ಬೆಂಗಳೂರು: ನಗರದಲ್ಲಿ ಸುರಿದ ಭಾರಿ ಮಳೆಗೆ ಸಂಚಾರ ಅಸ್ತವ್ಯಸ್ಥವಾಗುವ ಜತೆಗೆ ನೋರೆಂಟು ಸಮಸ್ಯೆಗಳನ್ನು ಹುಟ್ಟುಹಾಕಿದೆ. ಮೆಟ್ರೋ ಟ್ರ್ಯಾಕ್ ಮೇಲೆ ಮರವೊಂದು ಮುರಿದು ಬಿದ್ದ ಪರಿಣಾಮ ಮೆಟ್ರೋ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಭಾನುವಾರ ವೀಕೆಂಡ್ ಮೂಡ್ನಲ್ಲಿದ್ದ ಬೆಂಗಳೂರಿನ ಜನರಿಗೆ ಮಳೆ ಶಾಕ್ ನೀಡಿದೆ. ನಗರದಾದ್ಯಂತ ಮಳೆಯ ಆರ್ಭಟ ಜೋರಾಗಿದ್ದು, ಅನೇಕ ಅವಾಂತರಗಳು ಸೃಷ್ಟಿಯಾಗಿವೆ. ಅಲ್ಲಲ್ಲಿ ವಾಹನ ಸವಾರರು ಪರದಾಟ ನಡೆಸಿದ್ದಾರೆ. ರಾಮಕೃಷ್ಣ ಆಶ್ರಮದ ಬಳಿ ಬೃಹತ್ ಮರವೊಂದು ಮೆಟ್ರೋ ಟ್ರಾö್ಯಕ್ ಮೇಲೆ ಬಿದ್ದಿದ್ದು, ಇದರಿಂದಾಗಿ ಮೆಟ್ರೋ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ವೈಟ್ಫೀಲ್ಡ್ ಮತ್ತು ಚಲ್ಲಘಟ್ಟ ನಡುವಿನ ಮೆಟ್ರೋ ಸಂಚಾರದಲ್ಲಿ ವ್ಯತ್ಯಯವಾಗಿದ್ದು, ಟ್ರನಿಟಿ, ಎಂ.ಜಿ ರಸ್ತೆಯರವೆಗಿನ ಮೆಟ್ರೋ ಸಂಚಾರವನ್ನು ನಿಲ್ಲಿಸಲಾಗಿದೆ. ಇಂದಿರಾ ನಗರದಿಂದ ವೈಟ್ಪೀಲ್ಡ್ ನಡುವೆ ಮಾತ್ರ ಮೆಟ್ರೋ ಸಂಚಾರ ನಡೆಸಲಾಗುತ್ತಿದೆ.
ಕೆ.ಪಿ.ಅಗ್ರಹಾರದಲ್ಲಿ ಮಳೆಯಿಂದ ಬೈಕ್ಗಳು ಕೆಟ್ಟು ನಿಂತು ಬೈಕ್ ಸವಾರರು ಪರದಾಟ ನಡೆಸಿದ್ದಾರೆ. ಸೈಲೆಂಸರ್ಗೆ ನೀರು ತುಂಬಿಕೊAಡ ಪರಿಣಾಮ ಬೈಕ್ಗಳು ಇದ್ದಕ್ಕಿದ್ದಂತೆ ಕೆಟ್ಟುನಿಂತಿವೆ. ಶಾಂತಿನಗರ ವ್ಯಾಪ್ತಿಯ ನೀಲಸಂದ್ರದಲ್ಲಿ ಕಾರುಗಳ ಮೇಲೆ ಮರಬಿದ್ದು ಕಾರುಗಳು ಜಖಂವಾಗಿರುವ ಘಟನೆ ನಡೆದಿದೆ.
updating……………

