ರಾಜಕೀಯ ಸುದ್ದಿ

ಕಾಂಗ್ರೆಸ್ ಸರಕಾರದ ಸಾಧನೆಗೆ ಪದ್ಮನಾಭ ನಗರ “ಗ್ಯಾರಂಟಿ ಮಾಡೆಲ್”

Share It

ಪ್ರಮೋದ್ ಶ್ರೀನಿವಾಸ್ ನೇತೃತ್ವದಲ್ಲಿ ವಿನೂತನ ಪ್ರಯೋಗ

ಪ್ರತಿ ಫಲಾನುಭವಿಗಳ ಮನೆ ಬಾಗಿಲಿದೆ ಗ್ಯಾರಂಟಿ ಅನುಷ್ಠಾನ

ಬೆಂಗಳೂರು : ಕಾಂಗ್ರೆಸ್ ಸರಕಾರ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಿದೆ. ಆ ಗ್ಯಾರಂಟಿಗಳು ರಾಜ್ಯದ ಪ್ರತಿ ಪ್ರಜೆಗೂ ಸಿಗಬೇಕು ಎಂದರೆ ಏನು ಮಾಡಬೇಕು ಎಂಬುದಕ್ಕೆ ಪದ್ಮನಾಭ ನಗರ ಮಾಡೆಲ್ ಎನಿಸಿಕೊಳ್ಳುತ್ತಿದೆ.

ಪದ್ಮನಾಭ ನಗರ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಪ್ರಮೋದ್ ಶ್ರೀನಿವಾಸ್ ನೇತೃತ್ವದಲ್ಲಿ ರಾಜ್ಯದಲ್ಲಿಯೇ ಮೊದಲ ಪ್ರಯತ್ನವಾಗಿ ಕ್ಷೇತ್ರದ ಪ್ರತಿ ಮನೆಮನೆಗೆ ತಲುಪಿ ಗ್ಯಾರಂಟಿ ಅನುಷ್ಠಾನಗೊಳಿಸುವ ಪ್ರಯತ್ನ ನಡೆಯುತ್ತಿದೆ. ಇದಕ್ಕಾಗಿ ಪ್ರಮೋದ್ ಶ್ರೀನಿವಾಸ್ ನೇತೃತ್ವದ ಪದ್ಮನಾಭ ನಗರ ವಿಧಾನಸಭಾ ಕ್ಷೇತ್ರದ ಗ್ಯಾರಂಟಿ ಅನುಷ್ಠಾನ ಸಮಿತಿ ಕಾರ್ಯಪ್ರವೃತ್ತವಾಗಿದೆ.

ಪದ್ಮನಾಭನಗರ ಕ್ಷೇತ್ರದ ಎಂಟು ವಾರ್ಡ್ಗಳ ವ್ಯಾಪ್ತಿಯಲ್ಲಿ ಇರುವ ಗ್ಯಾರಂಟಿ ಫಲಾನುಭವಿಗಳ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಈ ಮಾಹಿತಿ ಸಂಗ್ರಹ ಮತ್ತು ನಿರ್ವಹಣೆಗೆ ಪ್ರಮೋದ್ ಅವರು ಒಂದು ಪ್ರತ್ಯೇಕ ತಂಡವನ್ನೇ ಕಟ್ಟಿಕೊಂಡಿದ್ದಾರೆ. ವಿದ್ಯಾವಂತರ ತಂಡವೊAದು ಬಡವರು, ದುರ್ಬಲ ವರ್ಗದವರಿಗೆ ಸಾಮಾಜಿಕ ಭದ್ರತೆ ಒದಗಿಸುವ ಯೋಜನೆಗಳನ್ನು ತಲುಪಿಸುವ ಕೆಲಸಕ್ಕಾಗಿ ಹಗಲಿರುಳು ಶ್ರಮಿಸುತ್ತಿದೆ.

ಗ್ಯಾರಂಟಿ ಫಲಾನುಭವಿಗಳಿಂದ ಮಾಹಿತಿ ಸಂಗ್ರಹ, ಗ್ಯಾರಂಟಿಗಳನ್ನು ಪಡೆಯದೆ ಇರುವವರಿಗೆ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾಹಿತಿ, ಹೊಸದಾಗಿ ನೋಂದಣಿ ಮಾಡಿಸಿಕೊಳ್ಳುವವರಿಗೆ ನೆರವು, ಸ್ವತಃ ಕಚೇರಿಗೆ ಕರೆಸಿ, ಗ್ಯಾರಂಟಿ ಯೋಜನೆಗಳ ನೋಂದಣಿ ಮಾಡಿಸುವ ಪ್ರಕ್ರಿಯೆಯನ್ನು ಈ ತಂಡ ಮಾಡುತ್ತಿದೆ. ಇವೆಲ್ಲ ನಿರ್ವಹಣೆಗಾಗಿ ಪದ್ಮನಾಭ ನಗರದಲ್ಲಿ ಪ್ರಮೋದ್ ಅವರು ಒಂದು ಕಚೇರಿಯನ್ನೇ ತೆರೆದಿದ್ದಾರೆ.

