ಕ್ರೀಡೆ ಸುದ್ದಿ

ಪಾಕಿಸ್ತಾನ- ಭಾರತ ಪಂದ್ಯ:ಭಾರತದ ಸಾಧಾರಣ ಮೊತ್ತ

Share It


ನ್ಯೂಯಾರ್ಕ್: ಪಾಕಿಸ್ತಾನ ವಿರುದ್ಧದ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತದ ಬ್ಯಾಟರ್ ಗಳು ಕಳಪೆ ಪ್ರದರ್ಶನ ತೋರಿದ್ದು 119 ರನ್ ಗಳ ಸಾಧಾರಣ ಗುರಿಯನ್ನು ನೀಡಿದೆ.

ಮೊದಲು ಬ್ಯಾಟ್ ಮಾಡಿದ ಭಾರತಕ್ಕೆ ಮೊದಲ ಓವರ್ ಸಿಕ್ಸರ್ ಮೂಲಕ ರೋಹಿತ್ ಭರ್ಜರಿ ಆರಂಭದ ಮುನ್ಸೂಚನೆ ನೀಡಿದರು. ಆದರೆ, ಮೊದಲ ಓವರ್ ಮುಗಿಯುತ್ತಿದ್ದಂತೆ ಮಳೆ ಆರಂಭವಾದ್ದರಿಂದ ಸುಮಾರು ಒಂದು ಗಂಟೆಗಳ ಕಾಲ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು.

ನಂತರ ಪಂದ್ಯ ಆರಂಭ ಆಗುತ್ತಿದ್ದಂತೆ ಮೊದಲ ಬಾಲ್ ನಲ್ಲೇ ಬೌಂಡರಿ ಸಿಡಿಸಿ ಮತ್ತೊಮ್ಮೆ ಭರ್ಜರಿ ಆರಂಭ ನೀಡಿದರು. ಆದರೆ, ಮರು ಎಸೆತದಲ್ಲೇ ವಿಕೆಟ್ ಒಪ್ಪಿಸಿ ಹೊರನಡೆದರು. ಅವರ ಹಿಂದೆಯೇ ರೋಹಿತ್ ಶರ್ಮಾ ಕೂಡ ಔಟಾಗಿ ಪೆವಿಲಿಯನ್ ಸೇರಿದರು.

ನಂತರ ಕ್ರೀಸಿಗೆ ಬಂದ ರಿಷಬ್ ಪಂತ್ ಮತ್ತು ಅಕ್ಷರ್ ಪಟೇಲ್ ಒಂದಷ್ಟು ಪ್ರತಿರೋಧ ತೋರಿದರು. ಅಕ್ಷರ್ ಪಟೇಲ್20 ರನ್ ಗಳಿಸಿದರೆ, ರಿಷಭ್ ಪಂತ್42 ರನ್ ಗಳಿಸಿ ಔಟಾದರು. ಆದರೆ ನಂತರ ಬಂದ ಯಾವ ಬ್ಯಾಟರ್ ಕೂಡ ಎರಡಂಕಿ ಗಡಿ ದಾಟಲಿಲ್ಲ.

ಅಂತಿಮವಾಗಿ ಹರ್ಷದೀಪ್ ರನ್ ಔಟ್ ಮಾಡುವ ಮೂಲಕ ಇನ್ನು ಒಂದು ಓವರ್ ಬಾಕಿ ಇರುವಂತೆಯೇ ಭಾರತ ತಂಡ 119 ರನ್ ಗೆ ಆಲೌಟ್ ಆಯಿತು.


Share It

You cannot copy content of this page