ಬೆಂಗಳೂರು: ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಇವತ್ತು ಸಂಸತ್ತಿನಲ್ಲಿ 2024-25 ನೇ ಸಾಲಿನ ಬಜೆಟ್ ಮಂಡಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕಕ್ಕೆ ಚೊಂಬು ಕೊಟ್ಟಿದ್ದಾರೆ ಎಂದು ಹೇಳಿದರು.
ಹಣಕಾಸು ಸಚಿವೆ ನಿರ್ಮಲಾ ಅವರು ಮಂಡಿಸಿದ ಬಜೆಟ್ ಗಾತ್ರ 48, 21,000 ಲಕ್ಷ ಕೋಟಿ ರೂಪಾಯಿ. ಆದರೆ, ಅವರು 14.1 ಲಕ್ಷ ಕೋಟಿ ರೂ. ಸಾಲ ಕೂಡ ತೆಗೆದುಕೊಂಡಿದ್ದಾರೆ. ಹಣಕಾಸು ಸಚಿವೆ ಆಂದ್ರ ಪ್ರದೇಶ ಮತ್ತು ಬಿಹಾರ ರಾಜ್ಯಗಳಿಗೆ ಅತಿಹೆಚ್ಚು ಅನುದಾನ ನೀಡಿದ್ದಾರೆ, ಬೇರೆ ರಾಜ್ಯಗಳಿಗೆ ಅವರು ಹೆಚ್ಚಿನ ಅನುದಾನವಾಗಲೀ ಹೊಸ ಯೋಜನೆಗಳಾಗಲೀ ನೀಡಿಲ್ಲ ಎಂದು ಹೇಳಿದರು.
ಆ ಎರಡು ರಾಜ್ಯಗಳಿಗೆ ಯಾಕೆ ಹೆಚ್ಚನ ಅನುದಾನ ಸಿಕ್ಕಿದೆ ಅಂತ ಅರ್ಥಮಾಡಿಕೊಳ್ಳುವುದು ಕಷ್ಟವೇನಲ್ಲ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಉಳಿಯಬೇಕಾದರೆ ಬಿಹಾರ ಮತ್ತು ಆಂದ್ರ ಪ್ರದೇಶ ರಾಜ್ಯಗಳ ನೆರವು ಬೇಕೇ ಬೇಕು ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.