ಈ ಕಚೇರಿಯಲ್ಲಿ ಸದಾ ನಾಲ್ಕೈದು ಸಿಬ್ಬಂದಿ ಕೆಲಸ ಮಾಡುತ್ತಿದ್ದು, ಗ್ಯಾರಂಟಿಗಳ ಬಗ್ಗೆ ಕ್ಷೇತ್ರದ ಜನತೆಗಿರುವ ಯಾವುದೇ ಅನುಮಾನಗಳನ್ನು ಪರಿಹಾರ ಮಾಡಿಕೊಡುತ್ತಾರೆ. ಮಾಹಿತಿ ನೀಡುವುದು ಮತ್ತು ಹೊಸದಾಗಿ ಗ್ಯಾರಂಟಿ ಸ್ಕೀಂಗಳ ಕೆಲ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ನೆರವಾಗುತ್ತಾರೆ. ಅನಂತರ ಅವರಿಗೆ ಗ್ಯಾರಂಟಿ ಯೋಜನೆ ತಲುಪುವವರೆಗಿನ ಎಲ್ಲ ಹಂತಗಳನ್ನು ಪರಿಶೀಲಿಸಿ, ಫಲಾನುಭವಿಗಳಿಗೆ ಮಾಹಿತಿಯನ್ನು ನೀಡುತ್ತಾರೆ. ಇಂತಹ ಪ್ರಯತ್ನದ ಮೂಲದ ರಾಜ್ಯದಲ್ಲಿಯೇ ಗ್ಯಾರಂಟಿ ಯೋಜನೆಗೆ ಒಂದು ನಿಜವಾದ ಅರ್ಥ ನೀಡುವ ಪ್ರಯತ್ನವನ್ನು ಪ್ರಮೋದ್ ಶ್ರೀನಿವಾಸ್ ಮಾಡಿದ್ದಾರೆ ಎನ್ನಬಹುದು.

ವಾರಕ್ಕೆರಡು ಗ್ಯಾರಂಟಿ ಕಾರ್ಯಕ್ರಮ : ಪ್ರಮೋದ್ ಶ್ರೀನಿವಾಸ್ ಅವರು ಮನೆಬಾಗಿಲಿಗೆ ಗ್ಯಾರಂಟಿ ಸೇವೆ ನೀಡುವ ಉದ್ದೇಶದಿಂದ ಕ್ಷೇತ್ರದ ಪ್ರತಿ ವಾರ್ಡ್ನಲ್ಲಿ ವಾರಕ್ಕೆರೆಡು ಕಾರ್ಯಕ್ರಮ ಆಯೋಜನೆ ಮಾಡುತ್ತಿದ್ದಾರೆ. ಪ್ರತಿ ಭಾನುವಾರ ಗ್ಯಾರಂಟಿಗಳ ನೋಂದಣಿ ಕಾರ್ಯವನ್ನು ಆಯೋಜನೆ ಮಾಡುತ್ತಿದ್ದು, ಅಲ್ಲಿ ಸಲ್ಲಿಕೆಯಾಗುವ ಅರ್ಜಿಗಳನ್ನು ವಿಲೇವಾರಿ ಸರಕಾರದ ಗಮನಕ್ಕೆ ತಂದು, ಅವುಗಳನ್ನು ನೋಂಷಣಿ ಮಾಡಿಸುವ ಕಾರ್ಯ ನಡೆಯುತ್ತದೆ. ಅದೇ ರೀತಿ ಶನಿವಾರ ಗ್ಯಾರಂಟಿ ಪಡೆದ ಫಲಾನುಭವಿಗಳ ಜತೆಗೆ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಿ, ಜನರಿಂದ ಫೀಡ್ ಬ್ಯಾಕ್ ಪಡೆಯಲಾಗುತ್ತಿದೆ. ಅಲ್ಲಿ ಬರುವ ಆಕ್ಷೇಪಣೆಗಳನ್ನು ಸರಿಪಡಿಸಿ, ಅವುಗಳನ್ನು ಜಾರಿಗೊಳಿಸುವ ಪ್ರಯತ್ನವನ್ನು ಕೂಡ ಪ್ರಮೋದ್ ನೇತೃತ್ವದ ತಂಡ ಮಾಡುತ್ತಿದೆ.

