ಪಾವಗಡ ತಾಲೂಕಿನ ರಾಪ್ಟೆ ಗ್ರಾಮ ಪಂಚಾಯತಿಯ ಪಿಡಿಒ ಹನುಮಂತರಾಜು ರವರನ್ನು ಜಿಲ್ಲಾ ಪಂಚಾಯಿತಿ ಸಿ.ಇ.ಒ.ಜಿ.ಪ್ರಭು ಅಮಾನತ್ ಮಾಡಿ ಆದೇಶಿಸಿದ್ದಾರೆ,
ಸರ್ಕಾರದ ಎಲ್ಲಾ ಜಯಂತಿಗಳಿಗೆ ಗೈರುಹಾಜರಿ , ಮತ್ತು ಸಾರ್ವಜನಿಕರ ಫೋನ್ ಕರೆಗಳನ್ನು ಸ್ವೀಕರಿಸದೆ ಇರುವುದು, ನರೇಗ ಯೋಜನೆಯಲ್ಲಿ ಕೂಲಿಕಾರ್ಮಿಕರಿಗೆ ವೇತನ ನೀಡದೆ ಇರುವುದು, ಖಾತೆ ಗಳಿಗೆ ಸಾರ್ವಜನಿಕರಿಂದ ಹಣಕ್ಕಾಗಿ ಬೇಡಿಕೆ ಇಡುವುದು, ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಸದಸ್ಯರಿಗೆ ತಿಳಿಸದೆ ಹೆಚ್ಚುವರಿಯಾಗಿ ಕ್ರಿಯಾಯೋಜನೆ ತಯಾರಿಸಿರುವುದು,
ಮತ್ತಿತರ ಅಂಶಗಳ ಆಧಾರದ ಮೇಲೆ ಪಾವಗಡ ತಾಲೂಕು ಕಾರ್ಯ ನಿರ್ವಾಣಾಕಾರಿಯಾದ ಜಾನಕಿ ರಾಮ ರವರ ಶಿಫಾರಸ್ ಮೇರೆಗೆ ಜಿಲ್ಲಾ ಪಂಚಾಯಿತಿ ಸಿ.ಇ.ಒ. ಜಿ.ಪ್ರಭು ರವರು ಜೂನ್ 21ರಂದು ಅಮಾನತು ಮಾಡಿ ಆದೇಶಿಸಿದ್ದಾರೆ.
ವರದಿ: ಇಮ್ರಾನ್ ಉಲ್ಲಾ. ಪಾವಗಡ
