ಪ್ಯಾರಿಸ್ ಒಲಿಂಪಿಕ್ಸ್: ಸ್ವಪ್ನಿಲ್ ಕುಸಾಲೆಗೆ ಕಂಚಿನ ಪದಕ, ಕ್ರೀಡಾಕೂಟದಲ್ಲಿ ಭಾರತಕ್ಕೆ 3ನೇ ಪದಕ
ಶೂಟರ್ ಸ್ವಪ್ನಿಲ್ ಕುಸಾಲೆ ಒಲಿಂಪಿಕ್ಸ್ನಲ್ಲಿ 50 ಮೀಟರ್ ರೈಫಲ್ 3 ಪಿ ಈವೆಂಟ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಶೂಟರ್ ಎಂಬ ಖ್ಯಾತಿಗೆ ಪಾತ್ರರಾದರು. ಕುಸಾಲೆ 451.4 ಅಂಕ ಗಳಿಸಿ ಕಂಚಿನ ಪದಕ ಪಡೆದರು. ಚೀನಾದ ಯುಕುನ್ ಲಿಯು (ಚಿನ್ನ) ಮತ್ತು ಉಕ್ರೇನ್‌ನ ಸೆರ್ಹಿ ಕುಲಿಶ್ (ಕಂಚಿನ) ನಂತರದ ಸ್ಥಾನ ಪಡೆದರು.
ಶೂಟರ್ ಸ್ವಪ್ನಿಲ್ ಕುಸಾಲೆ ಅವರು ಪ್ಯಾರಿಸ್ 2024 ರ ಒಲಿಂಪಿಕ್ಸ್ನಲ್ಲಿ ಗುರುವಾರ ಚಟೌರೊಕ್ಸ್ನ ರಾಷ್ಟ್ರೀಯ ಶೂಟಿಂಗ್ ಕೇಂದ್ರದಲ್ಲಿ ನಡೆದ ಪುರುಷರ 50 ಮೀಟರ್ ರೈಫಲ್ 3 ಸ್ಥಾನಗಳ ಫೈನಲ್‌ನಲ್ಲಿ ಮೂರನೇ ಸ್ಥಾನ ಗಳಿಸಿದ ನಂತರ ಭಾರತದ ಮೂರನೇ ಪದಕವನ್ನು ಖಚಿತಪಡಿಸಿದರು. ತೀವ್ರ ಪೈಪೋಟಿಯ ನಡುವೆ ಅಸಾಧಾರಣ ಪ್ರದರ್ಶನ ನೀಡಿದ ಕುಸಾಲೆ ಫೈನಲ್‌ನಲ್ಲಿ 451.4 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದರು. ಸ್ವಪ್ನಿಲ್ ಈಗ ಪುರುಷರ 50 ಮೀಟರ್ ರೈಫಲ್ 3 ಸ್ಥಾನಗಳ ಸ್ಪರ್ಧೆಯಲ್ಲಿ ಒಲಿಂಪಿಕ್ ಪದಕ ಗೆದ್ದ ಮೊದಲ ಭಾರತೀಯ ಶೂಟರ್ ಎನಿಸಿಕೊಂಡರು. ಭಾರತದ ಶೂಟಿಂಗ್ ತಂಡವು ಯಾವುದೇ ಒಲಿಂಪಿಕ್ಸ್ನ ಒಂದೇ ಆವೃತ್ತಿಯಲ್ಲಿ ಮೂರು ಪದಕಗಳನ್ನು ಗೆದ್ದಿರುವುದು ಇದೇ ಮೊದಲು ಎಂಬುದು ವಿಶೇಷ.