16 ವಾರಗಳ ಸರಣಿ ಕಾರ್ಯಕ್ರಮ: ಪ್ರತಿ ವಾರ್ಡ್ನಲ್ಲಿ ಎರಡು ವಾರದಂತೆ ಎಂಟು ವಾರ್ಡ್ ವ್ಯಾಪ್ತಿಯಲ್ಲಿ ೧೬ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ, ಫಲಾನುಭವಿಗಳನ್ನು ಗುರುತಿಸುವ ಮತ್ತು ಅವರ ಸಮಸ್ಯೆಗಳನ್ನು ಆಲಿಸುವ ಕೆಲಸ ಮಾಡಲಾಗುತ್ತಿದೆ. ಹೊಸಕೆರೆಹಳ್ಳಿ, ಪದ್ಮನಾಭನಗರ ವಾರ್ಡ್ಗಳಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಉಳಿದ ವಾರ್ಡ್ಗಳಲ್ಲಿ ಪ್ರತಿ ವಾರ ಕಾರ್ಯಕ್ರಮ ನಡೆಯಲಿದೆ. ಒಂದು ವಾರ್ಡ್ ವ್ಯಾಪ್ತಿಯ ನಾಲ್ಕು ಪ್ರಮುಖ ಸ್ಥಳಗಳಲ್ಲಿ ಅಂದರೆ, ಬಡವರು, ದಲಿತರು, ಅಲ್ಪಸಂಖ್ಯಾತರು ಮತ್ತು ಮಧ್ಯಮ ವರ್ಗದ ಜನರು ಹೆಚ್ಚಾಗಿರುವ ಸ್ಥಳಗಳಲ್ಲಿ ಕ್ಯಾಂಪ್ ನಡೆಸಿ, ಅಲ್ಲಿ ಅವರ ಸಮಸ್ಯೆಗಳನ್ನು ಕೇಳಲಾಗುತ್ತದೆ.

ಗ್ಯಾರಂಟಿಗಳಿಗೆ ಬಲ ಬರುವುದೇ ಫಲಾನುಭವಿಗಳಿಂದ: ರಾಜ್ಯ ಸರಕಾರ ಗ್ಯಾರಂಟಿ ಯೋಜನೆಗಳ ಜಾರಿಗೆ ನಿರ್ಧರಿಸಿ, ಐದು ಯೋಜನೆಗಳನ್ನು ಈಗಾಗಲೇ ಜಾರಿ ಮಾಡಿದೆ. ಆದರೆ, ಈ ಯೋಜನೆಗಳಲ್ಲಿ ಕೆಲವು ಯೋಜನೆಗಳನ್ನು ಹೊರತುಪಡಿಸಿ, ಉಳಿದ ಯೋಜನೆಗಳು ಯಾರಿಗೆ ತಲುಪುತ್ತಿವೆ ಎಂಬ ಬಗ್ಗೆ ಅಧಿಕೃತ ಮಾಹಿತಿ ಸಿಗುವುದಿಲ್ಲ. ಶಕ್ತಿ ಯೋಜನೆ ಎಲ್ಲ ಮಹಿಳೆಯರಿಗೆ ಸಿಗುತ್ತಿದ್ದರೆ, ಗೃಹಲಕ್ಷಿö್ಮ ಯೋಜನೆಗೆ ಅರ್ಜಿ ಹಾಕಿಕೊಂಡವರಿಗಷ್ಟೇ ಸಿಗುತ್ತಿದೆ. ಅರ್ಜಿ ಹಾಕಲು ಗೊತ್ತಿಲ್ಲದ ಅದೆಷ್ಟೋ ಜನರಿದ್ದಾರೆ. ಇಂತಹ ಪ್ರಯತ್ನ ಅವರಿಗೆಲ್ಲ ಯೋಜನೆಯ ಫಲ ಸಿಗುವಂತೆ ಮಾಡುತ್ತಿದೆ.

