ಸಿನಿಮಾ ಸುದ್ದಿ

ಪಾರು ಧಾರವಾಹಿ ಖ್ಯಾತಿಯ ನಟ ಶ್ರೀಧರ್ ನಿಧನ

Share It

ಬೆಂಗಳೂರು: ಕಳೆದ ಅನೇಕ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ನಟ ಶ್ರೀಧರ್ ನಾಯ್ಕ್‌ ಸೋಮವಾರ ರಾತ್ರಿ ನಿಧನರಾಗಿದ್ದಾರೆ.

ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಶ್ರೀಧರ್ ನಾಯ್ಕ್‌ ಅವರನ್ನು ಬ್ಯಾಪ್ಟಿನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನರಾಗಿದ್ದು, ಚಿತ್ರ ರಂಗ ಹಾಗೂ ಕುಟುಂಬಸ್ಥರು ಕಂಬನಿ ಮಿಡಿದಿದ್ದಾರೆ.

ಪಾರು ಧಾರವಾಹಿಯ ಮೂಲಕ ಶ್ರೀಧರ್ ನಾಯ್ಕ್‌ ಹೆಸರು ಗಳಿಸಿದ್ದರು. ಅವರು ಸುಮಾರು 40ಕ್ಕೂ ಹೆಚ್ಚು ಧಾರವಾಹಿಗಳಲ್ಲಿ ನಟನೆ ಮಾಡಿದ್ದು, ಕೆಲವು ಸಿನಿಮಾಗಳಲ್ಲಿ ನಟಿಸಿದ್ದರು.


Share It

You cannot copy content of this page