ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸುವ ಹೋರಾಟಕ್ಕೆ ಮತ್ತೇ ಚಾಲನೆ ನೀಡಲಿದ್ದು, ರಾಜ್ಯಾದ್ಯಂತ ಪತ್ರ ಚಳುವಳಿ ನಡೆಸಲು ಹೋರಾಟ ಸಮಿತಿ ತೀರ್ಮಾನಿಸಿದೆ.
2 ಎ ಮೀಸಲಾತಿಗಾಗಿ ವಿವಿಧ ರೀತಿಯ ಪ್ರತಿಭಟನೆಗಳನ್ನು ನಡೆಲಾಗುತ್ತಿದೆ. ಈ ನಡುವೆ ವಿಭಿನ್ನ ಪ್ರತಿಭಟನೆ ಸಜ್ಜಾಗಿರುವ ಹೋರಾಟ ಸಮಿತಿ, ನಾಳೆಯಿಂದ ಪತ್ರ ಚಳವಳಿ ನಡೆಸಲು ತೀರ್ಮಾನಿಸಿದೆ.
ಶಾಸಕ ವಿನಯ್ ಕಲಕರ್ಣಿ ಮನೆಯಿಂದ ಆರಂಭ ಚಳವಳಿಯನ್ನು ಆರಂಭಿಸಲು ತೀರ್ಮಾನಿಸಿದ್ದು, 20 ಶಾಸಕರ ಮನೆಗಳಿಗೆ ಹೋರಾಟಗಾರರು ತೆರಳಿ, ಅವರಿಗೆ ಮನವಿ ಮಾಡಿಕೊಳ್ಳಲಿದ್ದಾರೆ. ಮುಂಬರುವ ವಿಧಾನ ಸಭೆ ಅಧಿವೇಶನದಲ್ಲಿ ಸಾಮಾಜಿಕ ನ್ಯಾಯದ ಪರ ದನಿಎತ್ತಲು ಮನವಿ ಮಾಡಿಕೊಳ್ಳಲಾಗುತ್ತದೆ.
ಪಂಚಮಸಾಲಿ 2 ಎ ಮೀಸಲಾತಿ ಹೋರಾಟದ ನೇತೃತ್ವ ವಹಿಸಿಕೊಂಡಿರುವ ಕೂಡಲ ಸಂಗಮದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆಯಲಿದೆ. ಮುಂದೆ ಮತ್ತಷ್ಟು ತೀವ್ರ ಹೋರಾಟ ನಡೆಸಲು ಸಮಿತಿ ಸಜ್ಜಾಗಿದೆ.