ಬೆಂಗಳೂರು: ಅಗಮ್ಯ ಸಿನಿಮಾದ ಮೂಲಕ ಪವಿತ್ರಾಗೌಡ ಸಿನಿ ಜರ್ನಿ ಆರಂಭಿಸಿದ್ದು, ಆಗಲೇ ಅವರ ರೇಂಜ್ ಭಲೇ ಜಾಸ್ತಿಯಿತ್ತು ಎಂದು ಮೊದಲ ಸಿನಿಮಾ ನಿರ್ದೇಶಕ ಉಮೇಶ್ ತಿಳಿಸಿದ್ದಾರೆ.
ಪವಿತ್ರಾ ಗೌಡಗೆ ಉತ್ತಮ ಅಭಿನಯ ಗೊತ್ತೇ ಇರಲಿಲ್ಲ, ಆದರೆ, ಅವರ ಮನೆ ಪರಿಸ್ಥಿತಿ ಸರಿಯಿಲ್ಲ, ಮಗು ಇದ್ದು, ಗಂಡ ಇಲ್ಲ ಎಂದು ನನಗೆ ಗೊತ್ತಿರುವವರೊಬ್ಬರು ಶಿಫಾರಸು ಮಾಡಿದ್ದರು. ಕೋಣನಕುಂಟೆಯಲ್ಲಿ ಬಾಡಿಗೆ ಮನೆಯಲ್ಲಿದ್ದರು. ಆದರೆ, ನಟನೆಯ ಮೇಲೆ ಯಾವುದೇ ಆಸಕ್ತಿಯಿರಲಿಲ್ಲ ಎಂದು ತಿಳಿಸಿದ್ದರು.
ಮೊದಲ ಸಿನಿಮಾಗೆ ೨೦ ಸಾವಿರ ರು. ಸಂಭಾವನೆ ಕೊಡಲಾಗಿತ್ತು. ಬಹಳ ವೇಗವಾಗಿ ದೊಡ್ಡದೊಡ್ಡ ನಿರ್ದೇಶಕರನ್ನು ಪರಿಚಯ ಮಾಡಿಕೊಳ್ಳುತ್ತಿದ್ದಳು. ಬೇಗನೆ ನಿರ್ಮಾಪಕರನ್ನು ಪರಿಚಯ ಮಾಡಿಕೊಳ್ಳುತ್ತಿದ್ದರು. ಹೀಗೆ ಆಕೆಯ ಸಿನಿ ಜರ್ನಿ ಮುಂದುವರಿಯಿತು ಎಂದು ಅವರು ಹೇಳಿದ್ದಾರೆ.
ಅಗಮ್ಯ ಹೊರತುಪಡಿಸಿ, ಒಂದೆರೆಡು ಸಿನಿಮಾಗಳಲ್ಲಷ್ಟೇ ಪವಿತ್ರಾ ಗೌಡ ಅಭಿನಯಿಸಿದ್ದಾರೆ. ಅವರು ಮೊದಲ ಸಿನಿಮಾದಲ್ಲೇ ಆಸಕ್ತಿಯಿಲ್ಲದೆ ಅಭಿನಯ ಮಾಡುತ್ತಿದ್ದರು ಎಂದು ಮೊದಲ ಚಿತ್ರ ನಿರ್ದೇಶಿಸಿದ್ದ ನಿರ್ದೇಶಕ ಉಮೇಶ್ ತಿಳಿಸಿದ್ದಾರೆ. ಆದರೆ, ಕೆಲ ತಮಿಳು, ತೆಲುವು ಧಾರವಾಹಿಗಳಲ್ಲಿ ಕೆಲಸ ಮಾಡಿ, ಅಂತಿಮವಾಗಿ ದರ್ಶನ್ ಅವರ ಪರಿಚಯಕ್ಕೆ ಬಂದರು ಎನ್ನಲಾಗಿದೆ.

