ಕಲಬುರ್ಗಿ: ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರದ ಚುನಾವಣೆಯ ಮತ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಚಂದ್ರಶೇಖರ್ ಪಾಟೀಲ್ ಗೆಲುವು ಸಾಧಿಸಿದ್ದಾರೆ.
ನೆನ್ನೆಯಿಡೀ ಮತ ಎಣಿಕೆ ಕಾರ್ಯ ನಡೆದು, ಪ್ರಥಮ ಪ್ರಾಶಸ್ತ್ಯದ ಅಂತಿಮ ಎಂಟನೇ ಸುತ್ತಿನ ಮತ ಎಣಿಕೆ ಕಾರ್ಯ ಬಾಕಿಯಿತ್ತು. ಅದೀಗ ಮುಕ್ತಾಯವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಚಂದ್ರಶೇಖರ ಪಾಟೀಲ ಅವರು 39,496 ಮತಗಳು ಪಡೆದಿದ್ದು, 4,446 ಮತಗಳ ಅಂತರದಿAದ ಗೆಲುವು ಸಾಧಿಸಿದ್ದಾರೆ.

ಪ್ರತಿಸ್ಪರ್ಧಿಯಾದ ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ 35,050 ಮತಗಳನ್ನು ಪಡೆದುಕೊಂಡಿದ್ದರೆ,
ಸ್ವತಂತ್ರ ಅಭ್ಯರ್ಥಿ ಎನ್.ಪ್ರತಾಪರೆಡ್ಡಿ ಅವರು 17,421 ಮತ ಪಡೆದಿದ್ದಾರೆ. ಒಟ್ಟು 12,512 ಮತಗಳು ತಿರಸ್ಕೃತವಾಗಿವೆ. ಒಟ್ಟಾರೆ 1,09,027 ಮತಗಳು ಚಲಾವಣೆಯಾಗಿವೆ.

