್ಡ್‌ಗಳು ಮತ್ತು UPI ಮೂಲಕ ತಮ್ಮ ನೋಂದಣಿ ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಬಹುದಾಗಿದೆ.
ಪರೀಕ್ಷಾ ಕೇಂದ್ರಗಳನ್ನು ಪ್ರವೇಶ ಪತ್ರದೊಂದಿಗೆ ಘೋಷಿಸಲಾಗುತ್ತದೆ. ಆದರೆ ಇದಕ್ಕೂ ಮುನ್ನವೇ ನಗರಗಳ ಮಾಹಿತಿ ತಿಳಿಸಲಾಗುತ್ತದೆ.

13 ಭಾಷೆಗಳಲ್ಲಿ ನಡೆಯಲಿದೆ ಪರೀಕ್ಷೆ: ಈ ವರ್ಷ ಪರೀಕ್ಷೆಯನ್ನು ಹಿಂದಿ, ಇಂಗ್ಲಿಷ್, ಅಸ್ಸಾಮಿ, ಬಂಗಾಳಿ, ಗುಜರಾತಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು ಮತ್ತು ಉರ್ದು ಈ 13 ಭಾಷೆಗಳಲ್ಲಿ ನಡೆಸಲಾಗುವುದು. “ಹಿಂದಿನ ಪರೀಕ್ಷೆಗಳಲ್ಲಿ, 2.2 ರಿಂದ 2.4 ಮಿಲಿಯನ್ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು ಮತ್ತು 2.1 ರಿಂದ 2.3 ಮಿಲಿಯನ್ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

“2024 ರಲ್ಲಿ ಅತಿ ಹೆಚ್ಚು ಅರ್ಜಿ ದಾಖಲಾಗಿದ್ದು, 2.4 ಮಿಲಿಯನ್ ಮೀರಿತ್ತು, 2.33 ಮಿಲಿಯನ್ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ನೀಟ್ ಯುಜಿ ವೈದ್ಯಕೀಯ (MBBS), ನರ್ಸಿಂಗ್, ದಂತ, ಪಶುವೈದ್ಯಕೀಯ ಮತ್ತು ಪಶುಸಂಗೋಪನಾ ಕಾಲೇಜುಗಳ ಪ್ರವೇಶಕ್ಕಾಗಿ ನಡೆಯುವ ಪರೀಕ್ಷೆಯಾಗಿದೆ. ಇದು ಆಯುರ್ವೇದ, ಹೋಮಿಯೋಪತಿ, ಯುನಾನಿ ಮತ್ತು ಸಿದ್ಧ ಕೋರ್ಸ್‌ಗಳಿಗೂ ಆಯ್ಕೆ ಮಾಡುತ್ತದೆ.


Share It

You cannot copy content of this page