ಬೆಂಗಳೂರು: ಜನರಲ್ಲಿನ ಮಾನವೀಯತೆ ಮರೆಯಾಗುತ್ತಿದೆ ಎಂಬುದಕ್ಕೆ ಮತ್ತೊಂದು ಸ್ಪಷ್ಟ ಉದಾಹರಣೆ ಬಿಹಾರದ ಸೀತಾಮಹಿರ್ ಜಿಲ್ಲೆಯಲ್ಲಿ ನಡೆದಿದೆ.
ಏಳನೇ ತರಗತಿಯ ವಿದ್ಯಾರ್ಥಿ ರಿತೇಶ್ ಕುಮಾರ್ ಎಂಬ ಬಾಲಕನಿಗೆ ಟ್ಯೂಷನ್‌ಗೆ ತೆರಳುವಾಗ ಮೀನಿನ ವಾಹನ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬಾಲಕ ಸ್ಥಳದಲ್ಲಿಯೇ ರಕ್ತಸ್ರಾವದಿಂದ ಮೃತಪಟ್ಟಿದ್ದಾನೆ. ಡಿಕ್ಕಿ ಹೊಡೆದ ರಭಸಕ್ಕೆ ಮೀನಿನ ವಾಹನದಲ್ಲಿದ್ದ ಮೀನುಗಳೆಲ್ಲ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ.
ಅಕ್ಕಪಕ್ಕದ ಜನರೆಲ್ಲ ಸ್ಥಳಕ್ಕೆ ಆಗಮಿಸಿ, ಗಾಯಗೊಂಡಿದ್ದ ಬಾಲಕನ ರಕ್ಷಣೆ ಮಾಡುವ ಬದಲಿಗೆ ಚೆಲ್ಲಿದ್ದ ಮೀನುಗಳನ್ನು ಹೆಕ್ಕಲು ತೊಡಗಿದ್ದಾರೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸುವರೆರೆಗೆ ಬಾಲಕ ನರಳುತ್ತಿದ್ದರೂ, ಮೀನು ಹೆಕ್ಕುವಲ್ಲಿಯೇ ಬ್ಯುಸಿಯಾಗಿದ್ದರು.
ಪೊಲೀಸರು ಬಂದು ಗುಂಪನ್ನು ಚದುರಿಸಿ, ಅಪಘಾತ ಸ್ಥಳಕ್ಕೆ ಬರುವವೇಳೆಗೆ ಆತ ರಕ್ತಸ್ರಾವದಿಂದ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಶವವನ್ನು ಪರನೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

