Kannda new movie: “ನೈಸ್ ರೋಡ್” ಚಿತ್ರಕ್ಕೆ ನೈಸ್ ರೋಡ್ ಕಂಪನಿಯಿಂದ ನೋಟಿಸ್ ಜಾರಿ!
ಬೆಂಗಳೂರು : “ನೈಸ್ ರೋಡ್” ಸಿನಿಮಾಕ್ಕೆ ಸಂಕಷ್ಟ ಎದುರಾಗಿದೆ. ಈಗಾಗಲೇ ತೆರೆ ಕಾಣಲು ಸಿದ್ಧವಾಗಿರುವ ನೈಸ್ ರೋಡ್ ಚಿತ್ರಕ್ಕೆ ನೈಸ್ ರೋಡ್ ಎಂದು ಹೆಸರು ಇಟ್ಟಿರುವುದನ್ನು ವಿರೋಧಿಸಿ ನೈಸ್ ರೋಡ್ ಕಂಪನಿಯು ನಿರ್ಮಾಪಕರಿಗೆ ಹೆಸರು ಬದಲಿಸುವಂತೆ ನೋಟಿಸ್ ನೀಡಿದೆ
ಈಗಾಗಲೇ ವಾಣಿಜ್ಯ ಮಂಡಳಿಯಲ್ಲಿ ಈ ಹೆಸರು ನೋಂದಣಿಯಾಗಿದೆ. ಎಲ್ಲೆಡೆ ಪ್ರಚಾರ ಸಹ ಚಿತ್ರ ತಂಡ ಪಡೆದಿದೆ. ಸೆನ್ಸಾರ್ ಮಂಡಳಿ ಸಹ ಚಿತ್ರಕ್ಕೂ ಹಾಗೂ ನೈಸ್ ರಸ್ತೆಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟ ಪಡಿಸಿ U/A ಸರ್ಟಿಫಿಕೇಟ್ ನೀಡಿದೆ. ಈಗ ನೈಸ್ ರೋಡ್ ಕಂಪನಿಯು ಹೀಗೆ ಹೇಳುತ್ತಿದೆ ಎಂದು ಚಿತ್ರದ ನಿರ್ಮಾಪಕ “ಗೋಪಾಲ್ ಹಳೆಪಾಳ್ಯ” ಹೇಳಿದ್ದಾರೆ.
ಚಿತ್ರ ತಂಡದ ಜೊತೆಗೆ ಈ ಕುರಿತು ಮಾತು ಕತೆ ನಡೆಸುತ್ತೇವೆ. ಅಂತಿಮವಾಗಿ ನಿರ್ಧಾರವನ್ನು ತೆಗೆದುಕೊಂಡು ತಿಳಿಸುತ್ತೇವೆ ಎಂದು ನಿರ್ಮಾಪಕರು ಹೇಳಿದ್ದಾರೆ.
ಚಿತ್ರದಲ್ಲಿ “ಧರ್ಮ” ರವರು ಮುಖ್ಯ ಪಾತ್ರದಲ್ಲಿ ನಟನೆ ಮಾಡಿದ್ದಾರೆ. “ಗೋಪಾಲ್ ಹಳೆಪಾಳ್ಯ ಹಾಗೂ ಗೋವಿಂದೇಗೌಡ, ಮಂಜುನಾಥ್ ರಂಗಾಯಣ, ಪ್ರಭು” ಇನ್ನೂ ಅನೇಕರು ನಟನೆ ಮಾಡಿದ್ದಾರೆ. ಸಿನಿಮಾಗೆ ಸಂಗೀತವನ್ನು “ಸತೀಶ್ ಆರ್ಯನ್” ನೀಡಿದ್ದಾರೆ.


