ಪ್ರಜ್ವಲ್ ಗೆ ಪುರುಷತ್ವ-ವೈದ್ಯಕೀಯ ತಪಾಸಣೆ: ಬಳಿಕ ಕೋರ್ಟ್ ಗೆ ಹಾಜರುಪಡಿಸಲು ಎಸ್ಐಟಿ ಸಿದ್ಧತೆ
ಬೆಂಗಳೂರು: ಅಶ್ಲೀಲ ವಿಡಿಯೋ ಮತ್ತು ಲೈಂಗಿಕ ದೌರ್ಜನ್ಯ-ಅತ್ಯಾಚಾರ ಆರೋಪದ ಪ್ರಕರಣಗಳಲ್ಲಿ ಮೋಸ್ಟ್ ವಾಂಟೆಡ್ ಆಗಿದ್ದ ಎ1 ಆರೋಪಿ ಪ್ರಜ್ವಲ್ ರೇವಣ್ಣ ಅವರನ್ನು ಕಳೆದ ರಾತ್ರಿ ಬಂಧಿಸಲಾಗಿದೆ.
ಜರ್ಮನಿಯ ಮ್ಯೂನಿಚ್ ನಗರದಿಂದ ನಿನ್ನೆ ರಾತ್ರಿ ಪ್ರಜ್ವಲ್ ರೇವಣ್ಣ ಬೆಂಗಳೂರಿನ ದೇವನಹಳ್ಳಿಯ ಕೆಂಪೇಗೌಡ ಇಂಟರ್ ನ್ಯಾಶನಲ್ ಏರ್ಪೋರ್ಟ್ ಗೆ ಬಂದ ಮೇಲೆ ವಿಶ್ರಾಂತಿಗೆ ಅವಕಾಶ ನೀಡಿ, ಬಳಿಕ ಕಳೆದ ರಾತ್ರಿ 1:20 ಕ್ಕೆ ಕಾರಿನಲ್ಲಿ ಐವರು ಮಹಿಳಾ ಎಸ್ಐಟಿ ಅಧಿಕಾರಿಗಳು ಸಿಐಡಿ ಕಚೇರಿಗೆ ಕರೆದೊಯ್ದುರು.
ನಂತರ ಪ್ರಜ್ವಲ್ ರೇವಣ್ಣ ಅವರಿಗೆ ರಾತ್ರಿಯ ಊಟ ನೀಡಿ ಮಲಗಲು ಅವಕಾಶ ನೀಡಲಾಯಿತು. ಬಳಿಕ ಕಂದು ಬೆಳಗ್ಗೆ ಪ್ರಜ್ವಲ್ ರೇವಣ್ಣ ಅವರನ್ನು ಪುರುಷತ್ವ ಪರೀಕ್ಷೆಗೆ ಒಳಪಡಿಸಲು ಸನ್ನದ್ಧರಾಗಿದ್ದಾರೆ. ಇದಕ್ಕಾಗಿ ಸಿಐಡಿ ಕಚೇರಿಗೆ ಬಂದು ಶಿವಾಜಿನಗರದ ಬೌರಿಂಗ್ ಆಸ್ಪತ್ರೆಗೆ ಪುರುಷತ್ವ ಪರೀಕ್ಷೆಗೆ ಪ್ರಜ್ವಲ್ ಕರೆದೊಯ್ಯಲು ಮುಂದಾಗಿದ್ದಾರೆ.
ಬೌರಿಂಗ್ ಆಸ್ಪತ್ರೆಯಲ್ಲಿ ಪುರುಷತ್ವ ಪರೀಕ್ಷೆ ಜೊತೆಗೆ ವೈದ್ಯಕೀಯ ತಪಾಸಣೆ ನಡೆಸಿ ಬಳಿಕ ಪ್ರಜ್ವಲ್ ಅವರನ್ನು ಕೋರ್ಟ್ ಗೆ ಕರೆದೊಯ್ದು ವಿಚಾರಣೆಗೆ ಹಾಜರುಪಡಿಸಲು ಎಸ್ಐಟಿ ಅಧಿಕಾರಿಗಳು ಮುಂದಾಗಿದ್ದಾರೆ.