Paris Olympics: ಕ್ವಾಟರ್ ಫೈನಲ್ಸ್ ನಲ್ಲಿ ಮುಗ್ಗರಿಸಿದ “ಸಾತ್ವಿಕ್-ಚಿರಾಗ್ “ಜೋಡಿ!!
ಪ್ಯಾರಿಸ್: ಈ ಭಾರಿಯ “ಪ್ಯಾರಿಸ್ ಒಲಂಪಿಕ್ಸ್” ನಲ್ಲಿ ಬ್ಯಾಟ್ಮಿಂಟನ್ ಪುರುಷರ ವಿಭಾಗದಲ್ಲಿ ಭಾಗವಹಿಸಿದ್ದ ಭಾರತೀಯ “ಸಾತ್ವಿಕ್-ಚಿರಾಗ್ ಶೆಟ್ಟಿ” ಜೋಡಿಗೆ ಕ್ವಾಟರ್ ಫೈನಲ್ ನಲ್ಲಿ ಮುಗ್ಗರಿಸಿದ್ದಾರೆ.
ಈ ವಿಭಾಗದಲ್ಲಿ ಪದಕವನ್ನು ಗಳಿಸಬಹುದೆಂಬ ನಿರೀಕ್ಷೆ ಇತ್ತು. ಆದರೆ ಕ್ವಾಟರ್ ಫೈನಲ್ ನಲ್ಲಿ ಮುಗ್ಗರಿಸಿರುವುದು ಭಾರತೀಯರಲ್ಲಿ ಬೇಸರವನ್ನು ತರಿಸಿದೆ. ಗುರುವಾರ ನಡೆದ ಕ್ವಾಟರ್ ಫೈನಲ್ಸ್ ಪಂದ್ಯದಲ್ಲಿ “ಮಲೇಶಿಯಾ ತಂಡದ” ವಿರುದ್ಧ 13-21 21-14, 21-16 ಅಂತರದಲ್ಲಿ ಸೋಲುವ ಮೂಲಕ ನಿರಾಶೆ ಮೂಡಿಸಿದ್ದಾರೆ.
ಮೊದಲನೇ ಗೇಮ್ ನಲ್ಲಿ ಉತ್ತಮ ಪೈಪೋಟಿ ನೀಡಿದ್ದರು ಕೊನೆಗೆ ಕೈ ಬಿಟ್ಟರು . ಮೊದಲ ಗೇಮ್ ನಲ್ಲಿ 13-21 ಅಂತರದಲ್ಲಿ ಸೋಲು ಒಪ್ಪಿಕೊಳ್ಳಬೇಕಾಯಿತು. 2 ನೆಯ ಗೇಮ್ ನಲ್ಲಿ ”ಚಿಯಾ-ವೂಯಿ” ಯ ಹೊಡೆತದಿಂದ 21-14 ಅಂತರದಿಂದ ಗೆದ್ದು 1-1 ಸಮಬಲ ಕಾಯ್ದುಕೊಂಡರು. ಕೊನೆಯ ಗೇಮ್ ನಲ್ಲಿ ಗೆಲ್ಲುವ ಅವಕಾಶವಿದ್ದರೂ ಸಹ ಗೆಲ್ಲುವಲ್ಲಿ ಭಾರತೀಯ ಆಟಗಾರರು ವಿಫಲವಾದರು.


