ಶಿವಮೊಗ್ಗ : ಸಿರಿಗನ್ನಡ ವೇದಿಕೆ,ಮಹಿಳಾ ವೇದಿಕೆ ವತಿಯಿಂದ ಜೂ.೮ ರಂದು ಹಾಲಪ್ಪ ಜೈಲರ್ ಅವರ ಚಿನ್ನದ ಚಾಟಿ ಪುಸ್ತಕ ಬಿಡುಗಡೆ ಮತ್ತು ಚುಟುಕು ರಚನಾ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸಿರಿಗನ್ನಡ ವೇದಿಕೆ ರಾಜ್ಯಾಧ್ಯಕ್ಷ ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಖ್ಯ ಅತಿಥಿಗಳಾಗಿ ಮಾನವತಾ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎಸ್.ಆರ್.ಲಕ್ಷ್ಮೀನಾರಾಯಣ್ ಆಗಮಿಸಿದ್ದರು. ಕರ್ನಾಟಕ ಸಂಘ ಗೌರವ ಕಾರ್ಯದರ್ಶಿ ಆಶಾಲತ ಎಂ ಅಧ್ಯಕ್ಷತೆ ವಹಿಸಿದ್ದರು.
ಸಿರಿಗನ್ನಡ ವೇದಿಕೆಯ ಡಿ.ಬಿ.ಚಂದ್ರಕುಮಾರ್ ,ನಿರಂಜನಕುಮಾರ್ ಹಾಜರಿದ್ದರು. ಕೃತಿ ಕುರಿತು ಆರ್.ಎನ್.ಈಶ್ವರಪ್ಪ ಮಾತನಾಡಿದರು. ತೀರ್ಥಹಳ್ಳಿ ತಾಲೂಕು ಅಧ್ಯಕ್ಷ ಸುರೇಶ್ ಕೆ.ಎನ್. ಬಟ್ಟೆ ಚೀಲ ಮತ್ತು ಸಸಿ ವಿತರಣೆ ಮಾಡಿದರು. ಕುಮಾರಿ ಚಿನ್ಮಯಿ ಪ್ರಾರ್ಥಿಸಿದರು.
ನಂದಾ ಪ್ರೇಮಕುಮಾರ್ ಅತಿಥಿ ಪರಿಚಯ ಮಾಡಿದರು. ನಳಿನ ಬಾಲಸುಬ್ರಹ್ಮಣ್ಯ ಕಾರ್ಯಕ್ರಮ ನಿರೂಪಿಸಿದರು. ಡಾ.ನಾಗರತ್ನಮ್ಮ ವಂದಿಸಿದರಿ. ಕೃತಿಕಾರ ಹಾಲಪ್ಪ ಜೈಲರ್ ವೇದಿಯಲ್ಲಿದ್ದರು.

