ನವದೆಹಲಿ: ಲೋಕಸಭಾ ಸ್ಫೀಕರ್ ಓಂ ಪ್ರಕಾಶ್ ಬಿರ್ಲಾ ವಿರುದ್ಧ ಅವಿಶ್ವಾಸ ಮಂಡನೆಗೆ ಸಿದ್ದತೆ ನಡೆಸಿದ್ದು, ಇಂದು ಮದ್ಯಾಹ್ನ ಪ್ರಸ್ತಾವನೆ ಚರ್ಚೆಗೆ ಬರುವ ಸಾಧ್ಯತೆಯಿದೆ.
ಪ್ರಸ್ತಾವನೆಗೆ ಈವರೆಗೆ 119 ಸಂಶದರು ಸಹಿ ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆಡಳಿತ ಪಕ್ಷದ ನೀತಿಗಳು, ನರವಣೆ ಪುಸ್ತಕದಲ್ಲಿರುವ ವಿಷಯಗಳು, ಎಫ್‌ಸ್ಟಿನ್ ಫೈಲ್ಸ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹೆಸರು ಸೇರಿ ಇನ್ನಿತರ ವಿಚಾರಗಳ ಚರ್ಚೆಗೆ ಸಂಬಂಧಿಸಿದಂತೆ ಸ್ಫೀಕರ್ ತೆಗೆದುಕೊಂಡ ಏಕಪಕ್ಷೀಯ ತೀರ್ಮಾನದ ವಿರುದ್ಧ ಅವಿಶ್ವಾಸ ಮಂಡನೆಯಾಗಲಿದೆ.
ಪ್ರತಿಪಕ್ಷಗಳ ಅವಿಶ್ವಾಸ ಮಂಡನೆ ಬೆನ್ನಲ್ಲೇ ಆಡಳಿತ ಪಕ್ಷ ಬಿಜೆಪಿ ಮತ್ತು ಮಿತ್ರಪಕ್ಷಗಳ ಎನ್‌ಡಿಎ ಒಕ್ಕೂಟ ತನ್ನೆಲ್ಲ ಸಂಸದರನ್ನು ಸದನದಲ್ಲಿ ಹಾಜರಿರುವಂತೆ ಸೂಚನೆ ನೀಡಿದೆ. ಗದ್ದಲದ ನಡುವೆಯೇ ಅವಿಶ್ವಾಸ ಮಂಡನೆಯಾಗುವ ಸಾಧ್ಯತೆಯಿದೆ.

