ಬೆಂಗಳೂರು : ಸಿಲಿಕಾನ್ ಸಿಟಿ ಎಂದೇ ಪ್ರಖ್ಯಾತಿ ಪಡೆದಿರುವ ಬೆಂಗಳೂರಿನಲ್ಲಿ ಜನ ದಟ್ಟಣೆಯನ್ನು ಕಡಿಮೆ ಮಾಡಲೆಂದೇ ನಮ್ಮ ಮೆಟ್ರೋ ಸಂಚಾರ ಆರಂಭವಾಗಿದ್ದು. ಕಳೆದ 8 ತಿಂಗಳಿನಲ್ಲಿ ಸುಮಾರು 8 ಅವಘಡಗಳು ನಡೆದಿವೆ. ಇದರಿಂದಾಗಿ ಗಂಟೆಗಟ್ಟಲೆ ಮೆಟ್ರೋದ ನಿಲ್ಲುವಿಕೆಯಿಂದ ಸಾವಿರಾರು ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗುತ್ತಿದೆ.
ಮೆಟ್ರೋ ಆರಂಭವಾಗಿ 13 ವರ್ಷಗಳ ಕಳೆದರೂ ಇನ್ನು ಡೋರ್ ಗಳ ವ್ಯವಸ್ಥೆ ಆಗಿಲ್ಲ. 3 ತಿಂಗಳ ಹಿಂದೆಯೇ ಮೆಟ್ರೋ ಡೋರ್ ಅಳವಡಿಸುವುದಾಗಿ ಮಾಹಿತಿ ನೀಡಿತ್ತು . ಇಂದಿಗೂ ಅದು ಸಾಧ್ಯವಾಗಿಲ್ಲ. ಹಳಿಯ ಮೇಲೆ ಜಾರಿ ಬೀಳುವ ಸಾಧ್ಯತೆ ಇದರಿಂದಾಗಿಯೇ ಹೆಚ್ಚಿದೆ ಎಂದು ಪ್ರಯಾಣಿಕರು ಆರೋಪ ಮಾಡುತ್ತಾರೆ.
ನಮ್ಮ ಮೆಟ್ರೋ ಸಂಚಾರ ಹೆಚ್ಚು ಸುರಕ್ಷಿತ ಎಂದು ಹೇಳುತ್ತಿದ್ದ ಜನರೇ ಈಗ ಮೆಟ್ರೋದಲ್ಲಿ ಸಮಸ್ಯೆಗಳು ಉಂಟಾಗುತ್ತವೆ ಎಂದು ಹೇಳುತ್ತಿದ್ದಾರೆ. ಜನ ದಟ್ಟಣೆ ಹೆಚ್ಚಾಗುತ್ತಿರುವುದರಿಂದ ಕಿಡಿಗೇಡಿಗಳು ಮಹಿಳೆಯರ ಅಂಗಗಳನ್ನು ಮುಟ್ಟುವ, ಮೈ ಮೇಲೆ ಬಿರುವುದು, ಪಕ್ಕದಲ್ಲಿ ನಿಂತು ಅಸಭ್ಯ ವರ್ತನೆಯನ್ನು ಮಾಡುವುದು ಹೀಗೆ ಹಲವಾರು ಲೈಂಗಿಕ ಕಿರುಕುಳ ನೀಡುತ್ತಾರೆ. ಹೆಚ್ಚುವರಿ ಮಹಿಳಾ ಬೋಗಿ ಇಡಲು ಮೆಟ್ರೋಗೆ ಮನವಿ ಮಾಡಿದರು ಪ್ರಯೋಜನವಾಗುತ್ತಿಲ್ಲ. ಎಂದು ಹೇಳುತ್ತಾರೆ ಮೆಟ್ರೋ ಸಂಚಾರಿಗಳು.