ರಾಜ್ಯಕ್ಕೆ ಪದ್ಮನಾಭ ನಗರವೇ ಮಾಡೆಲ್ : ರಾಜ್ಯಾದ್ಯಂತ ಗ್ಯಾರಂಟಿ ಫಲಾನುಭವಿಗಳು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರಿಗೆಲ್ಲ ಅಲ್ಲಿನ ಸ್ಥಳೀಯ ನಾಯಕರು, ಗ್ಯಾರಂಟಿ ಸಮಿತಿಗಳ ಅಧ್ಯಕ್ಷರು ಇಂತಹದ್ದೇ ಕ್ರಮಗಳನ್ನು ತೆಗೆದುಕೊಂಡಿದ್ದೇ ಆದರೆ, ರಾಜ್ಯಾದ್ಯಂತ ಗ್ಯಾರಂಟಿ ಫಲಾನುಭವಿಗಳಿಗೆ ಅನುಕೂಲವಾಗುತ್ತದೆ. ಆ ನಿಟ್ಟಿನಲ್ಲಿ ಎಲ್ಲ ನಾಯಕರು, ಅಧ್ಯಕ್ಷರನ್ನು ಪದ್ಮನಾಭನಗರವನ್ನು ಮಾಡೆಲ್ ಆಗಿಟ್ಟುಕೊಂಡು ಗ್ಯಾರಂಟಿ ಅನಿಷ್ಠಾನ ಮಾಡಬಹುದು.

ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್: ವಾರ್ಡ್ ವ್ಯಾಪ್ತಿಯಲ್ಲಿ ಗ್ಯಾರಂಟಿ ಫಲಾನುಭವಿಗಳ ಜತೆಗೆ ನಡೆಸುತ್ತಿರುವ ಸಂವಾದ, ನೋಂದಣಿ ಕಾರ್ಯಕ್ರಮಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಗ್ಯಾರಂಟಿ ಫಲಾನುಭವಿಗಳಿಗೆ ಸರಕಾರ ಅಥವಾ ಪಕ್ಷದ ನಾಯಕರು ಹೇಗೆ ಕೆಲಸ ಮಾಡಬೇಕು ಎಂಬುದಕ್ಕೆ ಪ್ರಮೋದ್ ಶ್ರೀನಿವಾಸ್ ಅವರ ಕಾರ್ಯವನ್ನು ಉಲ್ಲೇಖಿಸಿ, ಅನೇಕ ಸಾಮಾಜಿಕ ಜಾಲತಾಣಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಸರಕಾರಕ್ಕೆ ಮತ್ತು ಸ್ಥಳೀಯ ನಾಯಕರಿಗೆ ಪ್ರಮೋದ್ ಅವರ ಉದಾಹರಣೆ ಕೊಟ್ಟು, ಪದ್ಮನಾಭ ನಗರ ಮಾಡೆಲ್ ಅನುಕರಿಸುವಂತೆ ಸಲಹೆ ನೀಡುತ್ತಿದ್ದಾರೆ. ಹೀಗಾಗಿ, ರಾಜ್ಯಾದ್ಯಂತ ಪ್ರಮೋದ್ ಶ್ರೀನಿವಾಸ್ ಅವರ ಗ್ಯಾರಂಟಿ ಅನುಷ್ಠಾನ ಅಭಿಯಾನ ರಾಜ್ಯಕ್ಕೆ ಮಾಡೆಲ್ ಆಗುವ ನಿಟ್ಟಿನಲ್ಲಿ ಮುನ್ನಡೆಯುತ್ತಿದೆ.

ಗ್ಯಾರಂಟಿ ಅನುಷ್ಠಾನ ಕಚೇರಿ ಉದ್ಘಾಟನೆ: ಈ ನಡುವೆ ಪ್ರಮೋದ್ ಶ್ರೀನಿವಾಸ್ ಅವರು ಗ್ಯಾರಂಟಿ ಅನುಷ್ಠಾನ ಸಮಿತಿಯ ಕಚೇರಿಯ ಉದ್ಘಾಟನೆ ಕಾರ್ಯಕ್ರಮವನ್ನು ಆಗಸ್ಟ್ 14 ರಂದು ಹಮ್ಮಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್, ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿ, ಮಾಜಿ ಸಂಸದರಾದ ಡಿ.ಕೆ.ಸುರೇಶ್, ಮಾಜಿ ಶಾಸಕಿ ಸೌಮ್ಯಾ ರೆಡ್ಡಿ ಸೇರಿದಂತೆ ಬೆಂಗಳೂರು ನಗರದ ಅನೇಕ ಕಾಂಗ್ರೆಸ್ ನಾಯಕರು ಭಾಗವಹಿಸಲಿದ್ದಾರೆ. ಪದ್ಮನಾಭ ನಗರದಲ್ಲಿ ಗ್ಯಾರಂಟಿ ಅನುಷ್ಠಾನಕ್ಕೆ ಒಂದು ಕಚೇರಿ ತೆರಯಲಿದ್ದು, ಅಲ್ಲಿ ಸದಾ ಕಾಲ ಫಲಾನುಭವಿಗಳಿಗೆ ಸೇವೆ ಒದಗಿಸುವ ಉದ್ದೇಶವನ್ನು ಹೊಂದಲಾಗಿದೆ.


Share It

You cannot copy content of this page