ಫ್ಯಾಷನ್ ಸಿನಿಮಾ ಸುದ್ದಿ

ನಿವೇದಿತಾ-ಚಂದನ್ ಶೆಟ್ಟಿ ಡೈವೋರ್ಸ್

Share It

ಬೆಂಗಳೂರು: ಮದುವೆ ವೇಳೆಯಲ್ಲಿಯೇ ನೂರಾರು ವಿವಾದಗಳಿಗೆ ಕಾರಣವಾಗಿದ್ದ ನಿವೇದಿತಾಗೌಡ ಮತ್ತು ಚಂದನ್ ಶೆಟ್ಟಿ ವಿವಾಹ ಮುರಿದುಬಿದ್ದಿದ್ದು, ಇಬ್ಬರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಬಿಗ್‌ಬಾಸ್ ಮೂಲಕ ಜೋಡಿಯಾಗಿದ್ದ ಚಂದನ್ ಮತ್ತು ನಿವೇದಿತಾ ಗೌಡ, ನಾಲ್ಕು ವರ್ಷದ ಹಿಂದೆ ಮದುವೆಯಾಗಿದ್ದರು. ಇದೀಗ ಪರಸ್ಪರ ಒಪ್ಪಿಗೆಯೊಂದಿಗೆ ಬೆಂಗಳೂರಿನ ೨ ನೇ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಪಡೆದುಕೊಂಡಿದ್ದಾರೆ.

ಈ ನಡುವೆ ಪರಸ್ಪರ ಯಾವುದೇ ಆರೋಪ ಪ್ರತ್ಯಾರೋಪಗಳಿಲ್ಲದೆ ಇಬ್ಬರು ವಿಚ್ಛೇದನಕ್ಕೆ ಈ ಇಬ್ಬರು ಮುಂದಾಗಿದ್ದಾರೆ. ನಿವೇದಿತಾ ಗೌಡ ವಿದೇಶದಲ್ಲಿ ತನ್ನ ಮುಂದಿನ ವಿದ್ಯಾಭ್ಯಾಸ ಮಾಡಬೇಕೆಂದು ಬಯಸಿದ್ದಾರೆ, ನಾನು ಸಿನಿಮಾಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಬೇಕೆಂದಿದ್ದೇನೆ. ಹೀಗಾಗಿ, ನಾನು ವಿದೇಶಕ್ಕೆ ತೆರಳಲು ಸಾಧ್ಯವಿಲ್ಲ. ಹೀಗಾಗಿ, ವಿಚ್ಛೇದನ ಪಡೆಯಲು ಮುಂದಾಗಿದ್ದೇವೆ ಎಂದು ನ್ಯಾಯಾಲಯದ ಮುಂದೆ ಚಂದನ್ ತಿಳಿಸಿದ್ದಾರೆ ಎನ್ನಲಾಗಿದೆ.

ಕೌಟುಂಬಿಕ ನ್ಯಾಯಾಲಯದಲ್ಲಿ ಇಬ್ಬರನ್ನು ಒಂದುಗೂಡಿಸುವ ಪ್ರಯತ್ನ ನಡೆಸಿದ್ದು, ಅದೆಲ್ಲವೂ ವಿಫಲವಾದ ಹಿನ್ನೆಲೆಯಲ್ಲಿಯೇ ನ್ಯಾಯಾಲಯ ಇಂದು ವಿಚ್ಛೇದನ ಮಂಜೂರು ಮಾಡಿದೆ. ಇದೊಂದು ಸ್ಯಾಂಡಲ್‌ವುಡ್ ಗೆ ಶಾಕ್ ಆಗಿದ್ದು, ಅವರು ಈವರೆಗೆ ಎಲ್ಲಿಯೂ ಈ ಬಗ್ಗೆ ಮಾತನಾಡಿರಲಿಲ್ಲ. ಅವರ ನಡುವಿನ ಬಿರುಕಿನ ಬಗ್ಗೆ ಯಾವುದೇ ಸುಳಿವು ಕೂಡ ಸಿಕ್ಕಿರಲಿಲ್ಲ.

ಕಾರ್ಯಕ್ರಮದಲ್ಲಿ ಒಟ್ಟಿಗೆ ಭಾಗಿ:
ಇತ್ತೀಚೆಗೆ ನಡೆಯುತ್ತಿದ್ದ ಬಹುತೇಕ ಕಾರ್ಯಕ್ರಮಗಳಲ್ಲಿ ನಿವೇದಿತಾ ಮತ್ತು ಚಂದನ್ ಶೆಟ್ಟಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಈ ನಡುವೆ ಇತ್ತೀಚೆಗೆ ನಡೆದ ಪರಮೇಶ್ವರ್ ಗುಂಡ್ಕಲ್ ಅವರ ನಿರ್ದೇಶನದ ಡಾಲಿ ಧನಂಜಯ್ ಅಭಿನಯದ ಕೋಟಿ ಸಿನಿಮಾದ ಬಿಡುಗಡೆ ಸಮಾರಂಭದಲ್ಲಿ ಇಬ್ಬರು ಕಾಣಿಸಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಬಿಗ್ ಬಾಸ್ ಸ್ಪರ್ಧಿಗಳೆಲ್ಲ ಹಂಚಿಕೊಳ್ಳುವ ವೇಳೆ, ಚಂದನ್ ಕೂಡ ತಮ್ಮ ಬಿಗ್‌ಬಾಸ್ ದಿನಗಳನ್ನು ನೆನಪಿಸಿಕೊಂಡರು. ಈ ವೇಳೆ ಅಕುಲ್ ಬಾಲಾಜಿ, ನಿವೇದಿತಾ ಸಿಕ್ಕಿದ್ದು ಕೂಡ ಅಲ್ಲಿಯೇ ಎಂದು ಕಾಲೆಳೆದರು. ಈ ವೇಳೆ ಅವರ ನಡುವೆ ಯಾವುದೇ ಬಿರುಕು ಇದ್ದಂತೆ ಕಾಣಿಸಿರಲಿಲ್ಲ.

ಪ್ರೀತಿ ನಿವೇದನೆಯೂ ವಿವಾದ !
ಬಿಗ್ ಬಾಸ್‌ನಲ್ಲಿ ಒಟ್ಟಿಗೆ ಭಾಗವಹಿಸಿದ್ದ ಈ ಇಬ್ಬರು, ನಂತರ ಆಗಾಗ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಇದ್ದಕ್ಕಿದ್ದಂತೆ ದಸರಾ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ವೇಳೆ ಚಂದನ್, ನಿವೇದಿತಾಗೆ ಪ್ರಪೋಸ್ ಮಾಡಿದ್ದರು. ಅಲ್ಲಿಯೇ ಉಂಗುರ ತೊಡಿಸಿ, ಎಂಗೇಜ್ಮೆAಟ್ ಮಾಡಿಕೊಂಡಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು, ಸರಕಾರಿ ಕಾರ್ಯಕ್ರಮವನ್ನು ಹುಡುಗಾಟಿಕೆಯ ಕಾರ್ಯಕ್ರಮವನ್ನಾಗಿಸಿಕೊಂಡರು ಎಂದು ಅನೇಕರು ಟೀಕಿಸಿದ್ದರು. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಅನೇಕರು ಒತ್ತಾಯಿಸಿದ್ದರು.

updating……


Share It

You cannot copy content of this page