8 ಅವಘಡಗಳನ್ನು ನೋಡುವುದಾದರೆ,
- ಇಂದಿರಾ ನಗರದ ಮೆಟ್ರೋ ನಿಲ್ದಾಣದಲ್ಲಿ ಮೊಬೈಲ್ ಜಾರಿ ಹಳಿಯ ಮೇಲೆ ಬಿದ್ದಿದ್ದರಿಂದ ಅದನ್ನು ತೆಗೆದುಕೊಳ್ಳಲು ಹಳಿಯ ಮೇಲೆ ಇಳಿದ ಮಹಿಳೆಯನ್ನು ನೋಡಿ ಮೆಟ್ರೋ ಸಿಬ್ಬಂದಿ ಪವರ್ ಕಟ್ ಮಾಡಿದರು. ಇದರಿಂದಾಗಿ 15 ನಿಮಿಷ ಮೆಟ್ರೋ ಸಂಚಾರ ಸ್ಥಗಿತ ವಾಗಿತು.
- ಜಾಲಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಯುವಕನೊಬ್ಬ ಮೆಜೆಸ್ಟಿಕ್ ಗೆ ಹೋಗಲು ಟೀಕೆಟ್ ಪಡೆದು ರೈಲು ಬರುತ್ತಿದ್ದಂತೆ ಹಳಿಗೆ ಹಾರಿದ್ದಾನೆ. ರೈಲು ಡಿಕ್ಕಿ ಹೊಡೆದು. ಸಂಚಾರ ಕೆಲ ಕಾಲ ಸ್ಥಗಿತವಾಗಿದೆ.
- ಜೆಪಿ ನಗರದ ಮೆಟ್ರೋ ನಿಲ್ದಾಣದಲ್ಲಿ ಕಪ್ಪು ಬೆಕ್ಕು ಕಾಣಿಸಿಕೊಂಡ ಕಾರಣ ಪವರ್ ಕಟ್ ಮಾಡಿ ಹೊಡಿಸಲು ಸಿಬ್ಬಂದಿ ಮುಂದಾಗಿದ್ದಾರೆ.
- ಜ್ಞಾನ ಭಾರತಿ ಮತ್ತು ಪಟ್ಟಣಗೆರೆ ನಿಲ್ದಾಣದ ಮಧ್ಯೆದಲ್ಲಿ ಕಾಣಿಸಿಕೊಂಡಿದ್ದ ವ್ಯಕ್ತಿ ಯೊಬ್ಬ ಅಚ್ಚರಿಯನ್ನು ಉಂಟು ಮಾಡಿತ್ತು. ಇದರಿಂದಾಗಿ ಇಲ್ಲ ಮಾರ್ಗದ ರೈಲುಗಳು ಸ್ಥಗಿತ ಗೊಂಡಿದ್ದವು.
- ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಲ್ಲಿ ಯುವಕನೊಬ್ಬ ಬರುತ್ತಿದ್ದ ರೈಲಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ. ಕಾರಣ ಖಿನ್ನತೆ ಎಂದು ತಿಳಿದು ಬಂದಿದೆ.
- ಹೊಸಳ್ಳಿ ಮೆಟ್ರೋ ನಿಲ್ದಾಣದಲ್ಲಿ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ. ಅಷ್ಟರಲ್ಲಿ ಸಿಬ್ಬಂದಿ ಅವನನ್ನು ರಕ್ಷಿಸಿದ್ದಾರೆ.
- ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ 4 ವರ್ಷದ ಮಗುವು ಆಟವಾಡುತ್ತಾ ಹಳಿಯ ಮೇಲೆ ಬಿದ್ದಿತ್ತು. ಅದನ್ನು ಸಿಬ್ಬಂದಿಗಳು ಕಾಪಾಡುವ ಪ್ರಯತ್ನ ಮಾಡಿದರು.
- ದೊಡ್ದಕಲ್ಲಸಂದ್ರ ದ ನಿಲ್ದಾಣದಲ್ಲಿ 57 ವರ್ಷದ ಮುದುಕ ಹಳಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡನು. ಇದರಿಂದಾಗಿ ಸಂಚಾರ ಸ್ಥಗಿತ ಗೊಂಡಿತ್ತು.