ಹುಣಸಗಿ: ಈಶಾನ್ಯ ಪದವೀಧರರ ಮತ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಬಿಜೆಪಿ ಪಕ್ಷದ ಅಭ್ಯರ್ಥಿ ಅಮರನಾಥ ಪಾಟೀಲರ ಪರವಾಗಿ ಪಟ್ಟಣದಲ್ಲಿ ಪ್ರಚಾರ ಮಾಡಲಾಯಿತು.
ಚುನಾವಣಾ ಸಂಚಾಲಕ ಹೊನ್ನಕೇಶವ ದೇಸಾಯಿ ಮಾತನಾಡಿ, ಪಟ್ಟಣದ ಶಾಲಾ ಕಾಲೇಜು, ಸಂಘ ಸಂಸ್ಥೆಗಳಿಗೆ ಮತ್ತು ಪಧವೀಧರರ ಮನೆಗಳಿಗೆ ತೆರಳಿ ಪಾಟೀಲರು ತಮ್ಮ ಅಧಿಕಾರದ ಅವಧಿಯಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡುವ ಮೂಲಕ ಪದವಿಧರರ ಸಮಸ್ಯೆಗೆ ಸ್ಪಂಧಿಸಿದ್ದಾರೆ.
ಈ ಬಾರಿಯೂ ಕೂಡಾ ಪದವಿಧರರ ಸಮಸ್ಯೆಗಳನ್ನು ಪರಿಹರಿಸಬೇಕೆಂಬ ನಿಟ್ಟಿನಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದಾರೆ ಪದವಿಧರರ ಸಮಸ್ಯೆ ಪರಿಹರಿಸಲು ಬಿ.ಜೆ.ಪಿ ಪಕ್ಷದದಿಂದ ಮಾತ್ರ ಸಾಅದ್ಯ ಹೀಗಾಗಿ ಪಾಟೀಲ ಅವರಿಗೆ ಮೊದಲ ಪ್ರಾಶಸ್ತ್ಯದ ಮತ ನೀಡುವ ಮೂಲಕ ಪ್ರಚಂಡ ಬಹುಮತದಿಂದ ಆರಿಸಿ ತರಬೇಕೇಂದು ಹೇಳಿದರು.
ಈ ಸಂಧರ್ಭದಲ್ಲಿ, HKES ಸದಸ್ಯರರಾದ ಪ್ರಶಾಂತ ಹೀರೇಮಠ, ಬಸವೇಶ್ವರ ಬ್ಯಾಂಕ್ ನಿರ್ದೇಶಕ ವಿಜಯಕುಮಾರ್ ಬಂಡೋಳಿ ,ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಹೇಶ ಸ್ಥಾವರಮಠ. ಕೋಶಾಧ್ಯಕ್ಷ ಆನಂದ ಬಾರಿಗಿಡದ ಸೇರಿದಂತೆ ಇತರರು ಇದ್ದರು.