ಸುದ್ದಿ

ನಾಯಕತ್ವ ಬೆಳವಣಿಗೆಗೆ ಎನ್ನೆಸ್ಸೆಸ್ ಸಹಕಾರಿ

Share It

ಹೊಸಕೋಟೆ : ವಿದ್ಯಾರ್ಥಿಗಳಿಗೆ ಸಾಮಾಜಿಕ ಕಾರಗಳ ಜತೆಗೆ ನಾಯಕತ್ವಗುಣಗಳನ್ನು ಬೆಳೆಸಿಕೊಳ್ಳಲು ರಾಷ್ಟ್ರೀಯ ಸೇವಾ ಯೋಜನೆ ಶಿಬಿರಗಳು ಹೆಚ್ಚು ಸಹಕಾರಿ ಎಂದು ಪ್ರಾಂಶುಪಾಲ ಡಾ. ಮುನಿನಾರಾಯಣಪ್ಪ ತಿಳಿಸಿದರು.ತಾಲೂಕಿನ ಕಸಬಾ ಹೋಬಳಿ ದೊಡ್ಡ ಹುಲ್ಲೂರು ಗ್ರಾಮದಲ್ಲಿ ಹೊಸಕೋಟೆ ಸರಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆ ಶಿಬಿರದ ಸಮಾರೋಪ ಸಮಾರ ಈ ಸಮಾರಂಭದಲ್ಲಿ ಅವರು ಮಾತನಾಡಿದರುಮುಖ್ಯ ಶಿಕ್ಷಕಿ ವಿಜಯಲಕ್ಷ್ಮಿ ಮಾತನಾಡಿ, ಒಂದು ವಾರ ನಡೆದ ಶಿಬಿರದ ಈ ಕಾಠ್ಯಕ್ರಮದಲ್ಲಿ ವಿದ್ಯಾರ್ಥಿಗಳು ಶಾಲಾ ಆವರಣ,ನೀರಿನ ಟ್ಯಾಂಕ್ ಸ್ವಚ್ಛತೆ ಜತೆಗೆ ಶಾಲೆ ಆವರಣದಲ್ಲಿ ಗಿಡ ನೆಟ್ಟರು. ವೈದ್ಯರಿಂದ ಶಾಲಾ ಮಕ್ಕಳ ಆರೋಗ್ಯ ತಪಾಸಣೆ, ಪರಿಸರ ಹಾಗೂ ಆರೋಗ್ಯದ ಬಗ್ಗೆ ಅರಿವು ಕಾರ್ಯಕ್ರಮ ಹಾಗೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಮಕ್ಕಳಲ್ಲಿನ ಪ್ರತಿಭೆ ಗುರುತಿಸುವ ಕೆಲಸಮಾಡಿದರು. ಅಲ್ಲದೇ, ಮಕ್ಕಳಿಗೆ ಗ್ರಾಮಸ್ಥರಿಗೆ ಸಾಮಾಜಿಕ ಜವಾಬ್ದಾರಿಗಳ ಬಗ್ಗೆಅರಿವು ಮೂಡಿಸಿದರು ಎಂದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಜಗೋಪಾಲ್ ಮಾತನಾಡಿ, ಪ್ರಾಥಮಿಕ ಹಂತದಲ್ಲೇ ಶಾಲಾ ಮಕ್ಕಳಿಗೆ ಸಂಸ್ಕಾರ, ನಡತೆ, ಶಿಸ್ತು, ಪರಿಸರ ಕಾಳಜಿ, ಆರೋಗ್ಯವಂತ ಜೀವನ ಶೈಲಿಯನ್ನು ಮೈಗೂಡಿಸಿ ಕೊಳ್ಳಲು ಶಿಬಿರದಲ್ಲಿ ಹಲವು ಕಾಠ್ಯಕ್ರಮಗಳು ಮಕ್ಕಳು, ಗ್ರಾಮಸ್ಥರಿಗೆ ಜಾಗೃತಿ ಮೂಡಿಸಲು ಸಹಕಾರಿಯಾಯಿತು ಎಂದರು.ಶಿಬಿರದಲ್ಲಿ ವಿದ್ಯಾರ್ಥಿಗಳು

ಸರಕಾರಿ ಶಾಲೆ ಆವರಣ ಸ್ವಚ್ಛತೆ, ಆರೋಗ್ಯ ತಪಾಸಣೆ, ಗ್ರಾಮದ ಕಲ್ಯಾಣಿ ಸ್ವಚ್ಛತೆ, ಹೂಳೆತ್ತುವ ಕಾರ್, ಗ್ರಾಮದ ದೇಗುಲಗಳಾದ ಆಂಜನೇಯ ಸ್ವಾಮಿ ಹಾಗೂ ಶಿವನ ದೇಗುಲಗಳ ಸುತ್ತಮುತ್ತ ಸ್ವಚ್ಚತೆ ಹಾಗೂ ಸಸಿ ನೆಡುವ ಕಾರಗಳು ಗಮನಸಳೆದವು. ಪ್ರೌಢಶಾಲೆ ಮುಖ್ಯ ಶಿಕ್ಷಕ ಪ್ರಸಾದ್, ಉಪನ್ಯಾಸಕರಾದ ಅಶ್ವತ್‌ನಾರಾಯಣ್, ಡಾ. ಈರಣ್ಣ, ಶಿಬಿರಾಧಿಕಾರಿಗಳಾದ ರಾಜೇಶ್ವರಿ, ವೀರಭದ್ರ ಸಿ, ಸಹ ಶಿಬಿರಾಧಿಕಾರಿಗಳಾದ ಹರೀಶ್, ಅನುಶ್ರೀ, ಎನ್‌ಎಸ್‌ಎಸ್ ಸ್ವಯಂ ಸೇವಕರು ಹಾಜರಿದ್ದರು.


Share It

You cannot copy content of this page