ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರದಿಂದ ಅನಾವರಣಗೊಂಡಿದ್ದ 33 ಅಡಿಯ ಪರಶುರಾಮನ ‘ಕಂಚಿನ’ ಪ್ರತಿಮೆಯ ಪ್ರಕರಣ ಹೀಗ ಮತ್ತಷ್ಟು ಚುರುಕುಗೊಂಡಿದೆ.
2023 ರ ಜನವರಿಯಲ್ಲಿ ಕಾರ್ಕಳದಲ್ಲಿ ಥೀಮ್ ಪಾರ್ಕ್ನ ಭಾಗವಾಗಿ 2,4 ಕೋಟಿ ರೂಪಾಯಿ ವೆಚ್ಚದ 15 ಟನ್ ಪರಶುರಾಮ ಪ್ರತಿಮೆಯನ್ನು ಉದ್ಘಾಟಿಸಲಾಯಿತು. ಪ್ರತಿಮೆಯನ್ನು ಕಂಚಿನಿಂದ ಮಾಡಲಾಗಿಲ್ಲ ಎಂಬ ಆರೋಪದ ನಡುವೆ ಅಲ್ಲಿದ್ದ ಕಂಚಿನ ಪ್ರತಿಮೆ ‘ನಾಪತ್ತೆಯಾಗಿತ್ತು.
ಅದರೆ ಈಗ ಪೊಲೀಸರು ಪ್ರತಿಮೆಯ ಬಿಡಿಭಾಗಗಳನ್ನು ಪತ್ತೆ ಹಚ್ಚಿದ್ದಾರೆ. ಪ್ರತಿಮೆಯ ಬಿಡಿಭಾಗಗಳನ್ನು ಬೆಂಗಳೂರಿನ ಕ್ರಿಶ್ ಆರ್ಟ್ಗೆ ತಂದು ಪರಿಶೀಲನೆ ನೆಡೆಸಿದ್ದಾರೆ. ಸುಮಾರು 1,25 ಕೋಟಿ ಹಣ ಪಡೆದು ನಕಲಿ ಪ್ರತಿಮೆಯನ್ನು ನೀಡಿದ್ದಾರೆ ಎಂದು ಪೊಲೀಸರು ಖಚಿತಪಡಿಸಿದ್ದು. ಪ್ರಕರಣದ ತನಿಖೆಯನ್ನು ಮುಂದುವರೆಸಿದ್ದಾರೆ.
ಕಳೆದ ವರ್ಷದ ವಿಧಾನಸಭೆ ಚುನಾವಣೆಗೆ ಮುನ್ನ ಉಡುಪಿ ಜಿಲ್ಲೆಯ ಥೀಮ್ ಪಾರ್ಕ್ನಲ್ಲಿ ಅನಾವರಣಗೊಂಡ ಭಗವಾನ್ ವಿಷ್ಣುವಿನ ಅವತಾರ ಎಂದು ನಂಬಲಾದ 33 ಅಡಿ ‘ಕಂಚಿನ’ ಪರಶುರಾಮನ ಪ್ರತಿಮೆ ನಕಲಿಯಾಗಿದೆ ಎಂದು ಅಲ್ಲಿನ ಸಾರ್ವಜನಿಕರು, ಅಧಿಕಾರಿಗಳು, ಮತ್ತು ಕಾಂಗ್ರೆಸ್ ಕಾರ್ಯಕರ್ತರ ಬಲವಾಗಿ ಆರೋಪಿಸಿದ್ದರು.

