ಮಕ್ಕಳಿಂದ ಹಿಡಿದು ಎಲ್ಲಾ ವಯೋಮಾನದವರು ಇಷ್ಟಪಟ್ಟು ಸೇವಿಸುವ ಪಾನಿಪುರಿ ಎಷ್ಟು ಅಪಾಯಕಾರಿ ಎಂಬುದನ್ನು ರಾಜ್ಯದ ಆಹಾರ ಸುರಕ್ಷತಾ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.
ಆಹಾರ ಸುರಕ್ಷತಾ ಅಧಿಕಾರಿಗಳು ಸಂಗ್ರಹಿಸಿದ ಪಾನಿಪುರಿ ಮಾದರಿಗಳಲ್ಲಿ ಶೇಕಡಾ 22 ರಷ್ಟು ಆರೋಗ್ಯ ಮಾದರಿ ಹೊಂದಿಲ್ಲ ಎಂದು ತಿಳಿದುಬಂದಿದೆ.
ರಾಜ್ಯಾದ್ಯಂತ ಒಟ್ಟು 260 ಪಾನಿಪುರಿ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಅದರಲ್ಲಿ 41 ಮಾದರಿಗಳು ಕೃತಕ ಬಣ್ಣ ಮತ್ತು ಕ್ಯಾನ್ಸರ್ ಉಂಟುಮಾಡುವ ಕಾರ್ಸಿನೋಜೆನಿಕ್ ಏಜೆಂಟ್ ಗಳು ಪತ್ತೆಯಾಗಿವೆ ಎಂಬ ಆಘಾತಕಾರಿ ರಹಸ್ಯ ಬಟಾಬಯಲಾಗಿದೆ.
ಆದ್ದರಿಂದ ಇನ್ನು ಮುಂದೆ ಬೀದಿ ಬದಿಯ ತಳ್ಳುಗಾಡಿಗಳು ಸೇರಿದಂತೆ ಎಲ್ಲಾ ಕಡೆ ಸಿಗುವ ಪಾನಿಪುರಿ ತಿನ್ನುವ ಮೊದಲು ಈ ವರದಿಯನ್ನು ನೆನಪಿಸಿಕೊಂಡು ಪಾನಿಪುರಿ ತಿನ್ನುವುದನ್ನು ತಾತ್ಕಾಲಿಕವಾಗಿ ತ್ಯಜಿಸಿಬಿಡಿ.