ಕ್ರೀಡೆ ಸುದ್ದಿ

ಒಲಂಪಿಕ್ಸ್ ನ ವಸತಿ ವ್ಯವಸ್ಥೆಯಲ್ಲಿ ದೋಷ !! ಕ್ರೀಡಾ ಪಟುಗಳಿಂದ ದೂರು!!

Share It

ಪ್ಯಾರಿಸ್: 2024 ರ ಪ್ಯಾರಿಸ್ ನಲ್ಲಿ ಎರಡು ಪದಕಗಳನ್ನು ಗೆದ್ದ ಇಟಲಿಯ ಈಜುಗಾರ ಥಾಮಸ್ ಸೆಕಾನ್ ನ ವಿಡಿಯೋವೊಂದು ಚರ್ಚೆಗೆ ಗ್ರಾಸವಾಗಿದೆ. 100 ಮೀಟರ್ ಬ್ಯಾಕ್? ಸ್ಟ್ರೋಕ್? ಸ್ಪರ್ಧೆಯಲ್ಲಿ ಚಿನ್ನದ ಪದಕ 4 ×100 ಮೀಟರ್ ಫ್ರೀಸ್ಟೈಲ್ ರಿಲೇಯಲ್ಲಿ ಕಂಚು ಪಡೆದಿದ್ದಾರೆ. ಸೆಕಾನ್ ವಸತಿ ವ್ಯವಸ್ಥೆಯನ್ನು ವಿರೋಧಿಸಿ ಉದ್ಯಾನದಲ್ಲಿ ಟವಲ್ ಹಾಕಿಕೊಂಡು ನೆಲದ ಮೇಲೆ ಮಲಗಿದ್ದಾರೆ. ವಸತಿ ವ್ಯವಸ್ಥೆ ಸರಿ ಇಲ್ಲ ಎಂದು ಹೇಳಿದ್ದಾರೆ.

ರೋವರ್ ಹುಸೇನ್ ಅಲಿರೆಜಾ ಹಂಚಿಕೊಂಡಿರುವ ಸ್ಟೋರಿ ಅಲ್ಲಿ ಸೆಕಾನ್ ಉದ್ಯಾನದಲ್ಲಿ ಮಲಗಿರುವ ದೃಶ್ಯ ಇದೆ. ವಸತಿ ಬಗ್ಗೆ ದೂರು ನೀಡಿರುವ ಸೆಕಾನ್ ಅಲ್ಲಿ ಹವಾ ನಿಯಂತ್ರಕ ಇಲ್ಲ. ಇದರಿಂದ ಹಲವು ಕ್ರೀಡಾ ಪಟುಗಳು ಹೊರ ಹೋಗಿದ್ದಾರೆ. ನನಗೆ ಮಧ್ಯಾನ ಮಲಗುವ ಅಭ್ಯಾಸ ವಿದೆ. ಆದರೆ ಇಲ್ಲಿನ ಶಬ್ದದಿಂದ ನಾನು ಹಿಂಸೆಗೆ ಅನುಭವಿಸಿದ್ದೇನೆ ಎಂದು ಹೇಳಿದ್ದಾರೆ.

ಜೊತೆಗೆ ಆಹಾರ ಸಹ ಕೆಟ್ಟದಾಗಿದೆ. ಇದು ಎಲ್ಲರಿಗೂ ತಿಳಿಯದ ವಾಸ್ತವ ಸಂಗತಿ ಎಂದು ಹೇಳಿದ್ದಾರೆ. ನಾನು ಫೈನಲ್ಸ್ಗೆ ತಲುಪಲಿಲ್ಲ ಎಂಬ ನಿರಾಶೆ ಇದೆ. ಆದರೆ ನಾನು ನೆಮ್ಮದಿಯಿಂದ ಮಲಗಲು ಆಗುತ್ತಿಲ್ಲ ಎಂದು ದೂರಿದ್ದಾರೆ.

ಇನ್ನೊಬ್ಬ ಪಟು ಕೊಕೊ ಗೌಫ್ ಕೂಡ ಈ ಬಗ್ಗೆ ದೂರನ್ನು ನೀಡಿದ್ದಾರೆ. ಯುಎಸ್‌ಎ ಟೆನಿಸ್ ತಂಡವು ವಸತಿ ಬಿಟ್ಟು ಬೇರೆ ಕಡೆ ಹೊರೆಟಿತ್ತು. ಸದ್ಯ ಭಾರತೀಯ ಕ್ರೀಡಾ ಪಟುಗಳಿಗೆ ಭಾರತೀಯ ಕ್ರೀಡಾ ಸಚಿವಾಲಯವು 40 ಪೋರ್ಟಬಲ್ ಹವಾ ನಿಯಂತ್ರಣಗಳನ್ನು ಕಳುಹಿಸಿ ಕೊಟ್ಟಿದೆ.


Share It

You cannot copy content of this page