ರಾಜಕೀಯ ಸುದ್ದಿ

ಕೇಂದ್ರದ ಕ್ಯಾಬಿನೆಟ್ ನಲ್ಲಿ ಯಾವುದೇ ಸ್ಥಾನ ಬೇಡ, ಆದರೆ…

Share It

ನವದೆಹಲಿ: ನರೇಂದ್ರ ಮೋದಿ ಅವರನ್ನು ನಿನ್ನೆ ನಡೆದ ಎನ್​​ಡಿಎ ಸಭೆಯಲ್ಲಿ ಸಂಸದೀಯ ನಾಯಕನಾಗಿ ನೇಮಕ ಮಾಡಲಾಗಿದೆ. ಈ ಮೂಲಕ ಬಿಜೆಪಿಯ ಮಿತ್ರಪಕ್ಷಗಳು ನಮ್ಮ ಬೆಂಬಲ ಮೋದಿಗೆ ಎಂದು ಹೇಳಿದೆ. ಸಭೆಯಲ್ಲಿ ಎನ್​​ಡಿಎಗೆ ಬೆಂಬಲ ನೀಡಿದ ಮಿತ್ರಪಕ್ಷಗಳ ನಾಯಕರು ಸೇರಿದರು.

ಸಭೆಯಲ್ಲಿ ಮಿತ್ರಪಕ್ಷದ ಸಂಸದರು ಬಂದು ತಮ್ಮ ಬೆಂಬಲ ಹಾಗೂ ಯಾಕೆ ಮೋದಿಗೆ ಬೆಂಬಲ ನೀಡುತ್ತಿದ್ದೇವೆ ಎಂಬ ಬಗ್ಗೆ ಮಾತನಾಡಿದ್ದಾರೆ. ಈ ಪೈಕಿ ಜೆಡಿಯು ಮುಖ್ಯಸ್ಥ-ಬಿಹಾರ ಸಿಎಂ ನಿತೀಶ್ ಕುಮಾರ್ ಹಾಗೂ ಟಿಡಿಪಿ ಮುಖ್ಯಸ್ಥ, ಆಂಧ್ರಪ್ರದೇಶದ ನಿಯೋಜಿತ ಸಿಎಂ ಚಂದ್ರಬಾಬು ನಾಯ್ಡು ಕೂಡ ಮಾತನಾಡಿದ್ದಾರೆ. ಈ ಸಭೆಯಲ್ಲಿ ಚಂದ್ರಬಾಬು ನಾಯ್ಡು ಮಾತನಾಡಿ, ಮೋದಿ ಕ್ಯಾಬಿನೆಟ್​​​ನಲ್ಲಿ ಯಾವುದೇ ಸ್ಥಾನ ಬೇಡ, ಯಾವುದೇ ಬೇಡಿಕೆಯನ್ನು ಇಡುವುದಿಲ್ಲ, ಆದರೆ ನಮ್ಮ ರಾಜ್ಯಕ್ಕೆ ಕೇಂದ್ರ ಸಹಾಯ ಮಾಡಬೇಕು ಎಂದು ಹೇಳಿದ್ದಾರೆ.

ಆಂಧ್ರಪ್ರದೇಶದ ಅಭಿವೃದ್ಧಿಯ ಬಗ್ಗೆ ಆಸಕ್ತಿ ಹೊಂದಿರುವ ನಾಯ್ಡು ಅವರು ಆಂಧ್ರಕ್ಕೆ ಹೆಚ್ಚು ಒತ್ತು ನೀಡಿದ್ದಾರೆ. ಕೇಂದ್ರದಲ್ಲಿ ಮೋದಿ ಅವರು ಯಾವ ಸಚಿವ ಸ್ಥಾನ ನೀಡಿದರು ನಾವು ಖುಷಿಯಿಂದ ಸ್ವೀಕಾರ ಮಾಡುತ್ತೇವೆ ಎಂದು ಹೇಳಿದ್ದಾರೆ. ಇನ್ನು ಬಿಜೆಪಿ ಈಗಾಗಲೇ ಜೆಡಿಯೂ ಮತ್ತು ಟಿಡಿಪಿ ಪಕ್ಷಕ್ಕೆ ತಲಾ 3-3 ಸಚಿವ ಸ್ಥಾನ ನೀಡಬಹುದು ಎಂದು ಹೇಳಲಾಗಿದೆ.

ಒಟ್ಟಿನಲ್ಲಿ ಎರಡು ಪಕ್ಷಕ್ಕೂ ಕೇಂದ್ರ ಅಧಿಕಾರಕ್ಕಿಂತ ತನ್ನ ರಾಜ್ಯದ ಅಭಿವೃದ್ಧಿಯಾಗುವುದು ಮುಖ್ಯ ಎಂದು ಹೇಳಲಾಗಿದೆ. ಈ ಇಬ್ಬರು ನಾಯಕರಿಗೆ ಬಿಹಾರ ಮತ್ತು ಆಂಧ್ರಪ್ರದೇಶದ ಅಭಿವೃದ್ಧಿ ಹೆಚ್ಚು ಮುಖ್ಯವಾಗಿದೆ. ಇನ್ನು ಈ ಸಭೆಯಲ್ಲಿ ಚಂದ್ರಬಾಬು ನಾಯ್ಡು, ಪ್ರಾದೇಶಿಕ ಆಕಾಂಕ್ಷೆಗಳು ಮತ್ತು ರಾಷ್ಟ್ರೀಯ ಹಿತಾಸಕ್ತಿಗಳು ಸಮಾನಾಂತರವಾಗಿ ಸಾಗಬೇಕು. ಸಮಾಜದ ಎಲ್ಲಾ ಸ್ತರಗಳಲ್ಲಿ ಸಮಗ್ರ ಅಭಿವೃದ್ಧಿಯನ್ನು ಮಾಡಬೇಕಿದೆ. ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಆಂಧ್ರಕ್ಕೆ ಕೇಂದ್ರದ ಸಹಾಯಬೇಕಾಗಿದೆ.

ತೆಲಂಗಾಣದಿಂದ ಕಳೆದುಕೊಂಡಿದ್ದ ಹೈದರಾಬಾದ್‌ಗೆ ಬದಲಾಗಿ ಅಮರಾವತಿಯಲ್ಲಿ ಹೊಸ ರಾಜಧಾನಿ ನಿರ್ಮಾಣವಾಗಬೇಕಿದೆ. ಮುಂದಿನ ದಿನಗಳಲ್ಲಿ ಅದಕ್ಕಾಗಿ ಕೇಂದ್ರ ಸಹಾಯಬೇಕಾಗಿದೆ. ಪೋಲವರನ್ ನೀರಾವರಿ ಯೋಜನೆಯನ್ನು ಪೂರ್ಣಗೊಳಿಸಲು ಮತ್ತು ಸಾಂಪ್ರದಾಯಿಕ ಎದುರಾಳಿ ಜಗನ್ ಮೋಹನ್ ರೆಡ್ಡಿ ಹಿಮ್ಮೆಟ್ಟಿಸಲು ಬಿಜೆಪಿ ಮತ್ತು ಕೇಂದ್ರ ಅಗತ್ಯ ಇದೆ ಎಂದು ಹೇಳಿದರು


Share It

You cannot copy content of this page