ಚಿಕ್ಕಣ್ಣನಿಗೆ ಸಂಕಷ್ಟ ತಂದೊಡ್ಡಿದ ಡಿ ಗ್ಯಾಂಗ್ ಜತೆಗಿನ ಪಾರ್ಟಿ
ಬೆಂಗಳೂರು : ನಟ ದರ್ಶನ್ ಮತ್ತು ಗ್ಯಾಂಗ್ ನ ಪೈಶಾಚಿಕ ಕೃತ್ಯದ ನೆರಳು ನಟ ಚಿಕ್ಕಣ್ಣನಿಗೂ ಸಂಕಷ್ಟ ತಂದೊಡ್ಡಿದ್ದು, ಆತನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ರೇಣುಕಾ ಸ್ವಾಮಿ ಕೊಲೆ ನಡೆದ ದಿನ ಆತನಿಗೆ ಥಳಿಸಿದ ನಂತರ ದರ್ಶನ್ ಮತ್ತು ಗ್ಯಾಂಗ್, ಬ್ರ್ಯೂಕ್ ರೆಸ್ಟೋ ಬಾರ್ ನಲ್ಲಿ ಪಾರ್ಟಿ ಮಾಡಿತ್ತು. ಈ ಪಾರ್ಟಿಯಲ್ಲಿ ಭಾಗವಹಸಿವಂತೆ ದರ್ಶನ್, ಚಿಕ್ಕಣ್ಣ ನಿಗೆ ಆಹ್ವಾನ ನೀಡಿದ್ದರು. ಆಗ ಚಿಕ್ಕಣ್ಣ ಪಾರ್ಟಿಯಲ್ಲಿ ಭಾಗವಹಿಸಿದ್ದು, ಇಂದು ನಡೆದ ಮಹಜರು ವೇಳೆ ಚಿಕ್ಕಣ್ಣ ಅಲ್ಲಿದ್ದಿದ್ದು ಗೊತ್ತಾಗಿದೆ.
ಪಾರ್ಟಿಯಲ್ಲಿ ಚಿಕ್ಕಣ್ಣ ಇದ್ದ ಬಗ್ಗೆ ಮಾಹಿತಿ ಗೊತ್ತಾಗುತ್ತಿದ್ದಂತೆ, ನಟ ಚಿಕ್ಕಣ್ಣನಿಗೆ ಪೊಲೀಸರು ಬುಲಾವ್ ಕೊಟ್ಟಿದ್ದಾರೆ. ಬಾರ್ ನಲ್ಲಿ ಮಹಜರು ವೇಳೆಯೂ ಹಾಜರಿದ್ದ ಚಿಕ್ಕಣ್ಣ, ನಂತರ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಯಿತು.
ವಿಚಾರಣೆ ನಂತರ ಠಾಣೆಯಿಂದ ಹೊರಬಂದ ನಟ ಚಿಕ್ಕಣ್ಣ, ಅಂದು ಪಾರ್ಟಿಯಲ್ಲಿ ನಾನು ಭಾಗವಹಿಸಿದ್ದೆ. ಹೀಗಾಗಿ, ವಿಚಾರಣೆಗೆ ಕರೆದಿದ್ದಾರೆ ನಾನು ನನಗೆ ಗೊತ್ತಿರುವ ವಿಚಾರಗಳನ್ನು ಹಂಚಿಕೊಂಡಿದ್ದೇನೆ. ತನಿಖೆ ಪ್ರಗತಿಯಲ್ಲಿರುವ ಕಾರಣ ಅವೆಲ್ಲವನ್ನೂ ನಾನು ಹಂಚಿಕೊಳ್ಳುವಂತಿಲ್ಲ ಎಂದಿದ್ದಾರೆ.
ಒಟ್ಟಾರೆ, ದರ್ಶನ್ ಗ್ಯಾಂಗ್ ಮಾಡಿದ ಅನಾಚಾರದ ದಿನವೇ ನಡೆದ ಪಾರ್ಟಿಯಲ್ಲಿ ಭಾಗವಹಿಸಿದ್ದ ಕಾರಣಕ್ಕೆ ಹಾಸ್ಯ ನಟ ಚಿಕ್ಕಣ್ಣ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪೊಲೀಸರು ಕರೆದು ವಿಚಾರಣೆ ನಡೆಸಿದ್ದಾರೆ. ಅವರು ಕೂಡ ಸಹಕಾರ ನೀಡಿದ್ದಾರೆ. ಆದರೆ, ಮುಂದೆ ಪೊಲೀಸರು ಅವರನ್ನು ಯಾವ ತರಹ ಟ್ರೀಟ್ ಮಾಡ್ತಾರೆ ಎಂಬುದು ಕುತೂಹಲ ಮೂಡಿಸಿದೆ.