ಬೆಂಗಳೂರು: 2024 ರ ಟಿ 20 ವಿಶ್ವ ಕಪ್ ಗೆಲ್ಲುವಲ್ಲಿ ಹಾರ್ದಿಕ್ ಪಾಂಡ್ಯ ಕೂಡ ಪ್ರಮುಖ ಪಾತ್ರವಹಿಸಿದ್ದರು. ವಿಶ್ವ ಕಪ್ ನಲ್ಲಿ ಇವರ ಅದ್ಬುತ ಆಲ್ ರೌಂಡಿಗ್ ಪ್ರದರ್ಶನದಿಂದ ಜಗತ್ತಿನ ನಂಬರ್ ಒನ್ ಟಿ 20 ಆಲ್ ರೌಂಡರ್ ಆಗಿ ಹೊರಹೊಮ್ಮಿದರು. ನಂತರ ವಿಶ್ವ ಕಪ್ ನೊಂದಿಗೆ ಭಾರತಕ್ಕೆ ಬಂದ ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾದೊಂದಿಗೆ ವಿಜಯೋತ್ಸವದ ಪೆರೇಡ್ ನಲ್ಲಿ ಭಾಗವಹಿಸಿದ್ದರು.
ಬಳಿಕ ಮನೆಗೆ ತೆರಳಿ ತನ್ನ ಮಗನಾದ ಅಗಸ್ತ್ಯನೊಂದಿಗೆ ಗೆಲುವನ್ನು ಸಂಭ್ರಮಿಸಿದ ಫೋಟೋಗಳನ್ನು ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ” ನಾನು #1! ನಿನಗಾಗಿ ಏನೂ ಬೇಕಾದರೂ ಮಾಡಬಲ್ಲೆ. (My #1! Everything i do, i do for you )ಎಂದು ಬರೆದುಕೊಂಡಿದ್ದಾರೆ.
ಫೋಟೋದಲ್ಲಿ ಹಾರ್ದಿಕ್ ಪಾಂಡ್ಯರ ಹೆಂಡತಿ ನತಾಸಾ ಸ್ಟಾಂಕೋವಿಕ್ ಎಲ್ಲೂ ಕಾಣಿಸಿಕೊಂಡಿಲ್ಲದಿರುವ ಕಾರಣದಿಂದ ಇವರಿಬ್ಬರ ಡೈವರ್ಸ್ ವದಂತಿಗಳು ನಿಜವೆಂದು ಇದನ್ನು ಕಂಡ ಅವರ ಅಭಿಮಾನಿಗಳು ಹೇಳುತಿದ್ದಾರೆ.
ಈ ಪೋಸ್ಟ್ ನ ಕಮೆಂಟ್ಸ್ ಬಾಕ್ಸ್ ನಲ್ಲಿ ಹಾರ್ದಿಕ್ ಪಾಂಡ್ಯರ ಅಭಿಮಾನಿಗಳು ನತಾಸಾ ಸ್ಟಾಂಕೋವಿಕ್ಎಲ್ಲಿ ಎಂದು ಪ್ರಶ್ನಿಸಿದ್ದಾರೆ. ಕೆಲವೊಬ್ಬರು ನತಾಸಾ ವಿರುದ್ಧ ಕಮೆಂಟ್ಸ್ ಮಾಡಿದ್ದಾರೆ. ಇನ್ನೂ ಕೆಲವರು ಹಾರ್ದಿಕ್ ಪಾಂಡ್ಯಗೆ ಸಾಂತ್ವನ ಹೇಳಿದ್ದಾರೆ.